ಸ್ಯಾಂಡಲ್​ವುಡ್​ Drugs ಜಾಲ: ರಾಯಲ್ ಮೀನಾಕ್ಷಿ‌ ಮಾಲ್ ಮಾಲೀಕನಿಗೆ CCB ಬುಲಾವ್​

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಗರದ ರಾಯಲ್ ಮೀನಾಕ್ಷಿ‌ ಮಾಲ್ ಮಾಲೀಕ ವಿ.ಗಣೇಶ್ ರಾವ್ ವಿಚಾರಣೆಗೆಂದು CCB ಕಚೇರಿಗೆ ಹಾಜರಾಗಿದ್ದರು. ಗಣೇಶ್ ರಾವ್​ಗೆ ಅಧಿಕಾರಿಗಳು ನಿನ್ನೆ ನೋಟಿಸ್ ಜಾರಿಮಾಡಿದ್ದ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾಗಿದ್ದರು. ಕಾಂಗ್ರೆಸ್ ಎಂಎಲ್​ಸಿ UB ವೆಂಕಟೇಶ್ ಪುತ್ರ ಗಣೇಶ್ ರಾವ್ ಕಾಂಗ್ರೆಸ್ ಎಂಎಲ್​ಸಿ UB ವೆಂಕಟೇಶ್ ಅವರ ಪುತ್ರ ವಿ. ಗಣೇಶ್ ರಾವ್ ವಿಶಾಲ ಇಂಡಿಯಾ ಕಮರ್ಷಿಯಲ್ ಡೆವಲಪರ್ಸ್ ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸಹ ಆಗಿದ್ದಾರೆ. […]

ಸ್ಯಾಂಡಲ್​ವುಡ್​ Drugs ಜಾಲ: ರಾಯಲ್ ಮೀನಾಕ್ಷಿ‌ ಮಾಲ್ ಮಾಲೀಕನಿಗೆ CCB ಬುಲಾವ್​
Edited By:

Updated on: Oct 21, 2020 | 3:43 PM

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಗರದ ರಾಯಲ್ ಮೀನಾಕ್ಷಿ‌ ಮಾಲ್ ಮಾಲೀಕ ವಿ.ಗಣೇಶ್ ರಾವ್ ವಿಚಾರಣೆಗೆಂದು CCB ಕಚೇರಿಗೆ ಹಾಜರಾಗಿದ್ದರು. ಗಣೇಶ್ ರಾವ್​ಗೆ ಅಧಿಕಾರಿಗಳು ನಿನ್ನೆ ನೋಟಿಸ್ ಜಾರಿಮಾಡಿದ್ದ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾಗಿದ್ದರು.

ಕಾಂಗ್ರೆಸ್ ಎಂಎಲ್​ಸಿ UB ವೆಂಕಟೇಶ್ ಪುತ್ರ ಗಣೇಶ್ ರಾವ್
ಕಾಂಗ್ರೆಸ್ ಎಂಎಲ್​ಸಿ UB ವೆಂಕಟೇಶ್ ಅವರ ಪುತ್ರ ವಿ. ಗಣೇಶ್ ರಾವ್ ವಿಶಾಲ ಇಂಡಿಯಾ ಕಮರ್ಷಿಯಲ್ ಡೆವಲಪರ್ಸ್ ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸಹ ಆಗಿದ್ದಾರೆ. ಸಂಸ್ಥೆಯಲ್ಲಿ ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಮತ್ತು ಮಾಜಿ MLC ಕುಪೇಂದ್ರ ರೆಡ್ಡಿ ನಿರ್ದೇಶಕರಾಗಿದ್ದಾರೆ ಎಂದು ತಿಳಿದುಬಂದಿದೆ.

ಇದಲ್ಲದೆ, CCB ಅಧಿಕಾರಿಗಳು ನಿರ್ಮಾಪಕ ಜಗದೀಶ್ ಮತ್ತು ಅವರ ಪತ್ನಿ ಸೌಂದರ್ಯ ಜಗದೀಶ್​ರನ್ನು ಸಹ ವಿಚಾರಣೆಗೆ ಹಾಜರಾಗುವಂತೆ ನಿನ್ನೆ ನೋಟಿಸ್ ನೀಡಿದ್ದರು. ಅಂತೆಯೇ, ದಂಪತಿ ಇಂದು ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಹಾಜರಾಗಿದ್ದರು. ದಂಪತಿ ರಾಂ ಲೀಲಾ, ಅಪ್ಪು ಪಪ್ಪು ಸೇರಿ ಹಲವು ಚಿತ್ರಗಳ ನಿರ್ಮಾಪಕರಾಗಿದ್ದು ಯಶವಂತಪುರ ಬಳಿಯ ಜೆಟ್ ಲ್ಯಾಗ್ ಎಂದು ಪಬ್​ನ ಮಾಲಿಕತ್ವ ಸಹ ಹೊಂದಿದ್ದಾರೆ. ಸಿಸಿಬಿ ಇನ್​ಸ್ಪೆಕ್ಟರ್​ ಪುನೀತ್​ ಎದುರು ವಿಚಾರಣೆಗೆ ಹಾಜರಾದರು.

ಜೆಟ್ ಲ್ಯಾಗ್ ಪಬ್​ನಲ್ಲಿ ಡ್ರಗ್ ಪಾರ್ಟಿಗಳು ನಡೆದಿರೋ ಅನುಮಾನದ ಹಿನ್ನೆಲೆಯಲ್ಲಿ ನಿರ್ಮಾಪಕ ಸೌಂದರ್ಯ ಜಗದೀಶ್ ವಿಚಾರಣೆ ನಡೆಸಲಾಗುತ್ತಿದೆ. ಪಬ್​ನಲ್ಲಿ ಪಾರ್ಟಿಗಾಗಿ ಯಾಱರು ಸೇರ್ತಿದ್ರು. ಪಾರ್ಟಿ ಆಯೋಜನೆಗೆ ಪಬ್ ಯಾಱರು ಪಡೆದಿದ್ರು. ಡ್ರಗ್ ಆರೋಪಿಗಳ ಜೊತೆಗಿನ ಲಿಂಕ್ ಏನು? ಸಂಜನಾ, ರಾಗಿಣಿ ಸಹ ಪಾರ್ಟಿಗಳಿಗೆ ಬಂದಿದ್ರಾ? ಶ್ರೀ ಸುಬ್ರಮಣ್ಯ, ವಿರೇನ್ ಖನ್ನಾ , ವೈಭವ್ ಜೈನ್ ಜೆಟ್ ಲ್ಯಾಗ್​ನಲ್ಲಿ ಪಾರ್ಟಿ ಆಯೋಜಿಸಿದ್ರಾ? ಎಂಬ ಹಲವು ಆಯಾಮಗಳಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

Published On - 11:39 am, Wed, 21 October 20