ಹಬ್ಬದ ಪ್ರಯುಕ್ತ ಸ್ಪರ್ಧೆ ಆಯೋಜನೆ, 16 ವರ್ಷದ ಯುವಕರಿಂದ ವಿನೂತನ ಸಾಧನೆ, ಎಲ್ಲಿ?

ಹಬ್ಬದ ಪ್ರಯುಕ್ತ ಸ್ಪರ್ಧೆ ಆಯೋಜನೆ, 16 ವರ್ಷದ ಯುವಕರಿಂದ ವಿನೂತನ ಸಾಧನೆ, ಎಲ್ಲಿ?

ವಿಜಯಪುರ: ನಾಗರ ಪಂಚಮಿ ಹಬ್ಬದ ಅಂಗವಾಗಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಸಾಹಸ ಸ್ಪರ್ಧೆಯಲ್ಲಿ 16 ವರ್ಷದ ಯುವಕರು ವಿನೂತನ ಸಾಧನೆ ಮಾಡಿದ್ದು, ಯುವಕರ ಈ ಸಾಧನೆಗೆ ಗ್ರಾಮದ ಜನರಿಂದ ಬಹಳ ಮೆಚ್ಚುಗೆ ವ್ಯಕ್ತವಾಗಿದೆ. ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ನಾಗರ ಪಂಚಮಿ ಪ್ರಯುಕ್ತ ಎತ್ತಿನಗಾಡಿ ಎಳೆಯುವ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಎತ್ತಿನಗಾಡಿಯಲ್ಲಿ 1300 ಕೆಜಿ ತೂಕದ 10 ಜೋಳದ ಚೀಲದೊಂದಿಗೆ ಒಬ್ಬ ವ್ಯಕ್ತಿಯನ್ನು ಕೂರಿಸಿ ನಾಲ್ಕು ಕಿಲೋಮೀಟರ್ ದೂರ ಎತ್ತಿನಗಾಡಿ ಎಳೆಯುಬೇಕೆಂಬ ಷರತ್ತು ವಿದಿಸಲಾಗಿತ್ತು. ಈ […]

sadhu srinath

| Edited By:

Jul 26, 2020 | 8:55 PM

ವಿಜಯಪುರ: ನಾಗರ ಪಂಚಮಿ ಹಬ್ಬದ ಅಂಗವಾಗಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಸಾಹಸ ಸ್ಪರ್ಧೆಯಲ್ಲಿ 16 ವರ್ಷದ ಯುವಕರು ವಿನೂತನ ಸಾಧನೆ ಮಾಡಿದ್ದು, ಯುವಕರ ಈ ಸಾಧನೆಗೆ ಗ್ರಾಮದ ಜನರಿಂದ ಬಹಳ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ನಾಗರ ಪಂಚಮಿ ಪ್ರಯುಕ್ತ ಎತ್ತಿನಗಾಡಿ ಎಳೆಯುವ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಎತ್ತಿನಗಾಡಿಯಲ್ಲಿ 1300 ಕೆಜಿ ತೂಕದ 10 ಜೋಳದ ಚೀಲದೊಂದಿಗೆ ಒಬ್ಬ ವ್ಯಕ್ತಿಯನ್ನು ಕೂರಿಸಿ ನಾಲ್ಕು ಕಿಲೋಮೀಟರ್ ದೂರ ಎತ್ತಿನಗಾಡಿ ಎಳೆಯುಬೇಕೆಂಬ ಷರತ್ತು ವಿದಿಸಲಾಗಿತ್ತು.

ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅದೇ ಗ್ರಾಮದ 16 ವರ್ಷದ ಯುವಕರಾದ ಆಕಾಶ ಕೆಂಚಪ್ಪ ತಳವಾರ ಹಾಗೂ ಪ್ರಶಾಂತ ಮಾಳಪ್ಪ ಸಾತಿಹಾಳ ಇಬ್ಬರು ಯುವಕರು ಎತ್ತಿನಗಾಡಿಯನ್ನು ನಾಲ್ಕು ಕಿಲೋಮೀಟರ್ ದೂರ ಗಾಡಿಗೆ ಎತ್ತುಗಳ ಬದಲು ತಮ್ಮ ಹೆಗಲನ್ನು ನೀಡಿ ನಾಲ್ಕು ಕಿಲೋಮೀಟರ್ ದೂರದವರೆಗೂ ಬಂಡಿಯನ್ನು ಎಳೆದು ವಿನೂತನ ಸಾಧನೆ ಮಾಡಿದ್ದಾರೆ. ಈ ಸಾಹಸ ಮೆಚ್ಚಿದ ಗ್ರಾಮಸ್ಥರು ಯುವಕರಿಗೆ ಬರಪೂರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಶೋಕ ಯಡಳ್ಳಿ

Follow us on

Related Stories

Most Read Stories

Click on your DTH Provider to Add TV9 Kannada