ಸೋಂಕಿತರ ಅಂತ್ಯಕ್ರಿಯೆ ನೆರವೇರಿಸುವ ಸ್ಮಶಾನದ ಕಾವಲುಗಾರನಿಗೆ PPE ಕಿಟ್ ನೀಡದ ಅಧಿಕಾರಿಗಳು

ಬೆಳಗಾವಿ: ಸೋಂಕಿತರ ಅಂತ್ಯಕ್ರಿಯೆ ನೆರವೇರಿಸುವ ಸ್ಮಶಾನದ ಕಾವಲುಗಾರನಿಗೆ PPE ಕಿಟ್ ನೀಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವ ಘಟನೆ ಸದಾಶಿವನಗರದಲ್ಲಿರುವ ರುದ್ರಭೂಮಿಯಲ್ಲಿ ಕಂಡುಬಂದಿದೆ. ಮೃತಪಟ್ಟ ಸೋಂಕಿತರ ಅಂತ್ಯಕ್ರಿಯೆಯಲ್ಲಿ ಸ್ಮಶಾನದ ಕಾವಲುಗಾರ ಸಹ ಪಾಲ್ಗೊಳ್ಳುತ್ತಾನೆ. ಆದರೆ, ಈತನಿಗೆ PPE ಕಿಟ್ ನೀಡದೆ ಮಹಾನಗರ ಪಾಲಿಕೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ರಾಜ್ಯ ಸರ್ಕಾರ ಈ ಕುರಿತು ಆದೇಶ ಹೊರಡಿಸಿದ್ದರೂ ಪಾಲಿಕೆ ಅಧಿಕಾರಿಗಳು ಅದನ್ನು ಪಾಲಿಸಿಲ್ಲ ಎಂದು ತಿಳಿದುಬಂದಿದೆ. ಅಂತ್ಯಸಂಸ್ಕಾರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ PPE ಕಿಟ್ ಧರಿಸಿದ್ರೂ ಕಾವಲುಗಾರನಿಗೆ ಮಾತ್ರ […]

ಸೋಂಕಿತರ ಅಂತ್ಯಕ್ರಿಯೆ ನೆರವೇರಿಸುವ ಸ್ಮಶಾನದ ಕಾವಲುಗಾರನಿಗೆ PPE ಕಿಟ್ ನೀಡದ ಅಧಿಕಾರಿಗಳು
Edited By:

Updated on: Jul 26, 2020 | 9:41 PM

ಬೆಳಗಾವಿ: ಸೋಂಕಿತರ ಅಂತ್ಯಕ್ರಿಯೆ ನೆರವೇರಿಸುವ ಸ್ಮಶಾನದ ಕಾವಲುಗಾರನಿಗೆ PPE ಕಿಟ್ ನೀಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವ ಘಟನೆ ಸದಾಶಿವನಗರದಲ್ಲಿರುವ ರುದ್ರಭೂಮಿಯಲ್ಲಿ ಕಂಡುಬಂದಿದೆ.

ಮೃತಪಟ್ಟ ಸೋಂಕಿತರ ಅಂತ್ಯಕ್ರಿಯೆಯಲ್ಲಿ ಸ್ಮಶಾನದ ಕಾವಲುಗಾರ ಸಹ ಪಾಲ್ಗೊಳ್ಳುತ್ತಾನೆ. ಆದರೆ, ಈತನಿಗೆ PPE ಕಿಟ್ ನೀಡದೆ ಮಹಾನಗರ ಪಾಲಿಕೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ.

ರಾಜ್ಯ ಸರ್ಕಾರ ಈ ಕುರಿತು ಆದೇಶ ಹೊರಡಿಸಿದ್ದರೂ ಪಾಲಿಕೆ ಅಧಿಕಾರಿಗಳು ಅದನ್ನು ಪಾಲಿಸಿಲ್ಲ ಎಂದು ತಿಳಿದುಬಂದಿದೆ. ಅಂತ್ಯಸಂಸ್ಕಾರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ PPE ಕಿಟ್ ಧರಿಸಿದ್ರೂ ಕಾವಲುಗಾರನಿಗೆ ಮಾತ್ರ ನೀಡಿರಲಿಲ್ಲ. ಹೀಗಾಗಿ, ಸ್ಮಶಾನದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾವಲುಗಾರನಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿದೆ.

Published On - 1:16 pm, Sun, 26 July 20