CBIನಿಂದ ಯಾವುದೇ ಸಮನ್ಸ್ ಬಂದಿಲ್ಲ, ಹಣ ಸೀಜ್ ಮಾಡಿಲ್ಲ: ಡಿಕೆಶಿ ಪರ ವಕೀಲ

ಬೆಂಗಳೂರು: ನಿನ್ನೆ ಡಿಕೆ ಶಿವಕುಮಾರ್ ನಿವಾಸ ಸೇರಿದಂತೆ ಹಲವೆಡೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸಿಬಿಐನಿಂದ ಡಿಕೆಶಿಗೆ ಸಮನ್ಸ್‌ ಜಾರಿಯಾಗಿದೆ ಎಂಬ ಮಾಹಿತಿ ಇತ್ತು. ಆದರೆ ಈ ಮಾಹಿತಿಯನ್ನು ಡಿ.ಕೆ.ಶಿವಕುಮಾರ್ ಪರ ವಕೀಲ ಎ.ಎಸ್.ಪೊನ್ನಣ್ಣ ತಳ್ಳಿ ಹಾಕಿದ್ದಾರೆ. ಈ ಬಗ್ಗೆ ಕೆಲ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನಮಗೆ ಸಿಬಿಐನಿಂದ ಯಾವುದೇ ರೀತಿಯ ನೋಟಿಸ್ ಅಥವಾ ಸಮನ್ಸ್ ಸಿಕ್ಕಿಲ್ಲ, ಯಾವುದೇ ಹಣ ಸೀಜ್ ಮಾಡಿಲ್ಲ. ಕಾನೂನಾತ್ಮಕವಾಗಿ ಏನೆಲ್ಲ ದಾಖಲೆ ಬೇಕೋ ಎಲ್ಲ ಸಿದ್ಧವಿದೆ. […]

CBIನಿಂದ ಯಾವುದೇ ಸಮನ್ಸ್ ಬಂದಿಲ್ಲ, ಹಣ ಸೀಜ್ ಮಾಡಿಲ್ಲ: ಡಿಕೆಶಿ ಪರ ವಕೀಲ

Updated on: Oct 06, 2020 | 3:14 PM

ಬೆಂಗಳೂರು: ನಿನ್ನೆ ಡಿಕೆ ಶಿವಕುಮಾರ್ ನಿವಾಸ ಸೇರಿದಂತೆ ಹಲವೆಡೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸಿಬಿಐನಿಂದ ಡಿಕೆಶಿಗೆ ಸಮನ್ಸ್‌ ಜಾರಿಯಾಗಿದೆ ಎಂಬ ಮಾಹಿತಿ ಇತ್ತು. ಆದರೆ ಈ ಮಾಹಿತಿಯನ್ನು ಡಿ.ಕೆ.ಶಿವಕುಮಾರ್ ಪರ ವಕೀಲ ಎ.ಎಸ್.ಪೊನ್ನಣ್ಣ ತಳ್ಳಿ ಹಾಕಿದ್ದಾರೆ. ಈ ಬಗ್ಗೆ ಕೆಲ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ನಮಗೆ ಸಿಬಿಐನಿಂದ ಯಾವುದೇ ರೀತಿಯ ನೋಟಿಸ್ ಅಥವಾ ಸಮನ್ಸ್ ಸಿಕ್ಕಿಲ್ಲ, ಯಾವುದೇ ಹಣ ಸೀಜ್ ಮಾಡಿಲ್ಲ. ಕಾನೂನಾತ್ಮಕವಾಗಿ ಏನೆಲ್ಲ ದಾಖಲೆ ಬೇಕೋ ಎಲ್ಲ ಸಿದ್ಧವಿದೆ. ಸಮನ್ಸ್ ಬಳಿಕ ವಿಚಾರಣೆಗೆ ಹಾಜರಾಗುವ ಬಗ್ಗೆ ಚರ್ಚಿಸುತ್ತೇವೆ. ಸದ್ಯಕ್ಕೆ ನಮ್ಮಲ್ಲಿ ಯಾವುದೇ ರೀತಿಯ ಗೊಂದಲಗಳು ಇಲ್ಲ. ಎಲ್ಲ ರೀತಿಯ ಕಾನೂನು ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಚಾರಣೆಗೆ ಹಾಜರಾಗುವಂತೆ ಸಿಬಿಐನಿಂದ ಡಿಕೆ ಶಿವಕುಮಾರ್​ಗೆ ಸಮನ್ಸ್‌

ಮಗಳ ಮದ್ವೆಗೆ ತಂದ ಚಿನ್ನ ಜಪ್ತಿ ಮಾಡಿದ್ದು ಬಹಳ ಬೇಸರವಾಯಿತು: ಸ್ವಾಮೀಜಿ ಮುಂದೆ ಡಿಕೆಶಿ ದುಃಖ

Published On - 3:10 pm, Tue, 6 October 20