ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ: ಜಾಕೀರ್‌ಗೆ ಮತ್ತೆ CCB ನೋಟಿಸ್

ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಬಿಬಿಎಂಪಿ ಮಾಜಿ ಸದಸ್ಯ ಜಾಕೀರ್‌ಗೆ ಸಿಸಿಬಿ ಮತ್ತೆ ನೋಟಿಸ್ ನೀಡಿದೆ. ಹೀಗಾಗಿ ಫ್ರೇಜರ್ ಟೌನ್​ನ ಮಾಜಿ ಬಿಬಿಎಂಪಿ ಸದಸ್ಯ ಜಾಕೀರ್‌ ಸಿಸಿಬಿ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಈಗಾಗಲೇ ಒಂದು ಬಾರಿ ವಿಚಾರಣೆ ನಡೆಸಿರೂ ಅಧಿಕಾರಿಗಳು ಜಾಕೀರ್​ ಹೇಳಿಕೆ ಪರಿಶೀಲಿಸಿ ಮತ್ತೆ 2ನೇ ಬಾರಿಗೆ ಹಾಜರಾಗಲು ಸೂಚಿಸಿದ್ದಾರೆ. ಜಾಕಿರ್ ಗಲಭೆ ದಿನ ಉದ್ರಿಕ್ತರಿಗೆ ಕುಮ್ಮಕ್ಕು ನೀಡಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ ಹಾಗೂ ಗಲಭೆ ಆರೋಪಿ […]

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ: ಜಾಕೀರ್‌ಗೆ ಮತ್ತೆ CCB ನೋಟಿಸ್
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Oct 12, 2020 | 8:52 AM

ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಬಿಬಿಎಂಪಿ ಮಾಜಿ ಸದಸ್ಯ ಜಾಕೀರ್‌ಗೆ ಸಿಸಿಬಿ ಮತ್ತೆ ನೋಟಿಸ್ ನೀಡಿದೆ. ಹೀಗಾಗಿ ಫ್ರೇಜರ್ ಟೌನ್​ನ ಮಾಜಿ ಬಿಬಿಎಂಪಿ ಸದಸ್ಯ ಜಾಕೀರ್‌ ಸಿಸಿಬಿ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ಈಗಾಗಲೇ ಒಂದು ಬಾರಿ ವಿಚಾರಣೆ ನಡೆಸಿರೂ ಅಧಿಕಾರಿಗಳು ಜಾಕೀರ್​ ಹೇಳಿಕೆ ಪರಿಶೀಲಿಸಿ ಮತ್ತೆ 2ನೇ ಬಾರಿಗೆ ಹಾಜರಾಗಲು ಸೂಚಿಸಿದ್ದಾರೆ. ಜಾಕಿರ್ ಗಲಭೆ ದಿನ ಉದ್ರಿಕ್ತರಿಗೆ ಕುಮ್ಮಕ್ಕು ನೀಡಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ ಹಾಗೂ ಗಲಭೆ ಆರೋಪಿ ಮುಜಾಮಿಲ್ ಜೊತೆ ಸಂಪರ್ಕದಲ್ಲಿದ್ದಾರೆ.

Published On - 8:05 am, Mon, 12 October 20

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us