ಮಂಡ್ಯ ನಗರದ ನಟ್ಟನಡುವೆ ಬಿರುಗಾಳಿಗೆ ಧರೆಗುರುಳಿದ ಬೃಹತ್ ಮರ!

ಮಂಡ್ಯ: ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಜೊತೆಗೆ ಬಿರುಗಾಳಿಯೂ ಬೀಸುತಿದೆ. ಭಾರಿ ಗಾಳಿ ಹಿನ್ನೆಲೆಯಲ್ಲಿ ಬೃಹತ್ ಮರವೊಂದು ಧರೆಗುರುಳಿದೆ. ಮಂಡ್ಯ ನಗರದ ಕೇಂದ್ರ ಭಾಗದ ವಿವಿ ರಸ್ತೆಯಲ್ಲಿ ಬೃಹತ್ ಮರ ಭೂಮಿಗೆ ಉರುಳಿದೆ. ಇದರಿಂದ ರಸ್ತೆ ಬದಿ ನಿಲ್ಲಿಸಿದ್ದ 1 ಕಾರು, 3 ಬೈಕ್  ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಮರ ಉರುಳಿದ್ರಿಂದ ಕೆಲ‌ಕಾಲ ವಿವಿ ರಸ್ತೆಯ ಸಂಚಾರ ಬಂದ್ ಆಗಿದೆ. ಪೊಲೀಸರು, ನಗರಸಭೆ ಸಿಬ್ಬಂದಿ ಮರ ತೆರವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ. ರಾಜ್ಯದಲ್ಲಿ ಭಾರೀ […]

ಮಂಡ್ಯ ನಗರದ ನಟ್ಟನಡುವೆ ಬಿರುಗಾಳಿಗೆ ಧರೆಗುರುಳಿದ ಬೃಹತ್ ಮರ!

Updated on: Sep 21, 2020 | 2:43 PM

ಮಂಡ್ಯ: ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಜೊತೆಗೆ ಬಿರುಗಾಳಿಯೂ ಬೀಸುತಿದೆ. ಭಾರಿ ಗಾಳಿ ಹಿನ್ನೆಲೆಯಲ್ಲಿ ಬೃಹತ್ ಮರವೊಂದು ಧರೆಗುರುಳಿದೆ. ಮಂಡ್ಯ ನಗರದ ಕೇಂದ್ರ ಭಾಗದ ವಿವಿ ರಸ್ತೆಯಲ್ಲಿ ಬೃಹತ್ ಮರ ಭೂಮಿಗೆ ಉರುಳಿದೆ. ಇದರಿಂದ ರಸ್ತೆ ಬದಿ ನಿಲ್ಲಿಸಿದ್ದ 1 ಕಾರು, 3 ಬೈಕ್  ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇನ್ನು ಮರ ಉರುಳಿದ್ರಿಂದ ಕೆಲ‌ಕಾಲ ವಿವಿ ರಸ್ತೆಯ ಸಂಚಾರ ಬಂದ್ ಆಗಿದೆ. ಪೊಲೀಸರು, ನಗರಸಭೆ ಸಿಬ್ಬಂದಿ ಮರ ತೆರವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ. ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಇಂತಹ ಅನಾಹುತಗಳು ಸಂಭವಿಸುತ್ತಲೇ ಇವೆ.

Published On - 2:41 pm, Mon, 21 September 20