ಮಳೆರಾಯನ ಮುನಿಸು: 100 ವರ್ಷ ಹಳೆಯ ಯಮಲೂರಿನ ಮುನೇಶ್ವರ ಸ್ವಾಮಿ ದೇವಸ್ಥಾನ ಜಲಾವೃತ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾತ್ರಿ ಸುರಿದ ಭಾರಿ ಮಳೆಗೆ ಯಮಲೂರಿನಲ್ಲಿ ಮುನೇಶ್ವರಸ್ವಾಮಿ ದೇವಸ್ಥಾನ ಜಲಾವೃತಗೊಂಡಿದೆ. ಕಳೆದ ಕೆಲ ದಿನಗಳಿಂದ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆ ಬಹಳಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ನಗರದಲ್ಲಿ ಮಳೆಯಿಂದಾಗಿ ರಸ್ತೆಗಳು ಕೆರೆಯಂತಾಗಿವೆ. ಮನೆಗಳು, ದೇವಸ್ಥಾನಗಳಿಗೆ ಜಲದಿಗ್ಬಂಧನವಾಗಿದೆ. ರಾತ್ರಿ ಸುರಿದ ಮಳೆಗೆ ರಾಜಕಾಲುವೆ ಒಡೆದು ಹೋಗಿ ಸುಮಾರು 100 ವರ್ಷ ಹಳೆಯದಾದ ಯಮಲೂರಿನಲ್ಲಿರುವ ಮುನೇಶ್ವರಸ್ವಾಮಿ ದೇವಸ್ಥಾನ ದೇಗುಲದೊಳಗೆ ನೀರು ನುಗ್ಗಿದೆ. ದೇವರ ದರ್ಶನಕ್ಕೂ ಅಡ್ಡಿಯಾಗಿದ್ದು ಇಡೀ ಯಮಲೂರು ಕೆರೆಯಂತಾಗಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾತ್ರಿ ಸುರಿದ ಭಾರಿ ಮಳೆಗೆ ಯಮಲೂರಿನಲ್ಲಿ ಮುನೇಶ್ವರಸ್ವಾಮಿ ದೇವಸ್ಥಾನ ಜಲಾವೃತಗೊಂಡಿದೆ. ಕಳೆದ ಕೆಲ ದಿನಗಳಿಂದ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆ ಬಹಳಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ನಗರದಲ್ಲಿ ಮಳೆಯಿಂದಾಗಿ ರಸ್ತೆಗಳು ಕೆರೆಯಂತಾಗಿವೆ. ಮನೆಗಳು, ದೇವಸ್ಥಾನಗಳಿಗೆ ಜಲದಿಗ್ಬಂಧನವಾಗಿದೆ.
ರಾತ್ರಿ ಸುರಿದ ಮಳೆಗೆ ರಾಜಕಾಲುವೆ ಒಡೆದು ಹೋಗಿ ಸುಮಾರು 100 ವರ್ಷ ಹಳೆಯದಾದ ಯಮಲೂರಿನಲ್ಲಿರುವ ಮುನೇಶ್ವರಸ್ವಾಮಿ ದೇವಸ್ಥಾನ ದೇಗುಲದೊಳಗೆ ನೀರು ನುಗ್ಗಿದೆ. ದೇವರ ದರ್ಶನಕ್ಕೂ ಅಡ್ಡಿಯಾಗಿದ್ದು ಇಡೀ ಯಮಲೂರು ಕೆರೆಯಂತಾಗಿದೆ.




