ಈಗಿನ ಒಂದು ಸಿಲಿಂಡರ್ ಬೆಲೆಗೆ ಆಗ ಎರಡು ಸಿಲಿಂಡರ್ ಸಿಗುತ್ತಿತ್ತು: ಅಡುಗೆ ಅನಿಲ ಬೆಲೆ ಏರಿಕೆ ಬಗ್ಗೆ ರಾಹುಲ್ ಗಾಂಧಿ ವಾಗ್ದಾಳಿ

“ಕಾಂಗ್ರೆಸ್ ಮಾತ್ರ ಬಡ ಮತ್ತು ಮಧ್ಯಮ ವರ್ಗದ ಭಾರತೀಯ ಕುಟುಂಬಗಳ ಕಲ್ಯಾಣಕ್ಕಾಗಿ ಆಡಳಿತ ನಡೆಸುತ್ತದೆ. ಇದು ನಮ್ಮ ಆರ್ಥಿಕ ನೀತಿಯ ತಿರುಳು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಈಗಿನ ಒಂದು ಸಿಲಿಂಡರ್ ಬೆಲೆಗೆ ಆಗ ಎರಡು ಸಿಲಿಂಡರ್ ಸಿಗುತ್ತಿತ್ತು: ಅಡುಗೆ ಅನಿಲ ಬೆಲೆ ಏರಿಕೆ ಬಗ್ಗೆ ರಾಹುಲ್ ಗಾಂಧಿ ವಾಗ್ದಾಳಿ
ರಾಹುಲ್ ಗಾಂಧಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:May 08, 2022 | 5:01 PM

ದೆಹಲಿ: ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಎಲ್​​ಪಿಜಿ ಬೆಲೆಯನ್ನು (LPG Price) ಪ್ರತಿ ಸಿಲಿಂಡರ್‌ಗೆ 50 ರೂಪಾಯಿಗಳಷ್ಟು ಹೆಚ್ಚಿಸಿದ ಒಂದು ದಿನದ ನಂತರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭಾನುವಾರ ಯುಪಿಎ ಅಧಿಕಾರಾವಧಿಯಲ್ಲಿದ್ದ ದರಗಳಿಗೆ ಹೋಲಿಸಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. “ಕಾಂಗ್ರೆಸ್ ಮಾತ್ರ ಬಡ ಮತ್ತು ಮಧ್ಯಮ ವರ್ಗದ ಭಾರತೀಯ ಕುಟುಂಬಗಳ ಕಲ್ಯಾಣಕ್ಕಾಗಿ ಆಡಳಿತ ನಡೆಸುತ್ತದೆ. ಇದು ನಮ್ಮ ಆರ್ಥಿಕ ನೀತಿಯ ತಿರುಳು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಯುಪಿಎ ಆಡಳಿತ ಮತ್ತು ಪ್ರಸ್ತುತ ಬಿಜೆಪಿ ಸರ್ಕಾರದ ಅಡಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಹೋಲಿಸಿ ರಾಹುಲ್ ಈ ಟ್ವೀಟ್ ಮಾಡಿದ್ದಾರೆ. ಯುಪಿಎ ಅಧಿಕಾರದಲ್ಲಿದ್ದಾಗ ಎಲ್‌ಪಿಜಿಗೆ 410 ರೂ.ಗೆ 827 ರೂ. ಸಬ್ಸಿಡಿ ಇತ್ತು, ಆದರೆ ಬಿಜೆಪಿ ಸರ್ಕಾರದಲ್ಲಿ ಯಾವುದೇ ಸಬ್ಸಿಡಿ ಇಲ್ಲದೆ ಸಿಲಿಂಡರ್‌ಗೆ 999 ರೂ.ಆಗಿದೆ. ಶನಿವಾರದ ಹೆಚ್ಚಳದ ನಂತರ, ಲಕ್ಷಾಂತರ ಭಾರತೀಯ ಕುಟುಂಬಗಳು “ವಿಪರೀತ ಹಣದುಬ್ಬರ”, ನಿರುದ್ಯೋಗ ಮತ್ತು “ಕಳಪೆ ಆಡಳಿತ” ವಿರುದ್ಧ ಕಠಿಣ ಹೋರಾಟವನ್ನು ನಡೆಸುತ್ತಿವೆ ಎಂದು ರಾಹುಲ್ ಹೇಳಿದ್ದಾರೆ.

ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ದೆಹಲಿಯಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ರೂ 999.5 ಕ್ಕೆ ಹೆಚ್ಚಿಸಿವೆ, ಈ ಹಿಂದೆ 949.5 ರೂ. ಒಎಂಸಿಗಳು ಕೊನೆಯದಾಗಿ ಮಾರ್ಚ್ 22 ರಂದು ಎಲ್‌ಪಿಜಿ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ ರೂ 50 ರಷ್ಟು ಹೆಚ್ಚಿಸಿದ್ದವು. ಎಲ್‌ಪಿಜಿಯ ಬೆಲೆಯು ಎಲ್‌ಪಿಜಿಯ ಅಂತರರಾಷ್ಟ್ರೀಯ ಬೆಲೆಗಳೊಂದಿಗೆ ಸಂಬಂಧ ಹೊಂದಿದೆ, ಇದು ರಷ್ಯಾ-ಉಕ್ರೇನ್ ಸಂಘರ್ಷದ ಕಾರಣ ಪೂರೈಕೆಯ ಕಳವಳಗಳ ಪರಿಣಾಮವಾಗಿ ಏರುತ್ತಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 4:54 pm, Sun, 8 May 22