ವಿಜ್ಞಾನ ಸುಳ್ಳು ಹೇಳುವುದಿಲ್ಲ, ಮೋದಿ ಸುಳ್ಳು ಹೇಳುತ್ತಾರೆ: ರಾಹುಲ್ ಗಾಂಧಿ

ಕೊವಿಡ್ ಸಾಂಕ್ರಾಮಿಕ ರೋಗದಿಂದಾಗಿ 47 ಲಕ್ಷ ಭಾರತೀಯರು ಸಾವನ್ನಪ್ಪಿದ್ದಾರೆ. ಸರ್ಕಾರ ಹೇಳಿಕೊಂಡಂತೆ 4.8 ಲಕ್ಷ ಅಲ್ಲ. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳನ್ನು ಗೌರವಿಸಿ. ಕಡ್ಡಾಯವಾಗಿ ₹ 4 ಲಕ್ಷ ಪರಿಹಾರದೊಂದಿಗೆ ಅವರನ್ನು ಬೆಂಬಲಿಸಿ...

ವಿಜ್ಞಾನ ಸುಳ್ಳು ಹೇಳುವುದಿಲ್ಲ, ಮೋದಿ ಸುಳ್ಳು ಹೇಳುತ್ತಾರೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:May 06, 2022 | 3:34 PM

ದೆಹಲಿ:  ಭಾರತದಲ್ಲಿ ಕೊವಿಡ್ -19 (Covid 19)  ಸಾವುಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿರುವ ವಿಶ್ವ ಆರೋಗ್ಯ ಸಂಸ್ಥೆ (WHO) ಇತ್ತೀಚಿನ ವರದಿಯ ಬಗ್ಗೆ ನರೇಂದ್ರ ಮೋದಿ (Narendra Modi) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಶುಕ್ರವಾರ  ವಿಜ್ಞಾನವು ಸುಳ್ಳು ಹೇಳುವುದಿಲ್ಲ. ಮೋದಿ ಸುಳ್ಳು ಹೇಳುತ್ತಾರೆ ಎಂದಿದ್ದಾರೆ. ಕೊವಿಡ್ ಸಾಂಕ್ರಾಮಿಕ ರೋಗದಿಂದಾಗಿ 47 ಲಕ್ಷ ಭಾರತೀಯರು ಸಾವನ್ನಪ್ಪಿದ್ದಾರೆ. ಸರ್ಕಾರ ಹೇಳಿಕೊಂಡಂತೆ 4.8 ಲಕ್ಷ ಅಲ್ಲ. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳನ್ನು ಗೌರವಿಸಿ. ಕಡ್ಡಾಯವಾಗಿ ₹ 4 ಲಕ್ಷ ಪರಿಹಾರದೊಂದಿಗೆ ಅವರನ್ನು ಬೆಂಬಲಿಸಿ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ. ಗಾಂಧಿಯವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ, ವಿಶ್ವ ಆರೋಗ್ಯ ಸಂಸ್ಥೆಯ ಡೇಟಾ ಮತ್ತು ಕಾಂಗ್ರೆಸ್‌ನ “ಬೇಟಾ” (ಮಗ) ತಪ್ಪಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ಕೊವಿಡ್ ಸಾವಿನ ಬಗ್ಗೆ ರಾಜಕೀಯ ಮಾಡುತ್ತಿದ್ದಾರೆ  ಎಂದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ವೈರಸ್‌ನಿಂದ ಭಾರತದಲ್ಲಿ ಅಂದಾಜು ಸಾವುಗಳನ್ನು ಲೆಕ್ಕಾಚಾರ ಮಾಡುವ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ವಿಧಾನವು “ದೋಷಪೂರಿತ” ಮತ್ತು ಭಾರತ ಸರ್ಕಾರವು ಸಂಸ್ಥೆಗೆ ತನ್ನ ಆಕ್ಷೇಪಣೆಗಳನ್ನು ತಿಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.

ಕೊವಿಡ್‌ನಿಂದಾಗಿ ಹೆಚ್ಚಿನ ಸಾವುಗಳ ಕುರಿತಾದ ತನ್ನ ವರದಿಯಲ್ಲಿ ಸಾಂಕ್ರಾಮಿಕ ರೋಗದ ಮೊದಲ ಎರಡು ವರ್ಷಗಳಲ್ಲಿ ಜಾಗತಿಕವಾಗಿ ಸುಮಾರು 1.5 ಕೋಟಿ ಜನರು ರೋಗದ ನೇರ ಅಥವಾ ಪರೋಕ್ಷ ಪ್ರಭಾವಕ್ಕೆ ಬಲಿಯಾಗುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಭಾರತದಲ್ಲಿ ಮಾತ್ರ ಕೊವಿಡ್ 2020 ಮತ್ತು 2021 ರಲ್ಲಿ 47.4 ಲಕ್ಷ ಜನರ ಜೀವ ತೆಗೆದುಕೊಂಡಿರಬಹುದು ಎಂದು ವರದಿ ಹೇಳಿದೆ.

ಭಾರತವು ತನ್ನ ನಾಗರಿಕ ನೋಂದಣಿ ವ್ಯವಸ್ಥೆಯಲ್ಲಿ (CRS) ದಾಖಲಾದ 2020 ರ ಜನನ ಮತ್ತು ಮರಣಗಳ ನೋಂದಣಿಗಾಗಿ ತನ್ನ ವಾರ್ಷಿಕ ಡೇಟಾವನ್ನು ಬಿಡುಗಡೆ ಮಾಡಿದ ದಿನಗಳ ನಂತರ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಬಂದಿದೆ.

ಇದನ್ನೂ ಓದಿ
Image
ವಿಶ್ವ ಆರೋಗ್ಯ ಸಂಸ್ಥೆಯ ವರದಿಗೆ ಡಾ. ಎನ್​.ಕೆ.ಅರೋರಾ ಆಕ್ಷೇಪ; ಅಂಕಿ-ಅಂಶಗಳ ಸಮೇತ ವಿವರಣೆ

ವಿಶ್ವ ಆರೋಗ್ಯ ಸಂಸ್ಥೆ ಅನುಸರಿಸಿರುವ ಮಾದರಿ, ಅಂಕಿಅಂಶಕ್ಕೆ ಭಾರತ ಆಕ್ಷೇಪ

ದೇಶದಲ್ಲಿ ಕೊರೊನಾವೈರಸ್  ಸಂಬಂಧಿತ ಸಾವುಗಳಿಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ  ಹಂಚಿಕೊಂಡ ಅಂಕಿಅಂಶಗಳಿಗೆ ಭಾರತ ಗುರುವಾರ ತನ್ನ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಜನವರಿ 1, 2020 ಮತ್ತು ಡಿಸೆಂಬರ್ 31, 2021 ರ ನಡುವೆ ಭಾರತವು 4.7 ಮಿಲಿಯನ್ ಹೆಚ್ಚುವರಿ ಕೊವಿಡ್ ಸಾವುಗಳನ್ನು ವರದಿ ಮಾಡಿದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ. ಕೊವಿಡ್ನಿಂದಾಗಿ  ಒಟ್ಟು 14.9 ಮಿಲಿಯನ್ ಸಾವುಗಳು ಸಂಭವಿಸಿವೆ. ಅಂದರೆ ಈ ವೈರಸ್ ವಿಶ್ವಾದ್ಯಂತ ಅಧಿಕೃತವಾಗಿ ದಾಖಲಾದ ಜೀವಗಳಿಗಿಂತ ಮೂರು ಪಟ್ಟು ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಡಬ್ಲ್ಯುಎಚ್‌ಒ ವರದಿಯನ್ನು ಬಿಡುಗಡೆ ಮಾಡಿದ ಕೂಡಲೇ ಅಧಿಕೃತ ದತ್ತಾಂಶದ ಲಭ್ಯತೆಯ ದೃಷ್ಟಿಯಿಂದ ಹೆಚ್ಚುವರಿ ಮರಣದ ಅಂದಾಜುಗಳನ್ನು ತೋರಿಸಲು ಗಣಿತದ ಮಾದರಿಯ ಬಳಕೆಗೆ ತನ್ನ ಆಕ್ಷೇಪಣೆಗಳನ್ನು ತಿಳಿಸುವ ಮೂಲಕ ಕೇಂದ್ರವು ವರದಿಯನ್ನು ನಿರಾಕರಿಸಿತು. ಬಳಸಿದ ಮಾದರಿಗಳ ಸಿಂಧುತ್ವ ಮತ್ತು ದೃಢತೆ ಮತ್ತು ಡೇಟಾ ಸಂಗ್ರಹಣೆಯ ವಿಧಾನಗಳು ಪ್ರಶ್ನಾರ್ಹವಾಗಿವೆ ಎಂದು ಅದು ಹೇಳಿದೆ. ಪ್ರಕ್ರಿಯೆ, ವಿಧಾನ ಮತ್ತು ಫಲಿತಾಂಶದ ಬಗ್ಗೆ ಭಾರತದ ಆಕ್ಷೇಪಣೆಯ ಹೊರತಾಗಿಯೂ, ವಿಶ್ವ ಆರೋಗ್ಯ ಸಂಸ್ಥೆ ಭಾರತದ ಕಳವಳಗಳನ್ನು ಸಮರ್ಪಕವಾಗಿ ಪರಿಹರಿಸದೆ ಹೆಚ್ಚುವರಿ ಮರಣದ ಅಂದಾಜುಗಳನ್ನು ಬಿಡುಗಡೆ ಮಾಡಿದೆ ಎಂದು ಹೇಳಿಕೆಯಲ್ಲಿ ಹೇಳಲಾಗಿದೆ.

ಭಾರತೀಯ ರಿಜಿಸ್ಟ್ರಾರ್ ಜನರಲ್​​ನಿಂದ ಸಿವಿಲ್ ರಿಜಿಸ್ಟ್ರೇಶನ್ ಸಿಸ್ಟಮ್  ಮೂಲಕ ಪ್ರಕಟಿಸಲಾದ ಅಧಿಕೃತ ಡೇಟಾದ ಲಭ್ಯತೆಯ ಬಗ್ಗೆ ಭಾರತವು ಆರೋಗ್ಯ ಸಂಸ್ಥೆಗೆ ತಿಳಿಸಿದೆ. ಭಾರತಕ್ಕೆ ಹೆಚ್ಚಿನ ಮರಣ ಸಂಖ್ಯೆಗಳನ್ನು ತೋರಿಸುವುದಕ್ಕೆ ಗಣಿತದ ಮಾದರಿಗಳನ್ನು ಬಳಸಬಾರದು ಎಂದು ಅದು ಹೇಳಿದೆ. “ಭಾರತದಲ್ಲಿ ಜನನ ಮತ್ತು ಮರಣಗಳ ನೋಂದಣಿ ಅತ್ಯಂತ ದೃಢವಾಗಿದೆ ಮತ್ತು ದಶಕಗಳ ಹಿಂದಿನ ಶಾಸನಬದ್ಧ ಕಾನೂನು ಚೌಕಟ್ಟಿನಿಂದ ನಿಯಂತ್ರಿಸಲ್ಪಡುತ್ತದೆ” ಎಂದು ಅದು ಹೇಳಿದೆ. ಮೇ 3 ರಂದು ಭಾರತದಲ್ಲಿ ಅಧಿಕೃತ ಕೊವಿಡ್-19 ಸಾವಿನ ಸಂಖ್ಯೆ 522,676 ಆಗಿದೆ.

ರಾಷ್ಟ್ರಗಳನ್ನು ಶ್ರೇಣಿ I ಮತ್ತು II ವರ್ಗಗಳಾಗಿ ವರ್ಗೀಕರಿಸಲು ವಿಶ್ವ ಆರೋಗ್ಯ ಸಂಸ್ಥೆ ಬಳಸುತ್ತಿರುವ ಮಾನದಂಡಗಳಲ್ಲಿನ ಅಸಂಗತತೆಗಳನ್ನು ಮತ್ತು ಭಾರತವನ್ನು ಎರಡನೇ ವರ್ಗಕ್ಕೆ ಇರಿಸಲು ಇದು ಆಧಾರವಾಗಿದೆ ಎಂದು ಸರ್ಕಾರ ಹೇಳಿದೆ.

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 3:33 pm, Fri, 6 May 22