ಹೊತ್ತು ಗೊತ್ತಿಲ್ಲದೆ ನಿದ್ದೆ ಮಾಡುವುದು ಒಳ್ಳೆಯದಲ್ಲ; ಮಲಗುವ ವಿಧಾನವನ್ನು ಹೀಗೆ ರೂಪಿಸಿಕೊಳ್ಳಿ

ನಿದ್ದೆಗೊಂದು ಸರಿಯಾದ ಕಾಲ ಹೊಂದಿಸಿಕೊಳ್ಳುವುದು ಒಳ್ಳೆಯದು. ರಾತ್ರಿ ಎಷ್ಟು ಗಂಟೆಗೆ ಮಲಗಬೇಕು. ಬೆಳಗ್ಗೆ ಎಷ್ಟು ಹೊತ್ತಿಗೆ ಏಳಬೇಕು. ಒಟ್ಟು ಎಷ್ಟು ನಿದ್ದೆ ಬೇಕು ಎಂಬ ಬಗ್ಗೆ ತಿಳಿದು, ಅಳವಡಿಸಿಕೊಳ್ಳಬೇಕು. ಜೀವನಶೈಲಿ ಸರಿಯಾದ ರೀತಿಯಲ್ಲಿ ರೂಪಿಸಿಕೊಳ್ಳಬೇಕು.

ಹೊತ್ತು ಗೊತ್ತಿಲ್ಲದೆ ನಿದ್ದೆ ಮಾಡುವುದು ಒಳ್ಳೆಯದಲ್ಲ; ಮಲಗುವ ವಿಧಾನವನ್ನು ಹೀಗೆ ರೂಪಿಸಿಕೊಳ್ಳಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on:Apr 06, 2022 | 8:46 PM

ಯಾವಾಗ ಮಲಗಿದ್ರೂ ಆಗೆಲ್ಲಾ ನಿದ್ದೆ ಬರುತ್ತದೆಯೇ? ಹೌದು. ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಬಂತು ಅಂತ ಖುಷಿ ಪಡುತ್ತೀರಾ? ಅದು ತಪ್ಪು. ಅಷ್ಟೊಂದು ಮಲಗುವುದು, ನಿದ್ರೆ ಒಳ್ಳೆಯದಲ್ಲ. ಹೊತ್ತು ಗೊತ್ತು ಇಲ್ಲದೆ ಮಲಗುವುದು ತಪ್ಪು ಅನ್ನುತ್ತದೆ ಆಯುರ್ವೇದ. ಸಾಮಾನ್ಯವಾಗಿ ಹಲವರು ಮಧ್ಯಾಹ್ನದ ಹೊತ್ತಲ್ಲಿ ಮಲಗುತ್ತಾರೆ. ಅದನ್ನು ಕೂಡ ಆಯುರ್ವೇದ ತಪ್ಪು ಅನ್ನುತ್ತದೆ. ಯಾವಾಗ ಮಲಗಬೇಕು, ಯಾವಾಗ ಮಲಗಬಾರದು ಎಂಬ ಬಗ್ಗೆ ಒಂದಷ್ಟು ಮಾಹಿತಿಗಳು ಇಲ್ಲಿವೆ.

ದಿನಕ್ಕೆ ಎಷ್ಟು ಹೊತ್ತು ಮಲಗಬೇಕು? ಯಾವಾಗ ಏಳಬೇಕು? ಒಂದು ದಿನಕ್ಕೆ, ಆರೋಗ್ಯವಂತ ಜನರು ಏಳು ಗಂಟೆ ನಿದ್ರೆ ಮಾಡಿದರೆ ಸಾಕು ಅನ್ನುತ್ತಾರೆ ಆಯುರ್ವೇದ ತಜ್ಞರು. ಹಾಗೆಂದು ಹೊತ್ತಲ್ಲದ ಹೊತ್ತಲ್ಲಿ, ಏಳು ಗಂಟೆಯ ನಿದ್ರೆ ಸರಿಯಲ್ಲ. ರಾತ್ರಿ 10 ಗಂಟೆ ಮಲಗಲು ಪ್ರಶಸ್ತವಾದ ಸಮಯ. ಹಾಗಾದಾಗ, ಬೆಳಗ್ಗೆ 5ರಿಂದ 6 ಗಂಟೆಯ ಸಮಯಕ್ಕೆ ಏಳಬಹುದು. ಅಂದರೆ, 7 ಗಂಟೆಯ ನಿದ್ದೆ ಸಿಕ್ಕಂತಾಗುತ್ತದೆ. ಬೆಳಗ್ಗೆ 5ರಿಂದ 6 ಗಂಟೆಯ ಕಾಲ ಅಥವಾ ಸೂರ್ಯೋದಯ ಕಾಲವನ್ನು ಬ್ರಾಹ್ಮೀ ಮುಹೂರ್ತ ಎನ್ನುತ್ತಾರೆ. ಆ ಸಮಯಕ್ಕೆ ಏಳುವುದು ಸರಿಯಾದ ಕ್ರಮ. ಅದರಿಂದ, ನಮ್ಮಲ್ಲಿ ಸತ್ವ ಗುಣ ಹೆಚ್ಚುತ್ತದೆ. ಉಸಿರಾಟಕ್ಕೆ ಉತ್ತಮ ಆಮ್ಲಜನಕ ಲಭ್ಯವಾಗುತ್ತದೆ. ಹಾಗಾಗಿ, ನಮ್ಮ ಮೆದುಳು ಕೂಡ ಉತ್ಸಾಹಭರಿತವಾಗಿದ್ದು, ದಿನಪೂರ್ತಿ ಸಂತಸದಿಂದ ಇರಲು ಸಾಧ್ಯವಾಗುತ್ತದೆ.

ಮಧ್ಯಾಹ್ನದ ನಿದ್ರೆಗೆ ಕೆಲವು ಅವಕಾಶಗಳು ಹೀಗಿದೆ ಗ್ರೀಷ್ಮ ಋತು (ಬೇಸಿಗೆ ಕಾಲ) ಒಂದನ್ನು ಹೊರತುಪಡಿಸಿ ಬೇರೆ ಕಾಲದಲ್ಲಿ ಮಧ್ಯಾಹ್ನದ ‌ಹೊತ್ತು ಮಲಗಬಾರದು. ಬೇಸಿಗೆಯಲ್ಲಿ ನಮ್ಮ ದೇಹವು ಕೊಂಚ ಹೆಚ್ಚು ಬಳಲಿರುತ್ತದೆ. ಸುಸ್ತು ಜಾಸ್ತಿ ಇರುತ್ತದೆ. ಹಾಗಾಗಿ ಅದರ ನಿವಾರಣೆಗಾಗಿ ಬೇಸಿಗೆಯಲ್ಲಿ ಮಧ್ಯಾಹ್ನದ ನಿದ್ರೆ ಮಾಡಬಹುದು. ಇತರ ಸಮಯದಲ್ಲಿ ಒಳ್ಳೆಯದಲ್ಲ.

ಜೊತೆಗೆ, ರಾತ್ರಿ ನಿದ್ದೆ ಮಾಡದೆ ಇದ್ದರೆ ಮಧ್ಯಾಹ್ನ ಮಲಗಬಹುದು. ರಾತ್ರಿ ಎಷ್ಟು ಹೊತ್ತು ನಿದ್ದೆ ಬಿಟ್ಟಿರುತ್ತೇವೋ ಅದರ ಅರ್ಧದಷ್ಟು ಹೊತ್ತು ಮಧ್ಯಾಹ್ನದ ನಿದ್ರೆ ಸಾಕು. ಉದಾಹರಣೆಗೆ ರಾತ್ರಿ ನಾಲ್ಕು ಗಂಟೆ ನಿದ್ರೆ ಕೆಟ್ಟಿದ್ದರೆ, ಮಧ್ಯಾಹ್ನದ ಎರಡು ಗಂಟೆ ನಿದ್ರೆ ಮಾಡಬಹುದು. ಹೊಟ್ಟೆ ಸರಿಯಿಲ್ಲ, ವಾಂತಿ, ಭೇದಿ, ಅನಾರೋಗ್ಯ ಇಂತಹ ಸಮಸ್ಯೆಗಳಾದರೂ ಮಧ್ಯಾಹ್ನ ಮಲಗಬಹುದು.

ಹಾಗಂತ ನೀವು ಮಧ್ಯಾಹ್ನ ಮಲಗಲೇಬೇಕು ಅಂತಿದ್ದರೆ ಕೂತು ಮಲಗಬಹುದು! ಅದೊಂದು ವಿಶೇಷ ರಿಯಾಯಿತಿ. ಬೇಸಿಗೆ ಅಲ್ಲದೆ, ಬೇರೆ ಕಾಲದ ಮಧ್ಯಾಹ್ನಗಳಲ್ಲೂ ಮಲಗಲೇಬೇಕು ಅಂತಾದರೆ ಕೂತು ನಿದ್ರಿಸಬಹುದು. ಕುರ್ಚಿಯಲ್ಲೋ, ನೆಲದ ಮೇಲೋ ಸ್ವಲ್ಪ ಹೊತ್ತು ಕೂತು ಮಲಗುವುದರಿಂದ ತೊಂದರೆ ಇಲ್ಲ ಎನ್ನುತ್ತಾರೆ ಆಯುರ್ವೇದ ವೈದ್ಯರು.

ಹೊತ್ತಲ್ಲದ ಹೊತ್ತಿನಲ್ಲಿ ಮಲಗಿದರೆ ಏನಾಗುತ್ತದೆ? ನಿಗದಿತ ಕಾಲ ಹೊರತುಪಡಿಸಿ, ಯಾವಾಗ ಬೇಕೆಂದರೆ ಆವಾಗ ಮಲಗುವ ಅಭ್ಯಾಸ ಬೆಳೆಸಿಕೊಂಡರೆ, ಶರೀರದಲ್ಲಿ ಪಿತ್ತ, ಕಫ ವರ್ಧನೆ ಆಗುವುದಲ್ಲದೆ ವಾತ, ರಕ್ತ, ಚರ್ಮ ಸಂಬಂಧಿತ ಖಾಯಿಲೆಗಳು, ಹೃದಯ ರೋಗಗಳು ಬರಬಹುದು. ಥೈರಾಯ್ಡ್ ಸಮಸ್ಯೆ ಮತ್ತು ಒಬಿಸಿಟಿ ಆಗುವುದಕ್ಕೆಲ್ಲಾ ನಿದ್ರೆಯಲ್ಲಿನ ಅಸಮರ್ಪಕತೆಯೂ ಒಂದು ಕಾರಣ. ಸಾಯಂ ಸಂಧಿ, 5ರಿಂದ 7 ಗಂಟೆಯ ಹೊತ್ತಿಗೆ ಅಥವಾ ಸೂರ್ಯಾಸ್ತಮಾನದ ಕಾಲದಲ್ಲಿ, ಸೂರ್ಯನಿಂದ ಬಹುಪಾಲು ಶಕ್ತಿ ಬರುತ್ತದೆ. ಹಾಗಾಗಿ, ಆ ಸಮಯದಲ್ಲಿ ಮಲಗಿ ನಿದ್ರಿಸುವುದು ಕೂಡ ಒಳ್ಳೆಯದಲ್ಲ.

ಹೀಗೆ ನಿದ್ದೆಗೊಂದು ಸರಿಯಾದ ಕಾಲ ಹೊಂದಿಸಿಕೊಳ್ಳುವುದು ಒಳ್ಳೆಯದು. ರಾತ್ರಿ ಎಷ್ಟು ಗಂಟೆಗೆ ಮಲಗಬೇಕು. ಬೆಳಗ್ಗೆ ಎಷ್ಟು ಹೊತ್ತಿಗೆ ಏಳಬೇಕು. ಹಾಗೂ ಒಟ್ಟು ಎಷ್ಟು ನಿದ್ದೆ ಬೇಕು ಎಂಬ ಬಗ್ಗೆ ತಿಳಿದು, ಅಳವಡಿಸಿಕೊಂಡು ಜೀವನಶೈಲಿಯನ್ನು ಸರಿಯಾದ ರೀತಿಯಲ್ಲಿ ರೂಪಿಸಿಕೊಳ್ಳಬಹುದು.

ಬೇಸಿಗೆಯಲ್ಲಿ ಬೆವರುವ ಮುನ್ನ ಈ ಅಂಶಗಳು ನೆನಪಿರಲಿ.. ನಿಮ್ಮ ಆಹಾರ ಪದ್ಧತಿ ಕೊಂಚ ಬದಲಾಗಲಿ

Published On - 12:20 pm, Sun, 24 January 21

Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ