ಉಜ್ವಲಾ ಯೋಜನೆ ಫಲಾನುಭವಿಗಳಿಗೆ ಅಡುಗೆ ಅನಿಲದ ಸಿಲಿಂಡರ್ ಮೇಲೆ ₹ 200 ಸಬ್ಸಿಡಿ! ಗೃಹಿಣಿಯರು ಕೊಂಚ ನಿರಾಳ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 21, 2022 | 9:43 PM

ಗಮನಿಸಬೇಕಾದ ಸಂಗತಿಯೇನೆಂದರೆ ಸಹಾಯ ಧನ ಕೇವಲ ಉಜ್ವಲಾ ಯೋಜನೆ ಅಡಿ ಫಲಾನುಭವಿ ಮಹಿಳೆಯರಿಗೆ ಮಾತ್ರ ಸಿಗಲಿದೆ. ಅದಕ್ಕೆ ಮತ್ತೊಂದು ರೈಡರ್ ಕೂಡ ಇದೆ. ಅದೇನೆಂದರೆ, ಒಂದು ವರ್ಷದ ಅವಧಿಯಲ್ಲಿ 12 ಸಿಲಿಂಡರ್ ಗಳನ್ನು ಬಳಸುವವರೆಗೆ ಮಾತ್ರ ಸಬ್ಸಿಡಿ ಸಿಗಲಿದೆ.

ನವದೆಹಲಿ: ತೀವ್ರ ಸ್ವರೂಪದ ಹಣದುಬ್ಬರದಿಂದ (inflation) ತತ್ತರಿಸಿರುವ ಭಾರತೀಯರಿಗೆ ಕೊಂಚ ನಿರಾಳವಾಗುವ ಅವಕಾಶವನ್ನು ಕೇಂದ್ರ ಸರ್ಕಾರ ನೀಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಗಳ ಮೇಲಿನ ಅಬ್ಕಾರಿ ಶುಲ್ಕವನ್ನು ಕ್ರಮವಾಗಿ ರೂ. 9.50 ಮತ್ತು ರೂ. 7 ಕಡಿತಗೊಳಿಸಿದ ಬೆನ್ನಲ್ಲೇ ಅಡುಗೆ ಅನಿಲದ ಸಿಲಿಂಡರ್ (gas cylinder) ಮೇಲೆ ರೂ. 200 ಸಬ್ಸಿಡಿ ನೀಡುವ ನಿರ್ಧಾರವನ್ನು ಕೇಂದ್ರ ಸರ್ಕಾರ (Central Government) ಪ್ರಕಟಿಸಿದೆ. ಆದರೆ ಗಮನಿಸಬೇಕಾದ ಸಂಗತಿಯೇನೆಂದರೆ ಸಹಾಯ ಧನ ಕೇವಲ ಉಜ್ವಲಾ ಯೋಜನೆ ಅಡಿ ಫಲಾನುಭವಿ ಮಹಿಳೆಯರಿಗೆ ಮಾತ್ರ ಸಿಗಲಿದೆ. ಅದಕ್ಕೆ ಮತ್ತೊಂದು ರೈಡರ್ ಕೂಡ ಇದೆ. ಅದೇನೆಂದರೆ, ಒಂದು ವರ್ಷದ ಅವಧಿಯಲ್ಲಿ 12 ಸಿಲಿಂಡರ್ ಗಳನ್ನು ಬಳಸುವವರೆಗೆ ಮಾತ್ರ ಸಬ್ಸಿಡಿ ಸಿಗಲಿದೆ. ಅಂದರೆ ಗೃಹಿಣಿಯರು ಒಂದು ವರ್ಷದಲ್ಲಿ ಬಳಸುವ ಸಿಲಿಂಡರ್ ಗಳ ಸಂಖ್ಯೆ 12 ದಾಟಬಾರದು.

ನಮಗೇನೂ ಇಲ್ಲವೇ ಅಂತ ಕೋಟ್ಯಾಂತರ ಮಧ್ಯಮ ವರ್ಗದ ಕುಟುಂಬಗಳು ಮತ್ತು ಗೃಹಿಣಿಯರು ಕೇಳುತ್ತಿದ್ದಾರೆ. ಸದ್ಯಕ್ಕಂತೂ ಇಲ್ಲ ಮಾರಾಯ್ರೇ. ಆದರೆ ಯಾರಿಗ್ಗೊತ್ತು? ಇದು ಕೂಡ ಚುನಾವಣೆಗಳ ವರ್ಷ. ವರ್ಷಾಂತ್ಯದಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ವಿಧಾನ ಸಭೆ ಚುನಾವಣೆಗಳು ನಡೆಯಲಿವೆ. ಮುಂದಿನ ವರ್ಷ ನಮ್ಮಲ್ಲಿ ಮತ್ತು ಮಧ್ಯಪ್ರದೇಶದಲ್ಲಿ ಅಸೆಂಬ್ಲಿ ಚುನಾವಣೆಗಳು ನಡೆಯಲಿವೆ.

ಕಳೆದ ವರ್ಷದ ಅಂತಿಮ ಭಾಗ ಮತ್ತು ಈ ವರ್ಷದ ಅರಂಭದ ನಾಲ್ಕು ತಿಂಗಳವರೆಗೆ ಪೆಟ್ರೋಲಿಯಂ ಪದಾರ್ಥಗಳ ಬೆಲೆ ಹೆಚ್ಚಾಗಿರಲಿಲ್ಲ. ಯಾಕೆ ಅಂತ ಎಲ್ಲರಿಗೂ ಗೊತ್ತು. ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯಗಳಲ್ಲಿ ನಡೆದ ವಿಧಾನ ಸಭೆ ಚುನಾವಣೆಗಳ ಪ್ರಯೋಜನ ನಮಗೆ ಸಿಕ್ಕಿತ್ತು ಮಾರಾಯ್ರೇ. ಹಾಗಾಗೇ, ನಿರಾಶರಾಗೋದು ಬೇಡ, ಈ ವರ್ಷವೂ ನಾವು ಫಲಾನುಭವಿಗಳಾಗಬಹುದು.

ಇದನ್ನೂ ಓದಿ:  ಈಗಿನ ಒಂದು ಸಿಲಿಂಡರ್ ಬೆಲೆಗೆ ಆಗ ಎರಡು ಸಿಲಿಂಡರ್ ಸಿಗುತ್ತಿತ್ತು: ಅಡುಗೆ ಅನಿಲ ಬೆಲೆ ಏರಿಕೆ ಬಗ್ಗೆ ರಾಹುಲ್ ಗಾಂಧಿ ವಾಗ್ದಾಳಿ