ಒಳಚರಂಡಿ ಕಾಮಗಾರಿ ವೇಳೆ ಡೈನಮೈಟ್ ಬಳಕೆ, ನಿವಾಸಿಗಳಿಗೆ ಹೆಚ್ಚಿದ ಆತಂಕ, ಎಲ್ಲಿ?

| Updated By:

Updated on: Jul 27, 2020 | 8:49 PM

ಬೆಂಗಳೂರು: ಒಳಚರಂಡಿಗೆ ಪೈಪ್ ಅಳವಡಿಸುವ ಕೆಲಸ ಕೈಗೊಂಡಿರುವ BWSSB ಸಿಬ್ಬಂದಿ ಕಾಮಗಾರಿ ವೇಳೆ ಡೈನಮೈಟ್​ ಬಳಸಿರುವ ಘಟನೆ ಆರ್ ಆರ್ ನಗರದ  ಹಲಗೇವಡೇರಹಳ್ಳಿಯಲ್ಲಿ ಕಂಡುಬಂದಿದೆ. ಇದರಿಂದ, ಅಕ್ಕಪಕ್ಕದ ನಿವಾಸಿಗಳಿಗೆ ಆತಂಕ ಮನೆಮಾಡಿದೆ. ಒಳಚರಂಡಿಗೆ ಪೈಪ್ ಅಳವಡಿಸಲು ರಸ್ತೆ ಅಗೆಯುತ್ತಿದ್ದ ಕಾರ್ಮಿಕರಿಗೆ ಕಲ್ಲುಬಂಡೆಗಳು ಎದುರಾಗಿದೆ. ಹಾಗಾಗಿ, ಇದನ್ನು ತೆರವುಗೊಳಿಸಲು ಡೈನಮೈಟ್ ಬಳಸಲು ಮುಂದಾಗಿದ್ದಾರೆ. ಈ ವೇಳೆ ಡೈನಮೈಟ್ ಬ್ಲಾಸ್ಟ್‌ನಿಂದ ಅಕ್ಕಪಕ್ಕದ ಮನೆ ಗೋಡೆಗಳು ಅಲುಗಾಡಿದ್ದು ಇದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಹೀಗಾಗಿ ಕಾಮಗಾರಿ ವೇಳೆ ಡೈನಮೈಟ್ ಬಳಕೆಯನ್ನು ಕಡಿಮೆ ಮಾಡಬೇಕೆಂದು […]

ಒಳಚರಂಡಿ ಕಾಮಗಾರಿ ವೇಳೆ ಡೈನಮೈಟ್ ಬಳಕೆ, ನಿವಾಸಿಗಳಿಗೆ ಹೆಚ್ಚಿದ ಆತಂಕ, ಎಲ್ಲಿ?
Follow us on

ಬೆಂಗಳೂರು: ಒಳಚರಂಡಿಗೆ ಪೈಪ್ ಅಳವಡಿಸುವ ಕೆಲಸ ಕೈಗೊಂಡಿರುವ BWSSB ಸಿಬ್ಬಂದಿ ಕಾಮಗಾರಿ ವೇಳೆ ಡೈನಮೈಟ್​ ಬಳಸಿರುವ ಘಟನೆ ಆರ್ ಆರ್ ನಗರದ  ಹಲಗೇವಡೇರಹಳ್ಳಿಯಲ್ಲಿ ಕಂಡುಬಂದಿದೆ. ಇದರಿಂದ, ಅಕ್ಕಪಕ್ಕದ ನಿವಾಸಿಗಳಿಗೆ ಆತಂಕ ಮನೆಮಾಡಿದೆ.

ಒಳಚರಂಡಿಗೆ ಪೈಪ್ ಅಳವಡಿಸಲು ರಸ್ತೆ ಅಗೆಯುತ್ತಿದ್ದ ಕಾರ್ಮಿಕರಿಗೆ ಕಲ್ಲುಬಂಡೆಗಳು ಎದುರಾಗಿದೆ. ಹಾಗಾಗಿ, ಇದನ್ನು ತೆರವುಗೊಳಿಸಲು ಡೈನಮೈಟ್ ಬಳಸಲು ಮುಂದಾಗಿದ್ದಾರೆ. ಈ ವೇಳೆ ಡೈನಮೈಟ್ ಬ್ಲಾಸ್ಟ್‌ನಿಂದ ಅಕ್ಕಪಕ್ಕದ ಮನೆ ಗೋಡೆಗಳು ಅಲುಗಾಡಿದ್ದು ಇದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಹೀಗಾಗಿ ಕಾಮಗಾರಿ ವೇಳೆ ಡೈನಮೈಟ್ ಬಳಕೆಯನ್ನು ಕಡಿಮೆ ಮಾಡಬೇಕೆಂದು ನಿವಾಸಿಗಳು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

Published On - 5:50 pm, Sun, 26 July 20