ಟ್ಯಾಕ್ಸ್ ಕಟ್ಟಿಲ್ಲ ಅಂತ ಸೀಜ್ ಮಾಡಿದ್ದ ಬಸ್ಸನ್ನೇ ಕದ್ದ ಖದೀಮರು..

|

Updated on: Jan 29, 2021 | 9:06 AM

ಜನವರಿ 18 ರಂದು ಬೆಂಗಳೂರಿನ ನಾಗವಾರ ಬಳಿ ರೋಡ್ ಟ್ಯಾಕ್ಸ್ ಕಟ್ಟದೇ ಅಕ್ರಮವಾಗಿ ಓಡಾಡುತ್ತಿದ್ದ ಕೆಎ 22 ಬಿ 266 ನಂಬರ್​ನ ಬಸ್ಸನ್ನು RTO ಅಧಿಕಾರಿಗಳು ಸೀಜ್ ಮಾಡಿದ್ದರು. ಖದೀಮರು ರಾತ್ರೋರಾತ್ರಿ ಕದ್ದು ಪರಾರಿಯಾಗಿದ್ದಾರೆ. RTO ಕಚೇರಿ ಬಳಿಯಿಂದಲೇ ಬಸ್ ಕಳ್ಳತನ ಮಾಡಿದ್ದಾರೆ.

ಟ್ಯಾಕ್ಸ್ ಕಟ್ಟಿಲ್ಲ ಅಂತ ಸೀಜ್ ಮಾಡಿದ್ದ ಬಸ್ಸನ್ನೇ ಕದ್ದ ಖದೀಮರು..
Follow us on

ದೇವನಹಳ್ಳಿ: ಟ್ಯಾಕ್ಸ್ ಕಟ್ಟದಿದದಕ್ಕೆ ಸೀಜ್ ಮಾಡಿದ್ದ ಬಸ್ಸನ್ನೇ ಖದೀಮರು ಕದ್ದ ಘಟನೆ ನಗರದಲ್ಲಿ ನಡೆದಿದೆ. ಯಲಹಂಕದ RTO ಕಚೇರಿ ಬಳಿ ನಿಲ್ಲಿಸಿದ್ದ ಬಸ್ಸನ್ನು ಖದೀಮರು ರಾತ್ರೋರಾತ್ರಿ ಕದ್ದಿದ್ದಾರೆ.

ಜನವರಿ 18 ರಂದು ಬೆಂಗಳೂರಿನ ನಾಗವಾರ ಬಳಿ ರೋಡ್ ಟ್ಯಾಕ್ಸ್ ಕಟ್ಟದೇ ಅಕ್ರಮವಾಗಿ ಓಡಾಡುತ್ತಿದ್ದ ಕೆಎ 22 ಬಿ 266 ನಂಬರ್​ನ ಬಸ್ಸನ್ನು RTO ಅಧಿಕಾರಿಗಳು ಸೀಜ್ ಮಾಡಿದ್ದರು. ಬಳಿಕ ಅದನ್ನು ಯಲಹಂಕ RTO ಕಚೇರಿ ಬಳಿ ತಂದು ನಿಲ್ಲಿಸಲಾಗಿತ್ತು ಆದ್ರೆ ಇದೇ ತಿಂಗಳ 23 ರಂದು ಬೆಳಗ್ಗಿನ ಜಾವ ಬಸ್ ಕಾಣೆಯಾಗಿದೆ. ಖದೀಮರು ರಾತ್ರೋರಾತ್ರಿ ಕದ್ದು ಪರಾರಿಯಾಗಿದ್ದಾರೆ. RTO ಕಚೇರಿ ಬಳಿಯಿಂದಲೇ ಬಸ್ ಕಳ್ಳತನ ಮಾಡಿದ್ದಾರೆ.

ಅಮರನಾಥ್ ಎಂಬ ಮಾಲೀಕರಿಗೆ ಸೇರಿದ ಬಸ್ ಇದಾಗಿದ್ದು, ಇರ್ಫಾನ್ ಎಂಬುವವರಿಗೆ ಗುತ್ತಿಗೆಗೆ ನೀಡಲಾಗಿತ್ತು. ರೋಡ್ ಟ್ಯಾಕ್ಸ್ ಕಟ್ಟದೇ ಮೂರು ಲಕ್ಷ ಬಾಕಿ ಉಳಿಸಿಕೊಂಡಿದ್ದ ಕಾರಣ ಬಸ್ಸನ್ನು ಸೀಜ್ ಮಾಡಲಾಗಿತ್ತು. ಆದ್ರೆ ರಾತ್ರೋರಾತ್ರಿ ಬಸ್ ಕಳ್ಳತನವಾಗಿದ್ದು RTO ಅಧಿಕಾರಿಗಳು ಕಂಗಾಲಾಗಿದ್ದಾರೆ. ಬಸ್ ನಾಪತ್ತೆ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಐಷಾರಾಮಿ ಮನೆಗಳಲ್ಲಿಯೇ ಕಳ್ಳತನ.. ಆ್ಯಪಲ್ ತಿಂದು ಪೊಲೀಸರಿಗೆ ಸಿಕ್ಕಿಬಿದ್ದ ಬನಶಂಕರಿ ಮೂಲದ ಕಳ್ಳರು!