AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ತೊಂದರೆಗಳೇ ಹೆಚ್ಚಿದ್ದರೂ ಇನ್ನೊಬ್ಬರಿಗೆ ಸಹಾಯ ಮಾಡುವಿರಿ

ಜುಲೈ 8, 2024 ರ ಬೆಂಗಳೂರಿನ ದಿನಚರಿ ಪಂಚಾಂಗ ಮತ್ತು ರಾಶಿಗಳ ಭವಿಷ್ಯಗಳನ್ನು ಈ ಲೇಖನ ಒಳಗೊಂಡಿದೆ. ಪ್ರತಿಯೊಂದು ರಾಶಿಯವರಿಗೂ ದಿನದ ಶುಭ ಮತ್ತು ಅಶುಭ ಸಮಯಗಳು, ಆರ್ಥಿಕ, ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಬಗ್ಗೆ ವಿವರವಾದ ಭವಿಷ್ಯಗಳನ್ನು ನೀಡಲಾಗಿದೆ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲಾಫಲ ಎನ್ನುವುದನ್ನು ತಿಳಿದುಕೊಳ್ಳಿ.

ನಿಮ್ಮ ತೊಂದರೆಗಳೇ ಹೆಚ್ಚಿದ್ದರೂ ಇನ್ನೊಬ್ಬರಿಗೆ ಸಹಾಯ ಮಾಡುವಿರಿ
ಭವಿಷ್ಯ
ಗಂಗಾಧರ​ ಬ. ಸಾಬೋಜಿ
|

Updated on: Jul 08, 2025 | 12:10 AM

Share

ಬೆಂಗಳೂರು, ಜುಲೈ 08, ನಿತ್ಯಪಂಚಾಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಸೌರ ಮಾಸ : ಮಿಥುನ, ವಾರ : ಮಂಗಳ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಜ್ಯೇಷ್ಠಾ ಯೋಗ : ಶಿವ, ಕರಣ : ಕೌಲವ, ಸೂರ್ಯೋದಯ – 06 – 10 am, ಸೂರ್ಯಾಸ್ತ – 07 – 04 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:51 – 17:28, ಯಮಘಂಡ ಕಾಲ 09:24 – 11:01, ಗುಳಿಕ ಕಾಲ 12:38 – 14:15

ಮೇಷ ರಾಶಿ:  ಸತ್ಯಾನ್ವೇಷಣೆಯ ಮಾರ್ಗ ಸರಿಯಾಗಿರುವ ನಂಬಿಕೆ ಬರಲಿದೆ. ಕೆಲವು ಘಟನೆಗಳನ್ನು ನೀವು ಮರೆಯಲಾಗದು. ಸವಾಲುಗಳು ಬೇಡವೆಂದರೂ ಬರುತ್ತವೆ. ಕೆಲಸದ ಸ್ಥಳದಲ್ಲಿ ಭಿನ್ನಾಭಿಪ್ರಾಯ ಇರಲಿದೆ. ಸ್ನೇಹಿತರ ಮಾತು ನಿಮಗೆ ಸಿಟ್ಟನ್ನು ತರಿಸಬಹುದು. ಆತ್ಮೀಯರ ಸಲಹೆಯನ್ನು ಸ್ವೀಕರಿಸುವಿರಿ. ಕಳೆದುಹೋದ ಸಮಯವನ್ನು ಮತ್ತೆ ನೆನಪಿಸಿಕೊಳ್ಳಲು ಹೋಗುವುದಿಲ್ಲ. ವಾಹ‌ನದ ವಿಚಾರದಲ್ಲಿ ಸಂತೃಪ್ತಿ ಇರಲಿದೆ. ನಿಮ್ಮ ಹೆಸರು ಬರಬೇಕೆಂದು ಬಹಳ ಶ್ರಮವಹಿಸುವಿರಿ. ಆದರೆ ಅದೆಲ್ಲವೂ ವ್ಯರ್ಥವಾಗಬಹುದು. ಇರುವುದನ್ನು ಹಾಗೆಯೇ ಹೇಳಿದ್ದರಿಂದ ನೀವು ನಿಷ್ಠುರರಾಗುವಿರಿ. ದಾಂಪತ್ಯದಲ್ಲಿ ಹೆಚ್ಚು ಖುಷಿಯನ್ನು ಅನುಭವಿಸಲಿದ್ದೀರಿ. ಆರ್ಥಿಕತೆಯ ಹೊರೆಯನ್ನು ಕಡಿಮೆ ಮಾಡಿಕೊಳ್ಳಿ. ಜಲೋದ್ಯಮದಲ್ಲಿ ತೊಡಗಿದವರಿಗೆ ಅಲ್ಪ ಲಾಭ ಆಗಲಿದೆ. ಕುಟುಂಬದವರ ಬಗೆಗಿನ ನಿಂದನೆಯನ್ನು ಸಹಿಸಲಾರಿರಿ. ನಿಮ್ಮ ಆದಾಯ ಮೂಲವನ್ನು ಎಲ್ಲರ ಜೊತೆ ಹಂಚಿಕೊಳ್ಳುವ ಸಂದರ್ಭವು ಬರಬಹುದು. ಸಹವಾಸವು ಉತ್ತಮರ ಜೊತ ಇರಲಿ.

ವೃಷಭ ರಾಶಿ: ಅರೆಕಾಲಿಕ ಉದ್ಯೋಗದಿಂದ ಪೂರ್ಣಾವಧಿಗೆ ಹೋಗುವಿರಿ. ಅಕಾರಣವಾಗಿ ಉದ್ವೇಗ ಒಳಗಾಗುವುದು ನಿಮ್ಮವರಿಗೆ ಅಚ್ಚರಿಯಾದೀತು. ಸಂಪತ್ತು ಬರುವುದು ಮಾತ್ರ ಕಾಣಿಸುತ್ತದೆ. ನೋಡು ನೋಡುತ್ತಿದ್ದಂತೆ ಎಲ್ಲವೂ ಖಾಲಿಯಾಗುವುದು. ನಿಮ್ಮ ವಸ್ತುಗಳು ಕೆಲವು ಸಮಯ ಕಣ್ಮರೆಯಾದೀತು. ಕೂಡಿಟ್ಟ ಹಣವೆಲ್ಲವೂ ಕರಗುತ್ತಿದೆ ಎನ್ನುವ ಭಯವು ಉಂಟಾಗಲಿದೆ. ನಿಮ್ಮ ನೆಚ್ಚಿನವರ ಭೇಟಿಯಾಗಬಹುದು. ಅವರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಅವಕಾಶಗಳಿದ್ದರೂ ಬಳಸಿಕೊಳ್ಳುವ ಮನಸ್ಸು ಇರದು. ಸಾಲದ ಭಯವೇ ನಿಮ್ಮನ್ನು ಕಾಡುವುದು. ನೀವು ಹೇಳಿದ್ದು ಆಗಬೇಕಾದರೆ, ಆಗುವಂತೆ ಹೇಳಿ. ರಾಜಕಾರಣಿಗಳು ಬಹಳ ಜಾಗರೂಕತೆಯಿಂದ ಜವಾಬ್ದಾರಿಯನ್ನು ನಿರ್ವಹಿಸಿ. ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯಬಹುದು. ವಿದ್ಯಾರ್ಥಿಗಳು ಉತ್ತಮವಾದ ಲಕ್ಷ್ಯವನ್ನು ಇಟ್ಟುಕೊಂಡಿದ್ದರೂ ನಿಮಗೆ ತಲುಪಲು ಕಷ್ಟವಾದೀತು. ಕೃಷಿ ಕಾರ್ಯಗಳೇ ನಿಮಗೆ ಹಿತವೆನಿಸುವುದು. ವಿಶ್ವಾಸಘಾತದಿಂದ ನಿಮಗೆ ಬೇಸರವಾಗಬಹುದು.

ಮಿಥುನ ರಾಶಿ: ಅಂಟಿಕೊಂಡಿದ್ದರೆ ಸುಖಕ್ಕಿಂತ ಹೆಚ್ಚು ದುಃಖವೇ ಕೊನೆ ಕ್ಷಣದಲ್ಲಿ ಆಗುವುದು. ಇಂದು ನಿಮ್ಮ ಮುಂದಿನ ಒಳ್ಳೆಯ ಕಾಲವನ್ನು ಎದುರುನೋಡುತ್ತ ಕುಳಿತಿರುವಿರಿ. ನಿಮ್ಮ ತೊಂದರೆಗಳೇ ಸಾವಿರವಿದ್ದರೂ ಇನ್ನೊಬ್ಬರಿಗೆ ಸಹಾಯವನ್ನು ಮಾಡುವಿರಿ. ವಿದ್ಯಾರ್ಥಿಗಳು ಅಧಿಕ ಅಧ್ಯಯನವನ್ನು ಮಾಡಬೇಕಿದೆ. ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯುವ ತವಕವಿರುವುದು. ತಂದೆಯವರಿಗೆ ಎದುರು ಮಾತನಾಡುವ ಸ್ವಭಾವವನ್ನು ಬಿಡುವುದು ಒಳ್ಳೆಯದು. ನಿಮ್ಮ ಅಂತರಂಗದಲ್ಲಿ ನಿಮ್ಮ ಕೆಲಸಕ್ಕೆ ಪಶ್ಚಾತ್ತಾಪಭಾವವು ಮೂಡಬಹುದು. ದಿನದ ವೇತನ ಸಿಗದೇ ನಿಮಗೆ ಅಸ್ತಿಮಿತತೆ ಆಗುವುದು. ಯಾರ ಸಹಾಯವನ್ನೂ ಒಡೆಯದೇ ಸ್ವತಂತ್ರವಾಗಿ ಇಂದಿನ ಕೆಲಸವನ್ನು ಮಾಡಿ ಮುಗಿಸುವಿರಿ. ಯಾರಿಗೋ ಸಮಾನವಾಗಿ ನಿಲ್ಲುವ ದುಸ್ಸಾಹಸ ಬೇಡ. ಸಂಗಾತಿಗೆ ಸಮಯವನ್ನು ಕೊಡುತ್ತೇನೆಂದರೂ ಆಗದು. ಇಂದು ನಿಮ್ಮ ಅಗತ್ಯ ಕಾರ್ಯಗಳಿಗೆ ಸಮಯವನ್ನು ಕೊಡುವುದು ಕಷ್ಟವಾದೀತು. ನಾಚಿಕೆಯ ಸ್ವಭಾವವು ನಿಮ್ಮ ಕಾರ್ಯಗಳಿಗೆ ಅಡ್ಡಿಯಾಗುವುದು.

ಕರ್ಕಾಟಕ ರಾಶಿ: ಉದ್ಧಟತನವು ನಿಮ್ಮನ್ನು ಎಲ್ಲರಿಂದ ದೂರವಿರಿಸುವುದು‌. ನಿಮ್ಮ ಆಸೆಗಳು ಕೈಗೂಡುವಾಗ ಅದನ್ನು ಅನುಭವಿಸುವ ಮಾನಸಿಕತೆಯೂ ಬೇಕಾಗುವುದು. ಪ್ರವಾಸಕ್ಕೆ ಮನಸ್ಸು ಮಾಡುವಿರಿ. ಮನಸ್ಸಿಗೆ ಹಿತವಾದ ಸಂಗತಿಗಳು ನಡೆಯಲಿದೆ. ಎಲ್ಲದಕ್ಕೂ ಸಿಟ್ಟುಗೊಳ್ಳುವ ಅಗತ್ಯವಿಲ್ಲ. ಕೆಲವೊಂದನ್ನು ಹಾಗಯೇ ಬಿಡುವುದು ಒಳ್ಳೆಯದು. ಹಣವನ್ನು ಹೊಂದಿಸಲು ಹೆಚ್ಚು ಕಷ್ಟವಾದೀತು. ಏಕಕಾಲದಲ್ಲಿ ಎಲ್ಲವನ್ನೂ ಮಾಡಲಾಗದು. ಧಾರ್ಮಿಕವಾಗಿ ಶ್ರದ್ಧೆ ಉಳ್ಳವರಾದರೂ ಅದನ್ನು ತೋರಿಸಿಕೊಳ್ಳುವುದಿಲ್ಲ. ವಿದ್ಯಾರ್ಥಿಗಳ ವಿದ್ಯಾಭ್ಯಾಸ ಒಂದು ಕಡೆಯಿಂದ ಇನ್ನೊಂದು ಕಡೆಗೆ ಆಗಲಿದೆ. ಹಾಗಾಗಿ ನಿಮ್ಮನ್ನು ನಾಸ್ತಿಕರು ಎಂದುಕೊಂಡಾರು. ವಿವಾದಕ್ಕೆ ಆದಷ್ಟು ಆಸ್ಪದ ಕೊಡದಿದ್ದರೇ ಉತ್ತಮ. ಕೆಲಸದಿಂದ ನೀವು ನಿರೀಕ್ಷಿಸಿರುವುದು ಸಾಕಾರಗೊಳ್ಳಬಹುದು. ಉದ್ಯೋಗಿಗಳಿಗೆ ವೇತನ ಸಿಗುವುದು. ಸಾಲವನ್ನು ತೀರಿಸುವ ಭರದಲ್ಲಿ ಖರ್ಚಿಗೂ ಹಣವನ್ನು ಇಟ್ಟುಕೊಳ್ಳುವುದನ್ನು ಮರೆಯಬಹುದು. ಆಸ್ತಿಯ‌ ಖರೀದಿಗೆ ಬೇಕಾದ ಹಣವನ್ನು ನೀವು ಇನ್ನೊಬ್ಬರಿಂದ ಸಾಲವಾಗಿ ಪಡೆಯುವಿರಿ.

ಸಿಂಹ ರಾಶಿ: ಸೂಕ್ಷ್ಮ ಕೆಲಸವನ್ನು ಅನ್ಯರಿಗೆ ವಹಿಸಿಕೊಡುವಿರಿ. ನಿಮ್ಮ ವಸ್ತುವನ್ನೇ ನೀವು ಮರಳಿ ಪಡೆಯಲು ಮುಜುಗರ ಪಡುವಿರಿ. ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಇರಲಿವೆ. ವೃತ್ತಿಯಲ್ಲಿ‌ ನೀವು ಜಾಣ್ಮೆಯಿಂದ ಕೆಲಸ ಮಾಡುವಿರಿ. ಅಪವಾದಗಳನ್ನು ಧೈರ್ಯದಿಂದ ಎದುರಿಸುವ ಛಾತಿಯನ್ನು ಹೊಂದಿರುವಿರಿ. ನಿಮ್ಮ ಜ್ಞಾನವನ್ನು ಕಂಡು ಅಚ್ಚರಿಗೊಳ್ಳಬಹುದು. ಹೊಸ ಬೇಡಿಕೆಯಿಂದ ಉದ್ಯಮ ಚುರುಕಾಗುವುದು. ಸಂವೇದನಾಶೀಲ ವ್ಯಕ್ತಿತ್ವವನ್ನು ಹೊಂದಿದ್ದೀರಿ. ಚೌಕಟ್ಟಿನಲ್ಲಿ ಕೆಲಸ ಮಾಡುವುದು ನಿಮಗೆ ಬಹಳ ಕಷ್ಟವಾದೀತು. ನಿಮ್ಮ ಇಂದಿನ ಸಂಭ್ರಮಕ್ಕೆ ಕಾರಣ ಬೇಕಾಗಿರುವುದಿಲ್ಲ. ದೂರದ ಬಂಧುಗಳ ಆಗಮನವಾಗಲಿದೆ. ವಿವಾಹಕ್ಕೆ ಸಂಬಂಧಪಟ್ಟ ಮಾತುಕತೆ ನಡೆಯಬಹುದು. ವ್ಯಾಪಾರದಲ್ಲಿ ಸಾಮಾನ್ಯ‌ ಲಾಭವಾಗಲಿದೆ. ಉದ್ಯೋಗಿಗಳಾಗಿದ್ದರೆ ವೃತ್ತಿಯನ್ನು ಬಿಡುವ ಆಲೋಚನೆಯಲ್ಲಿ ನೀವಿರುವಿರಿ. ನಿಮ್ಮ ಬೆನ್ನನ್ನೇ ತಟ್ಟಿಕೊಂಡು ಸುಖಿಸುವ ದಿನ. ಲಾಭವಿಲ್ಲದ ಕಾರ್ಯದಲ್ಲಿ ಆಸಕ್ತಿಯು ಇರದು. ಕೆಲವು ವಿಚಾರದಲ್ಲಿ ನಿಮ್ಮ ಊಹೆಯು ತಪ್ಪಾದೀತು.

ಕನ್ಯಾ ರಾಶಿ: ಸುಳ್ಳಾಡಿ ಕೊನೆಗೆ ಬೇಸರವಾಗುವುದು. ಇಂದು ನಿಮಗೆ ಒತ್ತಡದಿಂದ ದೂರವಾಗಲು ಕಷ್ಟವಾಗುವುದು. ಇಂದು ನಿಮ್ಮವರ ಬಗ್ಗೆ ಅನುಮಾನ ಕಾಡಬಹುದು. ಪರೀಕ್ಷಿಸದೇ ಯಾವ ತೀರ್ಮಾನಕ್ಕೂ ಬರುವುದು ಬೇಡ. ಮನೆಯ ವಾತಾವರಣವು ಈ ದಿನದ ಕೆಲಸವನ್ನು ಹಾಳುಮಾಡಿಸುವುದು. ಕಾರಣವಿಲ್ಲದೇ ಯಾವುದೂ ಆಗದು ಎಂಬ ದೃಢತೆ ಇರವುದು. ಮನಸ್ಸಿಲ್ಲದ‌ ಮನಸ್ಸಿನಿಂದ ಇಂದು ನೀವು ಅಧ್ಯಾತ್ಮದ ಚಿಂತನೆಯಲ್ಲಿ ತೊಡಗಿಕೊಳ್ಳಬೇಕಾಗಬಹುದು. ಶುಭವಾರ್ತೆಯು ನಿಮ್ಮ ಕೆಲಸಕ್ಕೆ ಬೆಂಬಲವನ್ನು ಕೊಡುವುದು‌. ಜವಾಬ್ದಾರಿಯುತ ಸ್ಥಾನವು ನಿಮಗೆ ಬರಬಹುದು. ವಿನಮ್ರತೆಯು ನಿಮ್ಮ ಕೆಲಸಕ್ಕೆ ಜಯವನ್ನು ಕೊಟ್ಟೀತು. ಆದ್ಯತೆಯ ಮೇರೆಗೆ ಕೆಲಸವನ್ನು ಮಾಡಿ ಮುಗಿಸಿ. ಶಿಸ್ತಿನ ಸ್ವಭಾವವು ಇಷ್ಟವಾದೀತು. ಸತ್ಯವನ್ನು ಹೇಳಿ ತೊಂದರೆ ಸಿಕ್ಕಿಹಾಕಿಕೊಳ್ಳಬೇಕಾದೀತು. ಆಸ್ತಿ ಖರೀದಿಯನ್ನು ಮಾಡುವಿರಿ. ಸಂಗಾರಿಯ ಮೇಲಿನ ಪ್ರೀತಿಯು ಕಡಿಮೆಯಾದಂತೆ ತೋರುವುದು. ಕೆಲವರಿಗೆ ಸೌಕರ್ಯಗಳು ಕಡಿಮೆಯಾದಂತೆ ಅನ್ನಿಸುವುದು.

​ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?
​ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?
ಕೆಪಿಸಿಸಿ ಅಧ್ಯಕ್ಷನ ಜೊತೆಗಿನ ತಿಕ್ಕಾಟವೇ ರಾಜಣ್ಣನಿಗೆ ಮುಳುವಾಯಿತೇ?
ಕೆಪಿಸಿಸಿ ಅಧ್ಯಕ್ಷನ ಜೊತೆಗಿನ ತಿಕ್ಕಾಟವೇ ರಾಜಣ್ಣನಿಗೆ ಮುಳುವಾಯಿತೇ?
ವಿಷ್ಣು ಸಮಾಧಿ ಧ್ವಂಸ: ಸಾ.ರಾ. ಗೋವಿಂದು ಎದುರು ನೋವು ತೋಡಿಕೊಂಡ ಫ್ಯಾನ್ಸ್
ವಿಷ್ಣು ಸಮಾಧಿ ಧ್ವಂಸ: ಸಾ.ರಾ. ಗೋವಿಂದು ಎದುರು ನೋವು ತೋಡಿಕೊಂಡ ಫ್ಯಾನ್ಸ್
ಸತ್ಯ ಹೇಳಿದ್ದಕ್ಕೆ ಬೆಲೆ ತೆತ್ತರ ಅಂತ ತೀರ್ಮಾನಿಸುವವರು ನಾವಲ್ಲ: ಎಸ್​ಟಿಎಸ್
ಸತ್ಯ ಹೇಳಿದ್ದಕ್ಕೆ ಬೆಲೆ ತೆತ್ತರ ಅಂತ ತೀರ್ಮಾನಿಸುವವರು ನಾವಲ್ಲ: ಎಸ್​ಟಿಎಸ್
ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು