AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಹುಲ್, ಮಯಾಂಕ್​ಗೆ ಮೈದಾನದಲ್ಲೇ.. ಮಹಾ ಗುರು ಧೋನಿಯಿಂದ ಪಾಠ

ಮಹೇಂದ್ರ ಸಿಂಗ್ ಧೋನಿಯ ಸ್ಪೆಷಾಲಿಟಿಯೇ ಅಂತಹದ್ದು. ಧೋನಿ ನಾಯಕನಾಗಿ ಯಶಸ್ಸು ಕಂಡಿದ್ದು ಸೋಲು ಗೆಲುವಿನ ಲೆಕ್ಕಾಚಾರದಿಂದಲ್ಲ. ಯುವ ಕ್ರಿಕೆಟಿಗರ ಪಾಲಿಗೆ ಒಬ್ಬ ಗುರುವಾಗಿ. ಈ ಸೀಸನ್​ನ ಐಪಿಎಲ್​ನಲ್ಲೂ ಧೋನಿ, ಮಹಾ ಗುರುವಾಗಿ ಮಿಂಚುತ್ತಿದ್ದಾರೆ. ರಾಹುಲ್, ಮಯಾಂಕ್​ಗೆ ಮಹಾಗುರುವಾದ ಧೋನಿ! ಪಂಜಾಬ್ ತಂಡವನ್ನ ಮಣಿಸುತ್ತಿದ್ದಂತೆ ಧೋನಿ, ಅಬ್ಬಾ ಗೆದ್ವಿ ಅಂತಾ ನಿಟ್ಟುಸಿರು ಬಿಟ್ಟಿಲ್ಲ. ಬದಲಿಗೆ ಸೋತ ಪಂಜಾಬ್ ತಂಡದ ಆಟಗಾರರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ. ನಾಯಕ ಕೆ.ಎಲ್.ರಾಹುಲ್ ಮತ್ತು ಮಯಾಂಕ್ ಅಗರ್ವಾಲ್​ಗೆ ಗೆಲುವಿನ ಪಾಠ ಹೇಳಿಕೊಟ್ಟಿದ್ದಾರೆ. ಆಡಿದ ಐದು ಪಂದ್ಯಗಳಲ್ಲಿ […]

ರಾಹುಲ್, ಮಯಾಂಕ್​ಗೆ ಮೈದಾನದಲ್ಲೇ.. ಮಹಾ ಗುರು ಧೋನಿಯಿಂದ ಪಾಠ
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on:Oct 06, 2020 | 9:39 AM

Share

ಮಹೇಂದ್ರ ಸಿಂಗ್ ಧೋನಿಯ ಸ್ಪೆಷಾಲಿಟಿಯೇ ಅಂತಹದ್ದು. ಧೋನಿ ನಾಯಕನಾಗಿ ಯಶಸ್ಸು ಕಂಡಿದ್ದು ಸೋಲು ಗೆಲುವಿನ ಲೆಕ್ಕಾಚಾರದಿಂದಲ್ಲ. ಯುವ ಕ್ರಿಕೆಟಿಗರ ಪಾಲಿಗೆ ಒಬ್ಬ ಗುರುವಾಗಿ. ಈ ಸೀಸನ್​ನ ಐಪಿಎಲ್​ನಲ್ಲೂ ಧೋನಿ, ಮಹಾ ಗುರುವಾಗಿ ಮಿಂಚುತ್ತಿದ್ದಾರೆ.

ರಾಹುಲ್, ಮಯಾಂಕ್​ಗೆ ಮಹಾಗುರುವಾದ ಧೋನಿ! ಪಂಜಾಬ್ ತಂಡವನ್ನ ಮಣಿಸುತ್ತಿದ್ದಂತೆ ಧೋನಿ, ಅಬ್ಬಾ ಗೆದ್ವಿ ಅಂತಾ ನಿಟ್ಟುಸಿರು ಬಿಟ್ಟಿಲ್ಲ. ಬದಲಿಗೆ ಸೋತ ಪಂಜಾಬ್ ತಂಡದ ಆಟಗಾರರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ. ನಾಯಕ ಕೆ.ಎಲ್.ರಾಹುಲ್ ಮತ್ತು ಮಯಾಂಕ್ ಅಗರ್ವಾಲ್​ಗೆ ಗೆಲುವಿನ ಪಾಠ ಹೇಳಿಕೊಟ್ಟಿದ್ದಾರೆ.

ಆಡಿದ ಐದು ಪಂದ್ಯಗಳಲ್ಲಿ ಪಂಜಾಬ್ ನಾಲ್ಕರಲ್ಲಿ ಸೋತು ಪಾಯಿಂಟ್ ಟೇಬಲ್​ನ ಕೊನೆಯಲ್ಲಿದೆ. ಇದು ಸಹಜವಾಗೇ ಪಾಂಜಾಬ್ ಆಟಗಾರರ ಆತ್ಮಸ್ಥೈರ್ಯ ಕುಗ್ಗುವಂತೆ ಮಾಡಿತ್ತು. ಇದನ್ನ ಗಮನಿಸಿದ ಧೋನಿ, ಸ್ವತಃ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಬಳಿ ಹೋಗಿ ಟಿಪ್ಸ್ ನೀಡಿದ್ದಾರೆ.

ಕಳೆದ ಸೀಸನ್​ನಲ್ಲೂ ಗುರುವಾಗಿ ಮಿಂಚಿದ್ದ ಮಹೇಂದ್ರ! ಕಳೆದ IPL ಸೀಸನ್​ನಲ್ಲೂ ಮಹೇಂದ್ರ ಸಿಂಗ್ ಧೋನಿ, ಸೋತು ಸುಣ್ಣವಾಗಿದ್ದ ತಂಡದ ಆಟಗಾರರಿಗೆ ಗುರುವಾಗಿ ಮಿಂಚಿದ್ರು. ಜೈಪುರದಲ್ಲಿ ನಡೆದ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಧೋನಿ ಕೋಪಗೊಂಡಿದ್ದು ನಿಮಗೆ ಗೊತ್ತೆ ಇದೆ. ಆದ್ರೆ ಇದೇ ಪಂದ್ಯದ ಗೆಲುವಿನ ಬಳಿಕ ಮಾಹಿ, ರಾಜಸ್ಥಾನ್ ಕ್ರಿಕೆಟಿಗರಿಗೆ ಸಲಹೆ ನೀಡಿದ್ರು.

ಸೋತ್ರೂ ಕ್ರೀಡಾಸ್ಫೂರ್ತಿ ಮೆರೆದ ಮಾಹಿ! ಕಳೆದ ಸೀಸನ್​ನಲ್ಲಿ ಧೋನಿ ಅಲಭ್ಯತೆಯಿಂದಾಗಿ ಚೆನ್ನೈ, ಹೈದ್ರಾಬಾದ್ ವಿರುದ್ಧ ಮುಗ್ಗರಿಸಿತು. ಈ ಪಂದ್ಯದಲ್ಲಿ ತಾನಿರದೇ ಇದ್ರೂ, ಧೋನಿ ಹೈದ್ರಾಬಾದ್ ಆಟಗಾರರಿಗೆ ಸಲಹೆ ನೀಡಿದ್ರು. ಡೇವಿಡ್ ವಾರ್ನರ್ ಸೇರಿದಂತೆ ಎಲ್ರೂ ಧೋನಿ ನೀಡಿದ ಟಿಪ್ಸ್ ಅನ್ನ ಏಕಾಗ್ರತೆಯಿಂದ ಆಲಿಸಿದ್ರು. ಹಾಗೇ ಮಾಹಿ ಹಾಸ್ಯ ಚಟಾಕಿ ಹಾರಿಸಿ ಎಲ್ರನ್ನೂ ನಗೆಗಡಲ್ಲಿ ತೇಲೋ ಹಾಗೇ ಮಾಡಿದ್ರು.

ಸರ್ಫರಾಜ್ ಖಾನ್​ಗೆ ಹೊಸ ದಿಕ್ಕು ತೋರಿಸಿದ ಮಹೇಂದ್ರ! ಕಳೆದ ಸೀಸನ್​ನಲ್ಲಿ ಸರ್ಫರಾಜ್ ಖಾನ್ ಪಂಜಾಬ್ ತಂಡದ ಪರ ಡೈನಾಮಿಕ್ ಬ್ಯಾಟ್ಸ್​ಮನ್ ಆಗಿ ಹೊರ ಹೊಮ್ಮಿದ್ದ. ಆದ್ರೆ ಇದಕ್ಕೂ ಮುನ್ನ ಸರ್ಫರಾಜ್​ಗೆ ಬಿಗ್ ಶಾಟ್​ಗಳನ್ನ ಹೊಡೆಯೋವಾಗ, ಹೇಗೆ ಜಡ್ಜ್​ಮೆಂಟ್ ಮಾಡ್ಬೇಕು ಅನ್ನೋದನ್ನ ಹೇಳಿಕೊಟ್ಟಿದ್ದೇ ಮಹೇಂದ್ರ ಸಿಂಗ್ ಧೋನಿ.

ಹೀಗೆ ಧೋನಿ ಪ್ರತಿ ಸೀಸನ್​ನಲ್ಲೂ ಸೋಲಿನ ಸುಳಿಗೆ ಸಿಲುಕೊ ತಂಡಕ್ಕೆ ಟಿಪ್ಸ್ ನೀಡಿ, ಗೆಲುವಿನ ರಿದಮ್​ಗೆ ಮರಳೋದಕ್ಕೆ ಸಹಾಯ ಮಾಡ್ತಿದ್ದಾರೆ. ಹಾಗೇ ಕಳಪೆ ಫಾರ್ಮ್​ನಲ್ಲಿರೋ ಆಟಗಾರರಿಗೂ ಫಾರ್ಮ್ ಕಂಡುಕೊಳ್ಳೊದಕ್ಕೆ ನೆರವಾಗ್ತಿದ್ದಾರೆ.

Published On - 9:24 am, Tue, 6 October 20