ಫುಲ್​ ಟೈಟ್​ ಆಗಿ ಆಸ್ಪತ್ರೆಯಲ್ಲಿ ಗಲಾಟೆ, ನಂತರ ಮಕ್ಕಳನ್ನ ಮರೆತು ದಂಪತಿಯ ಜೋರು ನಿದ್ದೆ!

ಫುಲ್​ ಟೈಟ್​ ಆಗಿ ಆಸ್ಪತ್ರೆಯಲ್ಲಿ ಗಲಾಟೆ, ನಂತರ ಮಕ್ಕಳನ್ನ ಮರೆತು ದಂಪತಿಯ ಜೋರು ನಿದ್ದೆ!

ಬೆಂಗಳೂರು: ಜ್ವರ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿದ ದಂಪತಿ, ನಂತರ ಕಂಠಪೂರ್ತಿ ಕುಡಿದು ಆಸ್ಪತ್ರೆ ಸಿಬ್ಬಂದಿಯೊಂದಿಗೆ ಜಗಳವಾಡಿರುವ ಘಟನೆ ನಗರದ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ. ಮಕ್ಕಳಿಗೆ ಸೂಕ್ತ ಚಿಕಿತ್ಸೆ ಕೊಡಿಸೋದು ಪೋಷಕರ ಆದ್ಯ ಕರ್ತವ್ಯ. ಆದರೆ, ಈ ದಂಪತಿ ಕುಡಿದ ಮತ್ತಿನಲ್ಲಿ ಆಸ್ಪತ್ರೆ ಸಿಬ್ಬಂದಿಯೊಂದಿಗೆ ಜಗಳ ಶುರುಮಾಡಿದ್ದಾರೆ. ಇದರಿಂದ ಕೋಪಗೊಂಡ ಸಿಬ್ಬಂದಿ ಮಕ್ಕಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದರು. ಇದನ್ನು ಕಂಡ ದಂಪತಿ ಮತ್ತಷ್ಟು ಗಲಾಟೆ ಮಾಡಿದರು. ನಂತರ ಆಚೆ ಬಂದು, […]

sadhu srinath

| Edited By:

Jul 27, 2020 | 8:54 PM

ಬೆಂಗಳೂರು: ಜ್ವರ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿದ ದಂಪತಿ, ನಂತರ ಕಂಠಪೂರ್ತಿ ಕುಡಿದು ಆಸ್ಪತ್ರೆ ಸಿಬ್ಬಂದಿಯೊಂದಿಗೆ ಜಗಳವಾಡಿರುವ ಘಟನೆ ನಗರದ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.

ಮಕ್ಕಳಿಗೆ ಸೂಕ್ತ ಚಿಕಿತ್ಸೆ ಕೊಡಿಸೋದು ಪೋಷಕರ ಆದ್ಯ ಕರ್ತವ್ಯ. ಆದರೆ, ಈ ದಂಪತಿ ಕುಡಿದ ಮತ್ತಿನಲ್ಲಿ ಆಸ್ಪತ್ರೆ ಸಿಬ್ಬಂದಿಯೊಂದಿಗೆ ಜಗಳ ಶುರುಮಾಡಿದ್ದಾರೆ. ಇದರಿಂದ ಕೋಪಗೊಂಡ ಸಿಬ್ಬಂದಿ ಮಕ್ಕಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದರು. ಇದನ್ನು ಕಂಡ ದಂಪತಿ ಮತ್ತಷ್ಟು ಗಲಾಟೆ ಮಾಡಿದರು.

ನಂತರ ಆಚೆ ಬಂದು, ಕುಡಿದ ಮತ್ತಿನಲ್ಲಿ ಆಸ್ಪತ್ರೆ ಆವರಣದಲ್ಲೇ ಪ್ರಜ್ಞಾಹೀನಳಾಗಿ ಮಲಗಿಟ್ಟರು. ಈ ನಡುವೆ ತಾಯಿಯನ್ನು ಮಕ್ಕಳು ಏಳಿಸುವ ಪ್ರಯತ್ನ ಮಾಡಿದರು. ಅಮ್ಮಾ ಎದ್ದೇಳು. ಜನ ಎಲ್ಲಾ ನೋಡ್ತಾ ಇದ್ದಾರೆ. ಎದ್ದೇಳು ಅಮ್ಮಾ ಎಂದು ಪುಟಾಣಿಗಳು ಕಣ್ಣೀರಿಡುತ್ತಿದ್ದ ದೃಶ್ಯ ನೆರೆದವರಿಗೆ ಬೇಸರ ಉಂಟುಮಾಡಿತು.

ಕೊನೆಗೆ, ಮಕ್ಕಳ ಗೋಳಾಟ ನೋಡಲಾಗದೆ ಅಲ್ಲೇ ಇದ್ದ ಪೊಲೀಸ್ ಸಿಬ್ಬಂದಿ ಆಟೋ ವ್ಯವಸ್ಥೆ ಮಾಡಿ, ಟೈಟ್​ ಆಗಿದ್ದ ದಂಪತಿಯಿಬ್ಬರನ್ನ ಮತ್ತು ಮಕ್ಕಳನ್ನು ಮನೆಗೆ ಕಳುಹಿಸಿದರು.

Follow us on

Related Stories

Most Read Stories

Click on your DTH Provider to Add TV9 Kannada