Budget 2021: Union Budget ಮೊಬೈಲ್ ಆ್ಯಪ್​ನಲ್ಲಿ ಏನಿದೆ?

|

Updated on: Feb 01, 2021 | 10:31 AM

ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿರುವ ಈ ಆ್ಯಪ್ ಅಂಡ್ರಾಯ್ಡ್ ಮತ್ತು ಐಒಎಸ್​ನಲ್ಲಿ ಲಭ್ಯವಿದೆ. ಫೆಬ್ರುವರಿ 1 ರಂದು ಬಜೆಟ್ ಮಂಡನೆಯಾದ ನಂತರ ಎಲ್ಲ ಮಾಹಿತಿಗಳು ಕೇಂದ್ರ ಬಜೆಟ್ ಆ್ಯಪ್​ನಲ್ಲಿ ಲಭ್ಯವಾಗಲಿದೆ.

Budget 2021:  Union Budget ಮೊಬೈಲ್ ಆ್ಯಪ್​ನಲ್ಲಿ ಏನಿದೆ?
ಕೇಂದ್ರ ಬಜೆಟ್ ಆ್ಯಪ್
Follow us on

ದೆಹಲಿ:  ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದು ಇದೇ ಮೊದಲ ಬಾರಿ ಪೇಪರ್ ಲೆಸ್ ಬಜೆಟ್ ಮಂಡನೆ ಆಗಲಿದೆ. ಬಜೆಟ್ ಸಂಬಂಧಿತ ಎಲ್ಲ ಮಾಹಿತಿಗಳು ಜನರಿಗೆ ತಲುಪಿಸುವುದಕ್ಕಾಗಿ Union Budget Mobile App ಎಂಬ ಆ್ಯಪ್​ನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಆ್ಯಪ್​ನಲ್ಲಿ ಏನಿದೆ?
ಈ ಮೊಬೈಲ್ ಆ್ಯಪ್​ನಲ್ಲಿ ಇಲ್ಲಿವರೆಗಿನ 14 ಕೇಂದ್ರ ಬಜೆಟ್​ಗಳ ಪ್ರತಿ ಲಭ್ಯವಿರಲಿದೆ. ವಾರ್ಷಿಕ ಹಣಕಾಸು ಲೆಕ್ಕಪತ್ರ, ಬೇಡಿಕೆ ಮಾಹಿತಿ (ಡಿಮಾಂಡ್ ಫಾರ್ ಗ್ರಾಂಟ್ಸ್ – ಡಿಜಿ), ಆರ್ಥಿಕ ಮಸೂದೆ ಮೊದಲಾದ ದಾಖಲೆಗಳು ಇರಲಿವೆ.

ಬಳಕೆದಾರರು ಸುಲಭವಾಗಿ ಬಳಸಬಹುದಾದ ಸೆಟ್ಟಿಂಗ್ಸ್ ಇದರಲ್ಲಿದ್ದು, ಯಾವುದೇ ದಾಖಲೆಗಳನ್ನು ಡೌನ್​​ ಲೋಡ್ ಮಾಡಬಹುದು, ಮುದ್ರಣ ಮಾಡಬಹುದು, ಹುಡುಕಬಹುದು, ಜೂಮ್ ಇನ್ ಮತ್ತು ಜೂಮ್ ಔಟ್, ಬೈ ಡೆರೆಕ್ಷನಲ್ ಸ್ಕ್ರಾಲಿಂಗ್, ಅನುಕ್ರಮಣಿಕೆ ಮತ್ತು ಇತರ ಲಿಂಕ್​ಗಳೂ ಲಭ್ಯವಿದೆ.

ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿರುವ ಈ ಆ್ಯಪ್ ಅಂಡ್ರಾಯ್ಡ್ ಮತ್ತು ಐಒಎಸ್​ನಲ್ಲಿ ಲಭ್ಯವಿದೆ .

ಕೇಂದ್ರ ಬಜೆಟ್ ವೆಬ್ ಪೋರ್ಟಲ್ www.indiabudget.gov.in ನಲ್ಲಿ ಆ್ಯಪ್ ಡೌನ್​ಲೋಡ್ ಮಾಡಿಕೊಳ್ಳಬಹುದು. ಈ ಆ್ಯಪ್​ನ್ನು ಆರ್ಥಿಕ ವ್ಯವಹಾರಗಳ ಇಲಾಖೆಯ (ಡಿಇಎ) ಮಾರ್ಗದರ್ಶನದಲ್ಲಿ ನ್ಯಾಷನಲ್ ಇನ್ ಫೋರ್ಮೆಟಿಕ್ಸ್ ಸೆಂಟರ್ (ಎನ್ಐಸಿ) ಈ ಆ್ಯಪ್ ಅಭಿವೃದ್ಧಿಪಡಿಸಿದೆ.

ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣ ಮುಗಿದ ನಂತರ ಎಲ್ಲ ದಾಖಲೆಗಳು ಈ ಆ್ಯಪ್ ನಲ್ಲಿ ಸಿಗಲಿದೆ.

ಗೂಗಲ್ ಪ್ಲೇ ಸ್ಟೋರ್​ನಲ್ಲಿ Union Budget  ಎಂದು ಸರ್ಚ್ ಮಾಡಿ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬಹುದು.

ಬಜೆಟ್ ಆ್ಯಪ್

 

ಕೇಂದ್ರ ಬಜೆಟ್​ ಮಂಡನೆಗೆ ಇನ್ನೊಂದು ವಾರ ಬಾಕಿ; ಪೂರ್ವಭಾವಿಯಾಗಿ ನಡೆದ ಹಲ್ವಾ ಸಮಾರಂಭ, ಮೊಬೈಲ್ ಆ್ಯಪ್ ಉದ್ಘಾಟನೆ

 

Published On - 12:26 pm, Sun, 24 January 21