ಗತಕಾಲದ ಇತಿಹಾಸದ ವಿಜಯನಗರ ಸಾಮ್ರಾಜ್ಯದಲ್ಲಿ ಹಂಪಿ ಉತ್ಸವ, ತುಂಗಭದ್ರೆಗೆ ದೀಪಾರತಿ

ಬಳ್ಳಾರಿ: ಹಂಪಿ ಉತ್ಸವ ಅಂದ್ರೆನೆ ಹಾಗೇ. ಅಲ್ಲಿ ಗತಕಾಲದ ವೈಭವವಿರುತ್ತೆ. ಇತಿಹಾಸ ಮರುಕಳಿಸುತ್ತೆ. ಕಲಾತಂಡಗಳ ಕಲರವ ಮೇಳೈಸುತ್ತೆ. ಸದ್ಯ ಹಂಪಿಯಲ್ಲಿ ತುಂಗಭದ್ರೆಗೆ ನಡೆದ ದೀಪಾರತಿ ಪೂಜೆ ಎಲ್ಲರ ಕಣ್ಮನ ಸೆಳೆದಿತ್ತು. ಕತ್ತಲಲ್ಲೂ ದೀಪಾರತಿಯ ಮಂದ ಬೆಳಕು. ಪ್ರಶಾಂತವಾಗಿ ಹರಿಯೋ ನೀರು. ಗಂಟೆ ನಾದದ ಸದ್ದು. ಭಕ್ತಿಯ ಜೊತೆ ಸಂಭ್ರಮದ ಹೊನಲು. ವಿಶ್ವವಿಖ್ಯಾತ ಹಂಪಿ ಉತ್ಸವದ ಹಿನ್ನೆಲೆಯಲ್ಲಿ ನಡೆದ ತುಂಗಭದ್ರಾ ಆರತಿ ಮಹೋತ್ಸವ ಎಲ್ಲರ ಮೈ ರೋಮಾಂಚನ ಮಾಡಿದೆ. ಬಳ್ಳಾರಿ ಜಿಲ್ಲೆಯ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಬಳಿಯ ತುಂಗಭದ್ರಾ […]

ಗತಕಾಲದ ಇತಿಹಾಸದ ವಿಜಯನಗರ ಸಾಮ್ರಾಜ್ಯದಲ್ಲಿ ಹಂಪಿ ಉತ್ಸವ, ತುಂಗಭದ್ರೆಗೆ ದೀಪಾರತಿ
Follow us
ಸಾಧು ಶ್ರೀನಾಥ್​
|

Updated on: Jan 05, 2020 | 8:09 AM

ಬಳ್ಳಾರಿ: ಹಂಪಿ ಉತ್ಸವ ಅಂದ್ರೆನೆ ಹಾಗೇ. ಅಲ್ಲಿ ಗತಕಾಲದ ವೈಭವವಿರುತ್ತೆ. ಇತಿಹಾಸ ಮರುಕಳಿಸುತ್ತೆ. ಕಲಾತಂಡಗಳ ಕಲರವ ಮೇಳೈಸುತ್ತೆ. ಸದ್ಯ ಹಂಪಿಯಲ್ಲಿ ತುಂಗಭದ್ರೆಗೆ ನಡೆದ ದೀಪಾರತಿ ಪೂಜೆ ಎಲ್ಲರ ಕಣ್ಮನ ಸೆಳೆದಿತ್ತು.

ಕತ್ತಲಲ್ಲೂ ದೀಪಾರತಿಯ ಮಂದ ಬೆಳಕು. ಪ್ರಶಾಂತವಾಗಿ ಹರಿಯೋ ನೀರು. ಗಂಟೆ ನಾದದ ಸದ್ದು. ಭಕ್ತಿಯ ಜೊತೆ ಸಂಭ್ರಮದ ಹೊನಲು. ವಿಶ್ವವಿಖ್ಯಾತ ಹಂಪಿ ಉತ್ಸವದ ಹಿನ್ನೆಲೆಯಲ್ಲಿ ನಡೆದ ತುಂಗಭದ್ರಾ ಆರತಿ ಮಹೋತ್ಸವ ಎಲ್ಲರ ಮೈ ರೋಮಾಂಚನ ಮಾಡಿದೆ.

ಬಳ್ಳಾರಿ ಜಿಲ್ಲೆಯ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಬಳಿಯ ತುಂಗಭದ್ರಾ ನದಿಯಲ್ಲಿ ತುಂಗಭದ್ರಾ ಆರತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿವಿಧ ಧಾರ್ಮಿಕ ಆಚರಣೆಗಳ ಮೂಲಕ ಒಂದು ಗಂಟೆಗೂ ಹೆಚ್ಚು ಕಾಲ ವಿಶೇಷ ಪೂಜೆ ಸಲ್ಲಿಸಲಾಯ್ತು. ಮಂಗಳ ವಾದ್ಯಗಳ ಮಧ್ಯೆ ನದಿಗೆ ಬಾಗಿನ ಅರ್ಪಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ, ಸಂಸದ ವೈ. ದೇವೇಂದ್ರಪ್ಪ, ಶಾಸಕ ಆನಂದ್ ಸಿಂಗ್, ಡಿಸಿ ಎಸ್.ಎಸ್ ನಕುಲ್, ಎಸ್​ಪಿ ಸಿಕೆ ಬಾಬಾ ಸೇರಿದಂತೆ ಹಲವು ಅಧಿಕಾರಿಗಳು ಸಹ ಭಾಗವಹಿಸಿದ್ರು.

ತುಂಗಭದ್ರಾ ಆರತಿ ಮಹೋತ್ಸವ ನಡೆಸಿದ ಬಳಿಕ ಪ್ರತಿ ವರ್ಷ ಜಲಾಶಯ ಭರ್ತಿಯಾಗ್ತಿದೆ ಅನ್ನೋ ನಂಬಿಕೆ ಇಲ್ಲಿನ ರೈತರದ್ದು.. ಇನ್ನು ಇದೇ ವೇಳೆ ಮಾತ್ನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ತುಂಗಭದ್ರಾ ಆರತಿ ಮಹೋತ್ಸವವನ್ನ ವೈಭವದಿಂದ ಆಚರಿಸಲಾಗಿದೆ ಅಂದ್ರು.

ಇನ್ನು ನದಿ, ಕೆರೆ, ಜಲಾಶಯಗಳು ತುಂಬಿದಾಗ ಗಂಗಾಮಾತೆಗೆ ಪೂಜಿಸುವುದು ಸಂಪ್ರದಾಯ. ಈ ಹಿನ್ನೆಲೆಯಲ್ಲಿ ಪುರಾಣ ಪ್ರಸಿದ್ಧ ಕ್ಷೇತ್ರವಾದ ಹಂಪಿಯಲ್ಲಿ ಆರತಿ ಬೆಳಗಿ, ನದಿಗೆ ಬಾಗಿನ ಅರ್ಪಿಸಲಾಯ್ತು.. ಹಾಗೇ ನದಿಯಲ್ಲಿ ದೀಪ ಹಚ್ಚಿ ಬಿಡೋದ್ರ ಜತೆಗೆ ನದಿಯ ಸುತ್ತಲೂ ದೀಪಗಳನ್ನ ಹಚ್ಚಲಾಗಿತ್ತು. ತುಂಗಭದ್ರಾ ಆರತಿ ಮಹೋತ್ಸವದ ಬಳಿಕ ಬಾನಾಂಗಣದಲ್ಲಿ ಪಟಾಕಿಗಳ ಸದ್ದಿನ ಜೊತೆ ಚಿತ್ತಾರ ಮೂಡಿತ್ತು.

ಗತಕಾಲದ ಇತಿಹಾಸ ಹೊಂದಿರೋ ವಿಜಯನಗರ ಸಾಮ್ರಾಜ್ಯದ ಹಂಪಿ ಉತ್ಸವ ಆಚರಣೆಗೂ ಮುನ್ನ ಈ ಆರತಿ ಮಹೋತ್ಸವ ನಡೆಸಲಾಗುತ್ತೆ. ಸದ್ಯ ಈ ವರ್ಷದ ಆರಂಭದಲ್ಲೇ ದೀಪಾರತಿ ಬೆಳಗಿ ಪೂಜೆ ಸಲ್ಲಿಸಿದ್ದಾರೆ.

ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ