AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿ.9ರ ನಂತ್ರ ಯಡಿಯೂರಪ್ಪ ರಾಜೀನಾಮೆ ಕೊಡಲೇಬೇಕು -ಸಿದ್ದರಾಮಯ್ಯ

ಬೆಂಗಳೂರು: ಉಪಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲೂ ಬಿಜೆಪಿ ಸೋಲುತ್ತೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತೆ. ಡಿಸೆಂಬರ್ 9ರ ನಂತ್ರ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಕೊಡಲೇಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಶಾಸಕರನ್ನ ಪಕ್ಷಾಂತರ ಮಾಡಿದ್ದೇ ಬಿಎಸ್​ವೈ ಸಾಧನೆ: ನನ್ನ ಅವಧಿಯಲ್ಲಿ ಅನೇಕ ಯೋಜನೆಗಳನ್ನು ಮಾಡಿದ್ದೇನೆ. ಶಾಸಕರನ್ನ ಪಕ್ಷಾಂತರ ಮಾಡಿದ್ದು ಹಾಗು ವಿಪಕ್ಷ ಶಾಸಕರ ಅನುದಾನ ಕಡಿತ ಮಾಡಿದ್ದೇ 4 ತಿಂಗಳ ಯಡಿಯೂರಪ್ಪ ಅವರ ಸಾಧನೆ. ಯಡಿಯೂರಪ್ಪ ಟಿಪ್ಪು ಜಯಂತಿ ನಿಲ್ಲಿಸಿದ್ದು ಅವರ ಸಾಧನೆ ಅಷ್ಟೆ ಎಂದು ಸಿದ್ದರಾಮಯ್ಯ […]

ಡಿ.9ರ ನಂತ್ರ ಯಡಿಯೂರಪ್ಪ ರಾಜೀನಾಮೆ ಕೊಡಲೇಬೇಕು -ಸಿದ್ದರಾಮಯ್ಯ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ
Follow us
ಸಾಧು ಶ್ರೀನಾಥ್​
|

Updated on:Dec 01, 2019 | 2:11 PM

ಬೆಂಗಳೂರು: ಉಪಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲೂ ಬಿಜೆಪಿ ಸೋಲುತ್ತೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತೆ. ಡಿಸೆಂಬರ್ 9ರ ನಂತ್ರ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಕೊಡಲೇಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಶಾಸಕರನ್ನ ಪಕ್ಷಾಂತರ ಮಾಡಿದ್ದೇ ಬಿಎಸ್​ವೈ ಸಾಧನೆ: ನನ್ನ ಅವಧಿಯಲ್ಲಿ ಅನೇಕ ಯೋಜನೆಗಳನ್ನು ಮಾಡಿದ್ದೇನೆ. ಶಾಸಕರನ್ನ ಪಕ್ಷಾಂತರ ಮಾಡಿದ್ದು ಹಾಗು ವಿಪಕ್ಷ ಶಾಸಕರ ಅನುದಾನ ಕಡಿತ ಮಾಡಿದ್ದೇ 4 ತಿಂಗಳ ಯಡಿಯೂರಪ್ಪ ಅವರ ಸಾಧನೆ. ಯಡಿಯೂರಪ್ಪ ಟಿಪ್ಪು ಜಯಂತಿ ನಿಲ್ಲಿಸಿದ್ದು ಅವರ ಸಾಧನೆ ಅಷ್ಟೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದಿರಾ ಕ್ಯಾಂಟೀನ್ ನಿಲ್ಲಿಸಿದ್ರೆ ಪ್ರತಿಭಟನೆ: ಬೆಂಗಳೂರಿಗೆ 10 ಸಾವಿರ ಕೋಟಿ ನಾನು ಕೊಟ್ಟಿದ್ದೆ. ಆದ್ರೆ ಯಡಿಯೂರಪ್ಪ ಏನು ಕೊಟ್ಟಿಲ್ಲ. ಅನ್ನಭಾಗ್ಯ, ಮಕ್ಕಳಿಗೆ ಹಾಲು, ಇಂದಿರಾ ಕ್ಯಾಂಟೀನ್, ಹಾಲಿಗೆ ಸಬ್ಸಿಡಿ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಒಂದು ವೇಳೆ ಇಂದಿರಾ ಕ್ಯಾಂಟೀನ್ ನಿಲ್ಲಿಸಿದ್ರೆ, ಅನ್ನ ಭಾಗ್ಯ ಅಕ್ಕಿ ಕಡಿಮೆ ಮಾಡಿದ್ರೆ ಹೋರಾಟ ಮಾಡ್ತೀನಿ ಎಂದು ಎಚ್ಚರಿಕೆ ನೀಡಿದ್ರು.

ದೇಶದಲ್ಲಿ ಜಿಡಿಪಿ ಕುಸಿಯುತ್ತಿದೆ: ಶ್ರೀಲಂಕಾ, ಬಾಂಗ್ಲಾದೇಶಕ್ಕಿಂತ ಜಿಡಿಪಿ ಕಡಿಮೆ ಆಗಿದೆ. ಯುವಕರು ಮೋದಿ ಮೋದಿ ಅಂದ್ರು. ಇವತ್ತು ಅವರಿಗೆ ಮೋದಿ ತಿರುಪತಿ ನಾಮ ಹಾಕಿದ್ರು. ಪಕೋಡ ಮಾರಿ ಅಂತಾರೆ. ಇಂತಹವರು ನಿಮಗೆ ಬೇಕಾ? ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published On - 2:10 pm, Sun, 1 December 19