ಬೆಂಗಳೂರಿನಲ್ಲಿ ಡಿವೈಡರ್​ಗೆ ಡಿಕ್ಕಿಯಾಗಿ ಕಾರು ಪಲ್ಟಿ, ಸಂಪೂರ್ಣ ಬೆಂಕಿಗಾಹುತಿ

| Updated By:

Updated on: May 24, 2020 | 4:57 PM

ಬೆಂಗಳೂರು: ಕಾರು ಪಲ್ಟಿಯಾಗಿ ಸಂಪೂರ್ಣ ಹೊತ್ತಿ ಉರಿದಿರುವ ಘಟನೆ ನಗರದ ನ್ಯೂ ಬಿಇಎಲ್ ಸರ್ಕಲ್ ರಸ್ತೆಯಲ್ಲಿ ನಡೆದಿದೆ. ಹೋಂಡಾ ಕಾರಿನಲ್ಲಿ ತೆರಳುತ್ತಿದ್ದ ಐವರಿಗೆ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ನ್ಯೂ ಬಿಇಎಲ್ ಸರ್ಕಲ್ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು KA 03 MG 6250 ಸಂಖ್ಯೆಯ ಕಾರು ಪಲ್ಟಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕಾರು ಪಲ್ಟಿಯಾದ ಕೂಡಲೇ ಕಾರಿನಲ್ಲಿ ಸಿಲುಕಿದ್ದವರನ್ನು ಹೊರಗೆ ಎಳೆದುಕೊಂಡು ಸ್ಥಳೀಯರು ರಕ್ಷಿಸಿದ್ದಾರೆ. […]

ಬೆಂಗಳೂರಿನಲ್ಲಿ ಡಿವೈಡರ್​ಗೆ ಡಿಕ್ಕಿಯಾಗಿ ಕಾರು ಪಲ್ಟಿ, ಸಂಪೂರ್ಣ ಬೆಂಕಿಗಾಹುತಿ
Follow us on

ಬೆಂಗಳೂರು: ಕಾರು ಪಲ್ಟಿಯಾಗಿ ಸಂಪೂರ್ಣ ಹೊತ್ತಿ ಉರಿದಿರುವ ಘಟನೆ ನಗರದ ನ್ಯೂ ಬಿಇಎಲ್ ಸರ್ಕಲ್ ರಸ್ತೆಯಲ್ಲಿ ನಡೆದಿದೆ. ಹೋಂಡಾ ಕಾರಿನಲ್ಲಿ ತೆರಳುತ್ತಿದ್ದ ಐವರಿಗೆ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ನ್ಯೂ ಬಿಇಎಲ್ ಸರ್ಕಲ್ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು KA 03 MG 6250 ಸಂಖ್ಯೆಯ ಕಾರು ಪಲ್ಟಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕಾರು ಪಲ್ಟಿಯಾದ ಕೂಡಲೇ ಕಾರಿನಲ್ಲಿ ಸಿಲುಕಿದ್ದವರನ್ನು ಹೊರಗೆ ಎಳೆದುಕೊಂಡು ಸ್ಥಳೀಯರು ರಕ್ಷಿಸಿದ್ದಾರೆ. ಕೇವಲ ಎರಡು ನಿಮಿಷದ ಅಂತರದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಘಟನೆ ನಡೆದ ಕೆಲವೇ ನಿಮಿಷಗಳ ಅಂತರದಲ್ಲಿ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದಾರೆ. ಆದ್ರೆ ಅಷ್ಟರಲ್ಲಿ ಸಂಪೂರ್ಣವಾಗಿ ಕಾರು ಬೆಂಕಿಗಾಹುತಿಯಾಗಿದೆ.

Published On - 4:57 pm, Sun, 24 May 20