ದೇವನಹಳ್ಳಿ ಬಳಿ ಗಣಿಗಾರಿಕೆ: ಸ್ಥಳೀಯರಲ್ಲಿ ಮನೆ ಮಾಡಿದ ಆತಂಕ, ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ತೈಲಗೆರೆ ಬಳಿ ಗಣಿಗಾರಿಕೆ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಏರ್‌ಪೋರ್ಟ್ ಬಳಿಯೇ ಗಣಿಗಾರಿಕೆ ನಡೆಸುತ್ತಿದ್ದಾರೆ ಆದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲವೆಂದು ಜಿಲ್ಲಾಡಳಿತದ ವಿರುದ್ಧ ಸ್ಥಳೀಯರು, ರೈತರ ಆಕ್ರೋಶ ಹೊರ ಹಾಕಿದ್ದಾರೆ.

  • TV9 Web Team
  • Published On - 11:31 AM, 24 Jan 2021
ದೇವನಹಳ್ಳಿ ಬಳಿ ನಡೆಯುತ್ತಿರುವ ಗಣಿಗಾರಿಕೆ

ದೇವನಹಳ್ಳಿ: ಹುಣಸೋಡಿನಲ್ಲಿ ಜಿಲೆಟಿನ್ ಸ್ಫೋಟ ಬೆನ್ನಲ್ಲೆ ದೇವನಹಳ್ಳಿ ಸುತ್ತಮುತ್ತಲಿನ ಜನರಿಗೂ ಭಯ ಶುರುವಾಗಿದೆ. ಜಿಲೆಟಿನ್ ಬಳಿಸಿ ಗಣಿಗಾರಿಕೆ ಮಾಡ್ತಿದ್ದಾರೆ ಅಂತ ಈ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ತೈಲಗೆರೆ ಬಳಿ ಗಣಿಗಾರಿಕೆ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಏರ್‌ಪೋರ್ಟ್ ಬಳಿಯೇ ಗಣಿಗಾರಿಕೆ ನಡೆಸುತ್ತಿದ್ದಾರೆ ಆದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲವೆಂದು ಜಿಲ್ಲಾಡಳಿತದ ವಿರುದ್ಧ ಸ್ಥಳೀಯರು, ರೈತರ ಆಕ್ರೋಶ ಹೊರ ಹಾಕಿದ್ದಾರೆ.

ದೇವನಹಳ್ಳಿ ಬಳಿ ಸಾಕಷ್ಟು ವರ್ಷಗಳಿಂದ ಜಿಲೆಟಿನ್ ಬಳಸಿ ಕಲ್ಲು ಗಣಿಗಾರಿಕೆ ಮಾಡಲಾಗುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಕ್ರಷರ್​ನಲ್ಲಿದ್ದ 25 ಲಕ್ಷದಷ್ಟು ಜಿಲೆಟಿನ್ ತುಂಬಿದ್ದ ಲಾರಿಯನ್ನು ಸೀಜ್ ಮಾಡಲಾಗಿತ್ತು. ಜಿಲೆಟಿನ್ ಸೀಜ್ ಆದ್ರು ಯಥಾವತ್ತಾಗಿ ಮತ್ತೆ ಮೈ‌ನಿಂಗ್ ಮುಂದುವರೆದಿದೆ. ಮತ್ತೊಮ್ಮೆ ಹುಣಸೋಡಿನಲ್ಲಾದ ಘಟನೆ ಮರುಕಳಿಸುವ ಮುನ್ನ ಎಚ್ಚೆತ್ತುಕೊಳ್ಳುವಂತೆ ರೈತರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಅಲ್ಲದೆ ಗಣಿಗಾರಿಕೆಯಿಂದ ಬೆಳೆಗಳನ್ನು ಬೆಳೆಯಲಾಗದೆ ಪರದಾಡ್ತಿದ್ದೇವೆ ಅಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಭವನ ಮತ್ತು ಕೆಂಪೇಗೌಡ ಏರ್ಪೋಟ್ ಸಮೀಪದಲ್ಲೇ ಈ ಗಣಿಗಾರಿಕೆ ನಡೆಯುತ್ತಿದ್ರು ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೋಳ್ತಿಲ್ಲವಂತೆ.

ಗಣಿಗಾರಿಕೆ ಅಬ್ಬರ: ಗಣಿ ಇಲಾಖೆ ಹಾಗೂ ಜಿಲ್ಲಾಡಳಿತ ಡೋಂಟ್ ಕೇರ್