ಮಗನ ಮದುವೆಯಲ್ಲಿ ಕೊರೊನಾ ನಿಯಮ ಉಲ್ಲಂಘನೆ, ಮಾಸ್ಕ್ ಇಲ್ಲದ ನಾಯ್ಕ್ ವಿರುದ್ಧ FIR

|

Updated on: Jun 17, 2020 | 1:25 PM

ಬಳ್ಳಾರಿ: ಹೆಮ್ಮಾರಿ ಕೊರೊನಾ ದಿನೇ ದಿನೆ ತನ್ನ ಕರಾಳ ಮುಖವನ್ನು ಬಿಚ್ಚಿಡುತ್ತಿದೆ. ಒಬ್ಬೊಬ್ಬರನ್ನೇ ಹುಡುಕಿ ಅವರ ದೇಹವನ್ನ ಹೊಕ್ಕುತ್ತಿದೆ. ಹೀಗಾಗಿ ಸಾಮಾಜಿಕ ಅಂತರ ಕಾಪಾಡುವುದು ಅತ್ಯಂತ ಅವಶ್ಯಕ. ಆದರೆ ಇಲ್ಲಿ ಮಾಜಿ ಸಚಿವರ ಮಗನ ಮದ್ವೆಯಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ. ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರ ತಾಂಡಾದಲ್ಲಿ ನಡೆದ ಮಾಜಿ ಸಚಿವ ಪರಮೇಶ್ವರ್ ನಾಯ್ಕ್​ ಪುತ್ರನ ಮದುವೆಯಲ್ಲಿ ನಿಯಮ ಉಲ್ಲಂಘಿಸಿ ಸಾವಿರಾರು ಜನರು ಭಾಗಿಯಾಗಿದ್ರು. ಸರ್ಕಾರ ಆದೇಶದ ಪ್ರಕಾರ ಮದುವೆ ಸಮಾರಂಭದಲ್ಲಿ ಕೇವಲ 50 ಜನರಿಗೆ ಮಾತ್ರ ಅವಕಾಶವಿದೆ. […]

ಮಗನ ಮದುವೆಯಲ್ಲಿ ಕೊರೊನಾ ನಿಯಮ ಉಲ್ಲಂಘನೆ, ಮಾಸ್ಕ್ ಇಲ್ಲದ ನಾಯ್ಕ್ ವಿರುದ್ಧ FIR
Follow us on

ಬಳ್ಳಾರಿ: ಹೆಮ್ಮಾರಿ ಕೊರೊನಾ ದಿನೇ ದಿನೆ ತನ್ನ ಕರಾಳ ಮುಖವನ್ನು ಬಿಚ್ಚಿಡುತ್ತಿದೆ. ಒಬ್ಬೊಬ್ಬರನ್ನೇ ಹುಡುಕಿ ಅವರ ದೇಹವನ್ನ ಹೊಕ್ಕುತ್ತಿದೆ. ಹೀಗಾಗಿ ಸಾಮಾಜಿಕ ಅಂತರ ಕಾಪಾಡುವುದು ಅತ್ಯಂತ ಅವಶ್ಯಕ. ಆದರೆ ಇಲ್ಲಿ ಮಾಜಿ ಸಚಿವರ ಮಗನ ಮದ್ವೆಯಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ.

ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರ ತಾಂಡಾದಲ್ಲಿ ನಡೆದ ಮಾಜಿ ಸಚಿವ ಪರಮೇಶ್ವರ್ ನಾಯ್ಕ್​ ಪುತ್ರನ ಮದುವೆಯಲ್ಲಿ ನಿಯಮ ಉಲ್ಲಂಘಿಸಿ ಸಾವಿರಾರು ಜನರು ಭಾಗಿಯಾಗಿದ್ರು. ಸರ್ಕಾರ ಆದೇಶದ ಪ್ರಕಾರ ಮದುವೆ ಸಮಾರಂಭದಲ್ಲಿ ಕೇವಲ 50 ಜನರಿಗೆ ಮಾತ್ರ ಅವಕಾಶವಿದೆ.

ಪುತ್ರ ಭರತ್ ಮೊದಲನೇ ಆರೋಪಿ, ತಂದೆ 2ನೇ ಆರೋಪಿ
ಆದರೆ ಇಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ರು. ಅಲ್ಲದೆ ಅಲ್ಲಿ ಮಾಸ್ಕ್‌ ಧರಿಸದೆ, ವೈಯಕ್ತಿಕ ಅಂತರ ಕಾಪಾಡದೆ ನಿರ್ಲಕ್ಷ್ಯವಹಿಸಲಾಗಿತ್ತು. ಹೀಗಾಗಿ ಹರಪನಹಳ್ಳಿ ತಹಶೀಲ್ದಾರ್ ನಾಗವೇಣಿ ದೂರಿನ ಮೇರೆಗೆ ಅರಸೀಕೆರೆ ಪೊಲೀಸ್‌ ಠಾಣೆಯಲ್ಲಿ ಪರಮೇಶ್ವರ್ ನಾಯ್ಕ್, ಪುತ್ರ ಹಾಗೂ ಮದುವೆ ಆಯೋಜಕರ ವಿರುದ್ಧ ಕೇಸ್ ದಾಖಲಾಗಿದೆ. ಪುತ್ರ ಭರತ್ ಮೊದಲನೇ ಆರೋಪಿ, ತಂದೆ 2ನೇ ಆರೋಪಿ

ಸಾಮಾಜಿಕ ಅಂತರ ಮರೆತ ನಾಯಕರು
ಇನ್ನೂ ಮದುವೆ ಸಮಾರಂಭದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು, ಸಿದ್ದರಾಮಯ್ಯ, ಡಾ.ಜಿ ಪರಮೇಶ್ವರ ಭಾಗವಹಿಸಿದ್ದರು.

Published On - 5:06 pm, Mon, 15 June 20