IPL 2020: ಪಂಜಾಬ್ ಪ್ಲೇ ಆಫ್ ಕನಸಿಗೆ ಚೆನ್ನೈ ಕೊಳ್ಳಿ ಇಟ್ಟ ದೃಶ್ಯಾವಳಿಗಳು..
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಮುಖಾಮುಖಿಯಲ್ಲಿ ಚೆನ್ನೈ ತಂಡ 9 ವಿಕೆಟ್ಗಳ ಭರ್ಜರಿ ಜಯ ಸಾದಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಓಪನರ್ ಋತುರಾಜ್ ಗಾಯಕ್ವಾಡ್ ಸತತ ಮೂರನೇ ಪಂದ್ಯದಲ್ಲೂ ಅರ್ಧಶತಕ ಬಾರಿಸಿದ್ರು. ಈ ಸೀಸನ್ನ ಆರಂಭದಲ್ಲಿ ನಮ್ಮ ಯುವ ಆಟಗಾರರು ಕಳಪೆ ಪ್ರದರ್ಶನ ನೀಡಿದರು. ಆದ್ರೆ ಲೀಗ್ನ ಕೊನೆ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಹೀಗಾಗಿ 2021ರ ಐಪಿಎಲ್ನಲ್ಲಿ ಕಮ್ಬ್ಯಾಕ್ ಮಾಡೋದಾಗಿ ಧೋನಿ ತಿಳಿಸಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ನಾವು […]
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಮುಖಾಮುಖಿಯಲ್ಲಿ ಚೆನ್ನೈ ತಂಡ 9 ವಿಕೆಟ್ಗಳ ಭರ್ಜರಿ ಜಯ ಸಾದಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಓಪನರ್ ಋತುರಾಜ್ ಗಾಯಕ್ವಾಡ್ ಸತತ ಮೂರನೇ ಪಂದ್ಯದಲ್ಲೂ ಅರ್ಧಶತಕ ಬಾರಿಸಿದ್ರು.
ಈ ಸೀಸನ್ನ ಆರಂಭದಲ್ಲಿ ನಮ್ಮ ಯುವ ಆಟಗಾರರು ಕಳಪೆ ಪ್ರದರ್ಶನ ನೀಡಿದರು. ಆದ್ರೆ ಲೀಗ್ನ ಕೊನೆ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಹೀಗಾಗಿ 2021ರ ಐಪಿಎಲ್ನಲ್ಲಿ ಕಮ್ಬ್ಯಾಕ್ ಮಾಡೋದಾಗಿ ಧೋನಿ ತಿಳಿಸಿದ್ದಾರೆ.
ಚೆನ್ನೈ ವಿರುದ್ಧದ ಪಂದ್ಯದಲ್ಲಿ ನಾವು 180 ರಿಂದ 190 ರಷ್ಟು ಟಾರ್ಗೆಟ್ ನೀಡೋದಕ್ಕೆ ಮುಂದಾಗಿದ್ವಿ. ಆದ್ರೆ ಅತೀಯಾದ ಒತ್ತಡದಿಂದ ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡೋದಕ್ಕೆ ಸಾಧ್ಯವಾಗ್ಲಿಲ್ಲ ಎಂದು ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ಗೆ ನಾಯಕ ಕೆ.ಎಲ್.ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ 48 ರನ್ಗಳ ಡೀಸೆಂಟ್ ಓಪನಿಂಗ್ ನೀಡಿದ್ರು.
ಪಂಜಾಬ್ ಪರ ಏಕಾಂಗಿ ಹೋರಾಟ ಮಾಡಿದ ದೀಪಕ್ ಹೂಡಾ, 30 ಎಸೆತಗಳಲ್ಲಿ 62 ರನ್ಗಳಿಸಿ ಪಂಜಾಬ್ ಪೈಪೋಟಿ ಮೊತ್ತ ಕಲೆಹಾಕೋದಕ್ಕೆ ಕಾರಣವಾದ್ರು.
ಚೆನ್ನೈ ಪರ ಲುಂಗಿ ಎನ್ಗಿಡಿ 3 ವಿಕೆಟ್ ಪಡೆದು ಮಿಂಚಿದ್ರು.
ಚೆನ್ನೈ ಪರ 49 ಬಾಲ್ನಲ್ಲಿ 6 ಬೌಂಡರಿ 1 ಸಿಕ್ಸರ್ ಸಿಡಿಸಿ ಅಜೇಯ 62 ರನ್ಗಳಿಸಿದ ರುತುರಾಜ್ ಗಾಯಕ್ವಾಡ್ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನರಾದ್ರು.