ಶಿವಮೊಗ್ಗ: ರಸ್ತೆಗೆ ಅಡ್ಡ ಬಂದ ನಾಯಿಯನ್ನು ಕಾಪಾಡಲು ಹೋಗಿ ಕಾರೊಂದು ಜೋಳದ ಗದ್ದೆಗೆ ಇಳಿದಿರುವ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ.
ತರೀಕೆರೆಯಿಂದ ಸಾಗರದ ಕಡೆ ಹೊರಟಿದ್ದ ka 66 M 1559 ಕ್ರಮ ಸಂಖ್ಯೆಯ ಕಾರಿಗೆ ನಾಯಿಯೊಂದು ಅಡ್ಡಬಂದಿದೆ. ನಾಯಿಯನ್ನ ತಪ್ಪಿಸಲು ಹೋಗಿ ಕಾರು ಜೋಳದ ಗದ್ದೆಗೆ ಇಳಿದಿದೆ. ವೇಗದಲ್ಲಿದ್ದ ಕಾರನ್ನ ಜೋಳದ ಗದ್ದೆಗೆ ಇಳಿಸಲಾಗಿದೆ.
ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದು ಅವರೆಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಇವರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತುಂಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.