ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ಗಲಭೆ ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ಮಾಜಿ ಮೇಯರ್ ಸಂಪತ್ ರಾಜ್‌ಗೆ ಆಶ್ರಯ ನೀಡಿದ್ದ ವ್ಯಕ್ತಿಯನ್ನು ಸಿಸಿಬಿ ಅಧಿಕಾರಿಗಾಳು ಬಂಧಿಸಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಸಂಪತ್ ರಾಜ್‌ಗೆ ಕೊಡಗಿನ ನಾಗರಹೊಳೆಯಲ್ಲಿ ಆಶ್ರಯ ನೀಡಿದ್ದ ಆರೋಪಿ ರಿಯಾಜುದ್ದೀನ್ನನ್ನು ಬಂಧಿಸಿದ್ದೇವೆ ಎಂದು ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಹೇಳಿದ್ದಾರೆ.
ಸಂಪತ್ ರಾಜ್ ಎಸ್ಕೇಪ್ ಆಗಿದ್ದ ಬಳಿಕ ನಾಗರಹೊಳೆಗೆ ಹೋಗಿದ್ದರು ಎಂದು ತಿಳಿದುಬಂದಿದೆ. ಈ ವೇಳೆ, ರಿಯಾಜುದ್ದೀನ್ ಕಾರಿನ ಮೂಲಕ ಅವರನ್ನು ಪಿಕಪ್ ಆಂಡ್ ಡ್ರಾಪ್ ಮಾಡಿದ್ದನು ಎಂದು ಹೇಳಲಾಗಿದೆ. ರಿಯಾಜುದ್ದೀನ್ ಬಿಬಿಎಂಪಿ ಕಾಂಟ್ರಾಕ್ಟರ್ ಆಗಿದ್ದಾನೆ ಎಂದು ಸಹ ಹೇಳಲಾಗಿದೆ.