ಗಡಿ ಕಾಯೋ ಯೋಧರಿಗೆ ವಿದ್ಯುತ್ ಇಲಾಖೆ shock.. 1.5 ಕೋಟಿ ರೂ. ಬಿಲ್ ಪಾವತಿಸಲು ಸೂಚನೆ
ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ನಿಯೋಜನೆಗೊಂಡಿರುವ CRPF ಯೋಧರಿಗೆ ಜಮ್ಮು-ಕಾಶ್ಮೀರ ಸರ್ಕಾರದ ವಿದ್ಯುಚ್ಛಕ್ತಿ ಇಲಾಖೆ ಬರೋಬ್ಬರಿ 1.5 ಕೋಟಿ ರೂಪಾಯಿ ಕರೆಂಟ್ ಬಿಲ್ ನೀಡಿರುವ ಸ್ವಾರಸ್ಯಕರ ಸಂಗತಿ ಬೆಳಕಿಗೆ ಬಂದಿದೆ. ಕಾಶ್ಮೀರದ ಚರಾರೆ-ಎ-ಶರೀಫ್ನಲ್ಲಿ ನಿಯೋಜನೆಗೊಂಡಿರುವ CRPFನ 181 ಬಟಾಲಿಯನ್ ಕಚೇರಿಗೆ ಜುಲೈ ತಿಂಗಳ ಕರೆಂಟ್ ಬಿಲ್ ನೀಡಿರುವ ರಾಜ್ಯದ ವಿದ್ಯುಚ್ಛಕ್ತಿ ಅಭಿವೃದ್ಧಿ ಇಲಾಖೆಯು 1.5 ಕೋಟಿ ರೂಪಾಯಿ ಮೊತ್ತವನ್ನು ಪಾವತಿಸಲು ಸೂಚಿಸಿದೆ. ಆದ್ದರಿಂದ, ಇಲಾಖೆಯ ಬಿಲ್ ಕಂಡು ಯೋಧರಿಗೆ ನಿಜಕ್ಕೂ ಶಾಕ್ ಆಗಿದೆ. ಈ ಕುರಿತು ವಿದ್ಯುಚ್ಛಕ್ತಿ ಇಲಾಖೆಯನ್ನು […]
ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ನಿಯೋಜನೆಗೊಂಡಿರುವ CRPF ಯೋಧರಿಗೆ ಜಮ್ಮು-ಕಾಶ್ಮೀರ ಸರ್ಕಾರದ ವಿದ್ಯುಚ್ಛಕ್ತಿ ಇಲಾಖೆ ಬರೋಬ್ಬರಿ 1.5 ಕೋಟಿ ರೂಪಾಯಿ ಕರೆಂಟ್ ಬಿಲ್ ನೀಡಿರುವ ಸ್ವಾರಸ್ಯಕರ ಸಂಗತಿ ಬೆಳಕಿಗೆ ಬಂದಿದೆ.
ಕಾಶ್ಮೀರದ ಚರಾರೆ-ಎ-ಶರೀಫ್ನಲ್ಲಿ ನಿಯೋಜನೆಗೊಂಡಿರುವ CRPFನ 181 ಬಟಾಲಿಯನ್ ಕಚೇರಿಗೆ ಜುಲೈ ತಿಂಗಳ ಕರೆಂಟ್ ಬಿಲ್ ನೀಡಿರುವ ರಾಜ್ಯದ ವಿದ್ಯುಚ್ಛಕ್ತಿ ಅಭಿವೃದ್ಧಿ ಇಲಾಖೆಯು 1.5 ಕೋಟಿ ರೂಪಾಯಿ ಮೊತ್ತವನ್ನು ಪಾವತಿಸಲು ಸೂಚಿಸಿದೆ. ಆದ್ದರಿಂದ, ಇಲಾಖೆಯ ಬಿಲ್ ಕಂಡು ಯೋಧರಿಗೆ ನಿಜಕ್ಕೂ ಶಾಕ್ ಆಗಿದೆ.
ಈ ಕುರಿತು ವಿದ್ಯುಚ್ಛಕ್ತಿ ಇಲಾಖೆಯನ್ನು ಸಂಪರ್ಕಿಸಲು ಮುಂದಾದ ಯೋಧರಿಗೆ ಇಂದು ಭಾನುವಾರವಾದ ಕಾರಣ ಇಲಾಖೆಯ ಕಚೇರಿ ಬಂದ್ ಆಗಿತ್ತು. ಹಾಗಾಗಿ, ಇಲಾಖೆ ಸಿಬ್ಬಂದಿಯನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲವಂತೆ.