AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾದಿಂದ ಮೃತಪಟ್ಟಿದ್ದ ಮಗಳ ನೆನೆದು ಕಣ್ಣೀರಿಟ್ಟ ಮುಖ್ಯ ಪೇದೆ ತಾಯಿ

ಚಿಕ್ಕಮಗಳೂರು: ಇಂದು ರಾಜ್ಯಾದ್ಯಂತ ಪೊಲೀಸ್ ಸಂಸ್ಮರಣಾ ದಿನವನ್ನು ಆಚರಿಸಲಾಗುತ್ತಿದೆ. ಕರ್ತವ್ಯದ ವೇಳೆ  ಮೃತಪಟ್ಟ ಪೊಲೀಸ್ ಸಿಬ್ಬಂದಿಗೆ ಗೌರವ ಸೂಚಿಸಲಾಗುತ್ತಿದೆ. ಅದರಲ್ಲೂ ಕೊರೊನಾ ಮಹಾಮಾರಿಯ ವಿರುದ್ಧದ ಸಮರದಲ್ಲಿ ಪ್ರಾಣ ತೆತ್ತ ಕೊರೊನಾ ಪೊಲೀಸ್ ವಾರಿಯರ್ಸ್​ ಅನ್ನು ಸಹ ಸ್ಮರಿಸಲಾಗಿದೆ. ಅಂತೆಯೇ, ನಗರದ DAR ಮೈದಾನದಲ್ಲಿ ನಡೆದ ಪೋಲೀಸ್ ಹುತಾತ್ಮರ ದಿನದ ಕಾರ್ಯಕ್ರಮದಲ್ಲಿ ಪುಷ್ಪ ಸಮರ್ಪಣೆ ವೇಳೆ.. ಮಹಿಳಾ ಪೇದೆಯಾಗಿದ್ದ ಮೃತ ಮಗಳನ್ನ ನೆನೆದು ಆಕೆಯ ತಾಯಿ ಕಣ್ಣೀರಿಟ್ಟ ಮನಮಿಡಿಯುವ ದೃಶ್ಯ ಕಂಡುಬಂತು. ಹುತಾತ್ಮ ಪೊಲೀಸ್ ಪುತ್ಥಳಿಗೆ ಪುಷ್ಪ ಸಮರ್ಪಣೆಗೆ […]

ಕೊರೊನಾದಿಂದ ಮೃತಪಟ್ಟಿದ್ದ ಮಗಳ ನೆನೆದು ಕಣ್ಣೀರಿಟ್ಟ ಮುಖ್ಯ ಪೇದೆ ತಾಯಿ
KUSHAL V
|

Updated on:Oct 21, 2020 | 11:12 AM

Share

ಚಿಕ್ಕಮಗಳೂರು: ಇಂದು ರಾಜ್ಯಾದ್ಯಂತ ಪೊಲೀಸ್ ಸಂಸ್ಮರಣಾ ದಿನವನ್ನು ಆಚರಿಸಲಾಗುತ್ತಿದೆ. ಕರ್ತವ್ಯದ ವೇಳೆ  ಮೃತಪಟ್ಟ ಪೊಲೀಸ್ ಸಿಬ್ಬಂದಿಗೆ ಗೌರವ ಸೂಚಿಸಲಾಗುತ್ತಿದೆ. ಅದರಲ್ಲೂ ಕೊರೊನಾ ಮಹಾಮಾರಿಯ ವಿರುದ್ಧದ ಸಮರದಲ್ಲಿ ಪ್ರಾಣ ತೆತ್ತ ಕೊರೊನಾ ಪೊಲೀಸ್ ವಾರಿಯರ್ಸ್​ ಅನ್ನು ಸಹ ಸ್ಮರಿಸಲಾಗಿದೆ. ಅಂತೆಯೇ, ನಗರದ DAR ಮೈದಾನದಲ್ಲಿ ನಡೆದ ಪೋಲೀಸ್ ಹುತಾತ್ಮರ ದಿನದ ಕಾರ್ಯಕ್ರಮದಲ್ಲಿ ಪುಷ್ಪ ಸಮರ್ಪಣೆ ವೇಳೆ.. ಮಹಿಳಾ ಪೇದೆಯಾಗಿದ್ದ ಮೃತ ಮಗಳನ್ನ ನೆನೆದು ಆಕೆಯ ತಾಯಿ ಕಣ್ಣೀರಿಟ್ಟ ಮನಮಿಡಿಯುವ ದೃಶ್ಯ ಕಂಡುಬಂತು.

ಹುತಾತ್ಮ ಪೊಲೀಸ್ ಪುತ್ಥಳಿಗೆ ಪುಷ್ಪ ಸಮರ್ಪಣೆಗೆ ತೆರಳುವ ವೇಳೆ ಶಕುಂತಲಾರ ತಾಯಿ ಕಮಲಮ್ಮ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಸಿದರು. ಪೊಲೀಸ್ ಸಂಸ್ಮರಣಾ ದಿನಾಚರಣೆ ವೇಳೆ.. ಕೊರೊನಾದಿಂದ ಮೃತಪಟ್ಟಿದ್ದ ಮಹಿಳಾ ಮುಖ್ಯಪೇದೆ ಶಕುಂತಲಾರ ತಾಯಿ ಮಗಳನ್ನು ನೆನೆದು ಕಣ್ಣೀರಿಟ್ಟ ದೃಶ್ಯ ನೆರೆದವರ ಮನಕಲುಕುವಂತಿತ್ತು. ಶಕುಂತಲಾ ಅಜ್ಜಂಪುರ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

Published On - 10:46 am, Wed, 21 October 20