ಬಿಡದಿಯಲ್ಲಿ ಮುತ್ತಪ್ಪ ರೈ ನಿವಾಸದ ಮೇಲೆ CCB ದಾಳಿ

ಬೆಂಗಳೂರು: ರಾಜಧಾನಿಯಲ್ಲಿ ಆತಂಕ ಹುಟ್ಟಿಸಿರೋ ಸ್ಯಾಂಡಲ್‌ವುಡ್‌ಗೆ ಡ್ರಗ್ಸ್‌ ಜಾಲದ ನಂಟು ಕೇಸ್‌ ಸಂಬಂಧ ದಿವಂಗತ ಮುತ್ತಪ್ಪ ರೈ ನಿವಾಸದ ಮೇಲೆ CCB ಪೊಲೀಸರು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಹೊರವಲಯ ಬಿಡದಿಯಲ್ಲಿರುವ ನಿವಾಸ ಹಾಗೂ ಸದಾಶಿವನಗರದ ಮುತ್ತಪ್ಪ ರೈ ನಿವಾಸದ ಮೇಲೂ ದಾಳಿ ನಡೆದಿದೆ. ದಿ.ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಡ್ರಗ್ಸ್‌ ಜಾಲದ ನಂಟಿದೆ ಎಂಬ ಆರೋಪ ಕೇಳಿಬಂದಿದೆ. ಬಂಧಿತ ಆರೋಪಿಗಳ ಜತೆ ರಿಕ್ಕಿ ರೈ ಸತತ ಸಂಪರ್ಕದಲ್ಲಿದ್ದರು. ಈ ಹಿನ್ನೆಲೆಯಲ್ಲಿ CCB ಅಧಿಕಾರಿಗಳು ದಾಳಿ ನಡೆಸಿದ್ದಾರೆ. […]

ಬಿಡದಿಯಲ್ಲಿ ಮುತ್ತಪ್ಪ ರೈ ನಿವಾಸದ ಮೇಲೆ CCB ದಾಳಿ

Updated on: Oct 06, 2020 | 8:22 AM

ಬೆಂಗಳೂರು: ರಾಜಧಾನಿಯಲ್ಲಿ ಆತಂಕ ಹುಟ್ಟಿಸಿರೋ ಸ್ಯಾಂಡಲ್‌ವುಡ್‌ಗೆ ಡ್ರಗ್ಸ್‌ ಜಾಲದ ನಂಟು ಕೇಸ್‌ ಸಂಬಂಧ ದಿವಂಗತ ಮುತ್ತಪ್ಪ ರೈ ನಿವಾಸದ ಮೇಲೆ CCB ಪೊಲೀಸರು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಹೊರವಲಯ ಬಿಡದಿಯಲ್ಲಿರುವ ನಿವಾಸ ಹಾಗೂ ಸದಾಶಿವನಗರದ ಮುತ್ತಪ್ಪ ರೈ ನಿವಾಸದ ಮೇಲೂ ದಾಳಿ ನಡೆದಿದೆ.

ದಿ.ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಡ್ರಗ್ಸ್‌ ಜಾಲದ ನಂಟಿದೆ ಎಂಬ ಆರೋಪ ಕೇಳಿಬಂದಿದೆ. ಬಂಧಿತ ಆರೋಪಿಗಳ ಜತೆ ರಿಕ್ಕಿ ರೈ ಸತತ ಸಂಪರ್ಕದಲ್ಲಿದ್ದರು. ಈ ಹಿನ್ನೆಲೆಯಲ್ಲಿ CCB ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸಿಪಿ ವೇಣುಗೋಪಾಲ್ , ಇನ್ಸೆಪೆಕ್ಟರ್ ಪುನೀತ್, ಶ್ರೀಧರ್ ಪೂಜಾರಿ ಸೇರಿ ಸುಮಾರು 25 CCB ಅಧಿಕಾರಿಗಳ ತಂಡ ಬೆಳಗ್ಗೆ 6.30ಕ್ಕೆ ದಾಳಿ ನಡೆಸಿದೆ.

Published On - 8:14 am, Tue, 6 October 20