ಮಧ್ಯಪ್ರದೇಶ: ಕಟ್ಟಡಕ್ಕೆ ಬೆಂಕಿ ಹಚ್ಚಿ ಏಳು ಮಂದಿಯ ಸಾವಿಗೆ ಕಾರಣನಾದ ಭಗ್ನಪ್ರೇಮಿಯ ಬಂಧನ
ಸಂಜಯ್ ಈ ಯುವತಿಗೆ ಸ್ವಲ್ಪ ಹಣವನ್ನು ಸಾಲವಾಗಿ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಗೆ ಬೇರೊಂದು ವಿವಾಹ ನಿಶ್ಚಯವಾದ ಮೇಲೆ ಈತ ಆಕೆಗೆ ಕಾಟ ಕೊಡಲು ಆರಂಭಿಸಿದ್ದನು.
ಭೋಪಾಲ್: ಮಧ್ಯಪ್ರದೇಶದ (Madhya Pradesh) ಇಂದೋರ್‌ನಲ್ಲಿ (Indore) ಕಟ್ಟಡಕ್ಕೆ ಬೆಂಕಿ ತಗುಲಿ ಏಳು ಮಂದಿ ಸಾವನ್ನಪ್ಪಿದ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಸಂಜಯ್ ಎಂದು ಕರೆಯಲ್ಪಡುವ ಶುಭಂ ದೀಕ್ಷಿತ್ (27) (Shubham Dixit)ಎಂಬಾತ ತನ್ನನ್ನು ತಿರಸ್ಕರಿಸಿದ ಯುವತಿಯ ಮೇಲೆ ಸೇಡು ತೀರಿಸಿಕೊಳ್ಳಲು ಬೆಂಕಿ ಹಚ್ಚಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆ ಯುವತಿ ಕಟ್ಟಡದಲ್ಲಿ ವಾಸವಾಗಿದ್ದು, ಶನಿವಾರ ಕಟ್ಟಡಕ್ಕೆ ಬೆಂಕಿ ಹಂಚಲಾಗಿತ್ತು. ಬೆಂಕಿ ನಂದಿಸುವ ಕಾರ್ಯಾಚರಣೆ ವೇಳೆ ಆಕೆ ಮತ್ತು ಆಕೆಯ ತಾಯಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಸಂಜಯ್ ಈ ಯುವತಿಗೆ ಸ್ವಲ್ಪ ಹಣವನ್ನು ಸಾಲವಾಗಿ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಗೆ ಬೇರೊಂದು ವಿವಾಹ ನಿಶ್ಚಯವಾದ ಮೇಲೆ ಈತ ಆಕೆಗೆ ಕಾಟ ಕೊಡಲು ಆರಂಭಿಸಿದ್ದನು. ತಾನು ಕೊಟ್ಟ ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿ, ಈತ ಆಗಾಗ ಜಗಳವಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. “ಕಟ್ಟಡದ ಪಾರ್ಕಿಂಗ್ ಸ್ಥಳದಿಂದ ಪಡೆಯಲಾದ ಸಿಸಿಟಿವಿ ದೃಶ್ಯಗಳಲ್ಲಿ, ಸಂಜಯ್ ಶನಿವಾರ ಮುಂಜಾನೆ 2.55 ಕ್ಕೆ ಪ್ರವೇಶಿಸಿ ಮಹಿಳೆಯ ಸ್ಕೂಟರ್ ಮೇಲೆ ಏನನ್ನೋ ಸುರಿಯುತ್ತಿರುವುದು ಕಂಡುಬಂದಿದೆ” ಎಂದು ಇಂದೋರ್‌ನ ಹಿರಿಯ ಪೊಲೀಸ್ ಅಧಿಕಾರಿ ಸಂಪತ್ ಉಪಾಧ್ಯಾಯ ಹೇಳಿದ್ದಾರೆ. ಇಲ್ಲಿಂದ ಪಡೆಯಲಾದ ದೃಶ್ಯಾವಳಿಗಳು ಅಲ್ಲಿ ನಿಲ್ಲಿಸಲಾಗಿದ್ದ ಇತರ ವಾಹನಗಳಿಗೆ ಬೆಂಕಿ ಹಬ್ಬುತ್ತಿರುವುದು ಕಾಣುತ್ತದೆ. ಈ ಬೆಂಕಿ ವ್ಯಾಪಕವಾಗಿ ಹಬ್ಬಿ ಏಳು ಜೀವಗಳನ್ನು ಬಲಿತೆಗೆದುಕೊಂಡಿತು. ಕೃತ್ಯವೆಸಗಿದ ಆ ವ್ಯಕ್ತಿ ಸ್ಥಳದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳನ್ನು ಹಾಳುಮಾಡಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
“ಅವನನ್ನು ನಿನ್ನೆ ತಡರಾತ್ರಿ ಬಂಧಿಸಲಾಗಿದೆ. ಅವರು ಓಡಿಹೋಗಲು ಪ್ರಯತ್ನಿಸಿದಾಗ ಲೋಹಮಂಡಿ ಪ್ರದೇಶದಲ್ಲಿ ರಸ್ತೆಯ ಮೇಲೆ ಬಿದ್ದು ಗಾಯಗೊಂಡಿದ್ದಾನೆ. ಈತನ ಮೇಲೆ ಬೆಂಕಿ ಹಚ್ಚಿ ಕೊಲೆ ಮತ್ತು ಕಿಡಿಗೇಡಿತನದ ಆರೋಪವಿದೆ.”
ಮಹಿಳೆ ಮೊದಲು ಫ್ಯಾಷನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು ಮತ್ತು ತನ್ನ ತಾಯಿಯೊಂದಿಗೆ ಕಟ್ಟಡದ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಳು. ಆರೋಪಿ ಉತ್ತರ ಪ್ರದೇಶದ ಝಾನ್ಸಿ ಮೂಲದವರು. ಮುಂಜಾನೆಯ ಬೆಂಕಿಯು ಏಳು ಮಂದಿಯನ್ನು ಬಲಿ ತೆಗೆದುಕೊಂಡಿತು. ಅವರಲ್ಲಿ ಒಂದು ದಂಪತಿ ನೆರೆಹೊರೆಯಲ್ಲಿ ತಮ್ಮ ಮನೆಯ ನಿರ್ಮಾಣವನ್ನು ಮೇಲ್ವಿಚಾರಣೆ ಮಾಡಲು ಅಲ್ಲಿ ವಾಸಿಸುತ್ತಿದ್ದರು. ಉಳಿದವರಲ್ಲಿ ಝಾನ್ಸಿಯ ಕಾಲೇಜು ವಿದ್ಯಾರ್ಥಿನಿ, ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಕೆಲಸದ ಹುಡುಗಿ, ಮದ್ಯದ ಬಾರ್ ಉದ್ಯೋಗಿ ಮತ್ತು ಪಕ್ಕದ ಬಸ್ ಡಿಪೋದ ಉದ್ಯೋಗಿ ಸೇರಿದ್ದಾರೆ.
ಮೃತಪಟ್ಟವರಲ್ಲಿ ಒಬ್ಬರು ಎರಡು ದಿನಗಳ ಹಿಂದೆಯಷ್ಟೇ ಸ್ಥಳಾಂತರಗೊಂಡಿದ್ದರು. ಒಂಬತ್ತು ಜನರನ್ನು ಬೆಂಕಿಯಿಂದ ರಕ್ಷಿಸಲಾಗಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರತಿ ಸಂತ್ರಸ್ತ ಕುಟುಂಬಕ್ಕೆ ₹ 4 ಲಕ್ಷ ಆರ್ಥಿಕ ನೆರವು ಘೋಷಿಸಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ