ಪಕ್ಷದ ಸಂಘಟನೆ ಮತ್ತು ಮುಂಬರುವ ಚುನಾವಣೆಗಳ ಬಗ್ಗೆ ಸುರ್ಜೇವಾಲಾ ಚರ್ಚೆ ನಡೆಸಿದರು: ಲಕ್ಷ್ಮಣ ಸವದಿ
ಕೆಲ ಸಚಿವರು ಶಾಸಕರನ್ನು ಅಸಡ್ಡೆ ಮಾಡುತ್ತಿರುವ ಮತ್ತು ಫೋನ್ ಕರೆಗಳಿಗೆ ಉತ್ತರಿಸದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಸವದಿ, ತಮ್ಮೊಂದಿಗೆ ಅಂಥ ಘಟನೆಗಳು ನಡೆದಿಲ್ಲ; ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಉಳಿದ ಮಂತ್ರಿಗಳು ಕರೆಗಳನ್ನು ರಿಸೀವ್ ಮಾಡಿದ್ದಾರೆ ಮತ್ತು ತಮ್ಮ ಕ್ಷೇತ್ರದ ಕೆಲಸಗಳ ವಿಷಯದಲ್ಲಿ ಬೇಡಿಕೆ ಇಟ್ಟಾಗ ಸ್ಪಂದಿಸಿ ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ ಎಂದು ಸವದಿ ಹೇಳಿದರು.
ಬೆಂಗಳೂರು, ಜುಲೈ 7: ಕೆಪಿಸಿಸಿ ಕಚೇರಿಯಲ್ಲಿ ರಾಜ್ಯದ ಎಐಸಿಸಿ ಉಸ್ತುವಾರಿ ರಂದೀಪ್ ಸುರ್ಜೇವಾಲಾ (Randeep Surjewala) ಅವರನ್ನು ಭೇಟಿಯಾದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅಥಣಿ ಶಾಸಕ ಲಕ್ಷ್ಮಣ ಸವದಿ, ಪ್ರಮುಖವಾಗಿ ಪಕ್ಷದ ಸಂಘಟನೆ ವಿಷಯದಲ್ಲಿ ಚರ್ಚೆ ಆಯಿತು, ಮುಂಬರುವ ಎಲ್ಲ ಸ್ಥಳೀಯ ಮತ್ತು ಪಂಚಾಯತ್ ಚುನಾವಣೆ ಮತ್ತು ಮೂರು ವರ್ಷಗಳ ನಂತರ ನಡೆಯುವ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪುನಃ ಅಧಿಕಾರಕ್ಕೆ ತರುವ ಬಗ್ಗೆ ಸುರ್ಜೇವಾಲಾ ಅವರೊಂದಿಗೆ ಮಾತುಕತೆ ನಡೆಯಿತು ಎಂದು ಸವದಿ ಹೇಳಿದರು. ಕ್ಷೇತ್ರಾವಾರು ಅನುದಾನ ಬಿಡುಗಡೆಯ ವಿಷಯದಲ್ಲಿ ಸುರ್ಜೇವಾಲಾ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ, ಮನದಾಳದ ಮಾತುಗಳನ್ನು ಅವರಿಗೆ ಹೇಳಿದ್ದೇನೆ ಎಂದು ಶಾಸಕ ಹೇಳಿದರು.
ಇದನ್ನೂ ಓದಿ: ಲಕ್ಷ್ಮಣ ಸವದಿ ಮನೆಗೆ ಉಪಹಾರಕ್ಕೆ ಬಂದ ರಂದೀಪ್ ಸುರ್ಜೆವಾಲಾ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಭಾಷಣ ಚೆನ್ನಾಗಿತ್ತು ಎಂದರು!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

