ಟಿಪ್ಪರ್ ಡಿಕ್ಕಿ: ದಂಪತಿ ಸೇರಿ ಮೂವರು ಸಾವು, ಪವಾಡವೆಂಬಂತೆ ಮಗು ಪಾರು!

|

Updated on: Feb 03, 2020 | 11:41 AM

ಬಳ್ಳಾರಿ: ಕೂಡ್ಲಿಗಿ ತಾಲೂಕಿನ ಬೋರಗಟ್ಟಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಟಿಪ್ಪರ್ ಲಾರಿ ಡಿಕ್ಕಿಯೊಡೆದು ಕಾರು ಚಾಲಕ ಸೇರಿ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಅಪಘಾತದಲ್ಲಿ ದಂಪತಿಯ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಮಡಿಕೇರಿಯಿಂದ ಇಳಕಲ್​ಗೆ ವಾಪಸ್​ ಹೋಗುವಾಗ ರಾಷ್ಟ್ರೀಯ ಹೆದ್ದಾರಿ 50ರ ಬೋರಗಟ್ಟಿ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ದುರಂತದಲ್ಲಿ ಮೃತಪಟ್ಟವರು ಇಳಕಲ್ ಮೂಲದವರು ಎನ್ನಲಾಗಿದೆ. ಘಟನೆಯಲ್ಲಿ ಬದುಕುಳಿದ ಮಗುವನ್ನು ಹಾಗೂ ಮೃತರನ್ನು ಕೂಡ್ಲಿಗಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.

ಟಿಪ್ಪರ್ ಡಿಕ್ಕಿ: ದಂಪತಿ ಸೇರಿ ಮೂವರು ಸಾವು, ಪವಾಡವೆಂಬಂತೆ ಮಗು ಪಾರು!
Follow us on

ಬಳ್ಳಾರಿ: ಕೂಡ್ಲಿಗಿ ತಾಲೂಕಿನ ಬೋರಗಟ್ಟಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಟಿಪ್ಪರ್ ಲಾರಿ ಡಿಕ್ಕಿಯೊಡೆದು ಕಾರು ಚಾಲಕ ಸೇರಿ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಅಪಘಾತದಲ್ಲಿ ದಂಪತಿಯ ಮಗು ಪ್ರಾಣಾಪಾಯದಿಂದ ಪಾರಾಗಿದೆ.

ಮಡಿಕೇರಿಯಿಂದ ಇಳಕಲ್​ಗೆ ವಾಪಸ್​ ಹೋಗುವಾಗ ರಾಷ್ಟ್ರೀಯ ಹೆದ್ದಾರಿ 50ರ ಬೋರಗಟ್ಟಿ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ದುರಂತದಲ್ಲಿ ಮೃತಪಟ್ಟವರು ಇಳಕಲ್ ಮೂಲದವರು ಎನ್ನಲಾಗಿದೆ. ಘಟನೆಯಲ್ಲಿ ಬದುಕುಳಿದ ಮಗುವನ್ನು ಹಾಗೂ ಮೃತರನ್ನು ಕೂಡ್ಲಿಗಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.

Published On - 11:30 am, Mon, 3 February 20