ಬೆಂಗಳೂರು: ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬಾಬು ಮನೆಯಲ್ಲಿ ಸಿಸಿಬಿ ಪೊಲೀಸರು ಮದ್ಯ ಸೇವನೆ ಮಾಡಿರುವ ಆರೋಪ ಕೇಳಿಬಂದಿದೆ. ಬಾಣಸವಾಡಿ ಸರ್ವಿಸ್ ರಸ್ತೆಯಲ್ಲಿರುವ ಮನೆ ಮೇಲೆ ಸಿಸಿಬಿ ಪೊಲೀಸರ ಹೆಸರಲ್ಲಿ ದಾಳಿ ನಡೆಸಿ ಪಾರ್ಟಿ ಮಾಡಿದ್ದಾರೆಂದು ಮಾಲೀಕ ಬಾಬು ಆರೋಪಿಸಿದ್ದಾರೆ.
ಡಿಸೆಂಬರ್ 30 ರಂದು ನಿರ್ಮಾಣ ಹಂತದ ಕಟ್ಟಡದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಪಾರ್ಟಿಯ ದೃಶ್ಯಗಳನ್ನ ಮಾಲೀಕ ಬಾಬು ಕುಟುಂಬಸ್ಥರು ಸೆರೆ ಹಿಡಿದಿದ್ದಾರೆ. ಆದ್ರೆ ಪಾರ್ಟಿ ಮಾಡಿದವರು ಸಿಸಿಬಿ ಪೊಲೀಸರು ಅಲ್ಲ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ತನಿಖೆ ನಡೆಸಿ ಕ್ರಮ:
ಸಿಸಿಬಿ ಹೆಸರಲ್ಲಿ ದಾಳಿ ನಡೆಸಿ ಎಣ್ಣೆ ಪಾರ್ಟಿ ಮಾಡಿದ ಆರೋಪಕ್ಕೆ ಸಂಬಂಧಿಸಿದ ವಿಡಿಯೋ ವಿಚಾರ ತಿಳಿದಿಲ್ಲ. ಪಾರ್ಟಿಯ ವಿಡಿಯೋ ನನಗೆ ಇನ್ನೂ ಲಭ್ಯವಾಗಿಲ್ಲ. ವಿಡಿಯೋ ಸಿಕ್ಕ ನಂತರ ಪರಿಶೀಲನೆ ಮಾಡಲಾಗುವುದು. ಪಾರ್ಟಿ ಮಾಡಿದವರು ಯಾರೆಂದು ತನಿಖೆ ನಡೆಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಟಿವಿ9ಗೆ ಅಪರಾಧ ವಿಭಾಗದ ಡಿಸಿಪಿ ರವಿಕುಮಾರ್ ಪ್ರತಿಕ್ರಿಯಿಸಿದ್ದಾರೆ.
Published On - 3:17 pm, Sat, 4 January 20