ಬೆಂಗಳೂರು: ಆರ್.ಆರ್.ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಆದಾಯ ಒಂದು ವರ್ಷದಲ್ಲಿ ಹೆಚ್ಚಾಗಿದೆ. 40 ಕೋಟಿ ರೂಪಾಯಿ ಹೆಚ್ಚಾಗಿದೆ..ಇದು ಎಲ್ಲಿಂದ ಬಂತು? ಇದು ಆಪರೇಷನ್ ಲೋಟಸ್ ಇಂದ ಬಂದ ಹಣವೇ? ನನ್ನ ಮೇಲೆ ಯಡಿಯೂರಪ್ಪ ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ಹಾಗೆಯೇ, ಮುನಿರತ್ನ ವಿರುದ್ಧವೂ ಇಡಿ ಐಟಿಗೆ ಯಾಕೆ ಕೊಡಬಾರದು? ಕೂಡಲೇ ತನಿಖೆಗೆ ಅನುಮತಿ ಕೊಡ್ಲಿ ಎಂದು ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
ಮಾಸ್ಕ್ ಒಳಗಡೆ ಒಂದು ಸಾವಿರ ದುಡ್ಡು ಕೊಡ್ತಿದ್ದಾರೆ. ಇದರ ವಿಡಿಯೋ ಸಹ ಸಿಕ್ಕಿದೆ. ಅದನ್ನ ಮಾಧ್ಯಮಗಳಿಗೂ ಸಹ ಕೊಟ್ಟಿದ್ದೇವೆ. ಅಭ್ಯರ್ಥಿಯನ್ನ ಚುನಾವಣೆಯಲ್ಲಿ ಅನರ್ಹ ಮಾಡಿ ಅಂತಾ ಮನವಿ ಮಾಡ್ತೀವಿ. ಚುನಾವಣೆ ನಡೆದರೆ ಹೇಗೂ ಸೋಲುತ್ತಾರೆ. ಅದಕ್ಕೂ ಮೊದಲೇ ಅನರ್ಹ ಮಾಡ್ಲಿ. ಕಣದಲ್ಲಿ ಇರುವ ಇತರೆ ಅಭ್ಯರ್ಥಿಗಳು ಚುನಾವಣೆ ಫೇಸ್ ಮಾಡ್ಲಿ ಎಂದೂ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ಈ ಮಧ್ಯೆ, ಆರ್.ಆರ್.ನಗರದಲ್ಲಿ ಬಿಜೆಪಿ ಅಭ್ಯರ್ಥಿ 34 ಸಾವಿರ ಸೆಟ್ ಆಫ್ ಬಾಕ್ಸ್ ಕೊಟ್ಟಿದ್ದೇನೆ ಅಂತ ಒಪ್ಪಿಕೊಂಡಿದ್ದಾರೆ. ಇದನ್ನ ಮುನಿರತ್ನ ಅವರೇ ಹೇಳಿದ್ದಾರೆ. ಕೊಟ್ಟಿರುವ ಹೇಳಿಕೆಯೂ ದಾಖಲಾಗಿದೆ. ಇದಕ್ಕೆ 3 ಕೋಟಿ, 40 ಲಕ್ಷ ರೂಪಾಯಿ ವೆಚ್ಚ ಆಗಿದೆ. ಒಂದೇ ತಿಂಗಳಿಗೆ 150 ರೂಪಾಯಿ ಚಾರ್ಜ್ ಮಾಡಿದ್ರೆ 51 ಲಕ್ಷ ಆಗುತ್ತೆ. ಇದು ಚುನಾವಣಾ ವೆಚ್ಚವನ್ನ ದಾಟಿದೆ. ಜನಪ್ರತಿನಿಧಿ ಕಾಯಿದೆ ಪ್ರಕಾರ ಇದು ತಪ್ಪಾಗುತ್ತೆ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೂಡಲೇ ಅಭ್ಯರ್ಥಿಯನ್ನ ಅನರ್ಹ ಮಾಡಬೇಕು ಅಂತಾ ಒತ್ತಾಯ ಮಾಡ್ತೀನಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.