ಶಿರಾ ಬೈಎಲೆಕ್ಷನ್ಗೆ JDS ಅಭ್ಯರ್ಥಿ ಇವರೇ, ಇದ್ರಲ್ಲಿ ಯಾವುದೇ ಎರಡು ಮಾತಿಲ್ಲ -HDD ಘೋಷಣೆ
ತುಮಕೂರು: ಜಿಲ್ಲೆಯ ಶಿರಾ ಕ್ಷೇತ್ರದ ಉಪಚುನಾವಣೆ ವಿಚಾರವಾಗಿ JDS ಪಕ್ಷ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಅಮ್ಮಾಜಮ್ಮಾ ಕಣಕ್ಕೆ ಇಳಿಯಲಿದ್ದಾರೆ. ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಅಮ್ಮಾಜಮ್ಮಾ ಹೆಸರು ಘೋಷಣೆ ಮಾಡಿದರು. ಅಮ್ಮಾಜಮ್ಮಾ, ಇತ್ತೀಚೆಗೆ ನಿಧನರಾದ ಶಿರಾ ಶಾಸಕ ದಿವಂಗತ ಸತ್ಯನಾರಾಯಣ ಅವರ ಪತ್ನಿ. ಕಚೇರಿಯಲ್ಲಿ ಮಾತನಾಡಿದ ದೇವೇಗೌಡರು ಮಾಜಿ ಶಾಸಕ ದಿವಂಗತ ಸತ್ಯನಾರಾಯಣ ಪತ್ನಿಯೇ ಅಭ್ಯರ್ಥಿ. ಇದರಲ್ಲಿ ಯಾವುದೇ ಎರಡು ಮಾತಿಲ್ಲ. ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮನೇ ಅಭ್ಯರ್ಥಿ […]

ಮಾಜಿ ಪ್ರಧಾನಿ H.D.ದೇವೇಗೌಡ
ತುಮಕೂರು: ಜಿಲ್ಲೆಯ ಶಿರಾ ಕ್ಷೇತ್ರದ ಉಪಚುನಾವಣೆ ವಿಚಾರವಾಗಿ JDS ಪಕ್ಷ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಅಮ್ಮಾಜಮ್ಮಾ ಕಣಕ್ಕೆ ಇಳಿಯಲಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಅಮ್ಮಾಜಮ್ಮಾ ಹೆಸರು ಘೋಷಣೆ ಮಾಡಿದರು. ಅಮ್ಮಾಜಮ್ಮಾ, ಇತ್ತೀಚೆಗೆ ನಿಧನರಾದ ಶಿರಾ ಶಾಸಕ ದಿವಂಗತ ಸತ್ಯನಾರಾಯಣ ಅವರ ಪತ್ನಿ.
ಕಚೇರಿಯಲ್ಲಿ ಮಾತನಾಡಿದ ದೇವೇಗೌಡರು ಮಾಜಿ ಶಾಸಕ ದಿವಂಗತ ಸತ್ಯನಾರಾಯಣ ಪತ್ನಿಯೇ ಅಭ್ಯರ್ಥಿ. ಇದರಲ್ಲಿ ಯಾವುದೇ ಎರಡು ಮಾತಿಲ್ಲ. ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮನೇ ಅಭ್ಯರ್ಥಿ ಎಂದು ಹೇಳಿದರು. ಇದರಲ್ಲಿ ಯಾವುದೇ ಗೊಂದಲ ಇಲ್ಲ. ನಾನು ಕೂಡ ಚುನಾವಣಾ ಪ್ರಚಾರಕ್ಕೆ ಹೋಗ್ತೇನೆ ಎಂದು ಸಹ ಹೇಳಿದರು.
Published On - 3:34 pm, Tue, 6 October 20



