AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Murder: ಅಮೆರಿಕಾದಿಂದ ಬಂದ ದಿನವೇ ದುರಂತ ಅಂತ್ಯ ಕಂಡ ದಂಪತಿ; ಮಾಲೀಕರನ್ನೇ ಕೊಂದ ಕಾರು ಚಾಲಕ

Crime News: 10 ವರ್ಷಗಳಿಂದ ಅವರ ಬಳಿ ಕೆಲಸ ಮಾಡುತ್ತಿದ್ದ ಚಾಲಕ ಕೃಷ್ಣ ಆ ದಂಪತಿಯನ್ನು ವಿಮಾನ ನಿಲ್ದಾಣದಿಂದ ಕರೆದುಕೊಂಡು ಬರುವಾಗ ಅಪಹರಿಸಿ ಅವರ ಮನೆಯ ಬದಲಾಗಿ ನೆಮಿಲಿಚೇರಿಯಲ್ಲಿರುವ ಅವರ ಫಾರ್ಮ್‌ಹೌಸ್‌ಗೆ ಕರೆದೊಯ್ದಿದ್ದಾನೆ.

Murder: ಅಮೆರಿಕಾದಿಂದ ಬಂದ ದಿನವೇ ದುರಂತ ಅಂತ್ಯ ಕಂಡ ದಂಪತಿ; ಮಾಲೀಕರನ್ನೇ ಕೊಂದ ಕಾರು ಚಾಲಕ
ಕೊಲೆಯಾದ ದಂಪತಿ
TV9 Web
| Edited By: |

Updated on: May 08, 2022 | 5:23 PM

Share

ಹೈದರಾಬಾದ್: ತಮ್ಮ ಮಗಳನ್ನು ಭೇಟಿಯಾಗಿ ಶನಿವಾರ ಬೆಳಿಗ್ಗೆಯಷ್ಟೇ ಅಮೆರಿಕಾದಿಂದ ಹಿಂತಿರುಗಿದ್ದ ದಂಪತಿಯನ್ನು ಆಂಧ್ರ ಪ್ರದೇಶದ ಮೈಲಾಪುರದಲ್ಲಿ ಅವರ ಮನೆಯ ಚಾಲಕ ಮತ್ತು ಮನೆಯ ಸಹಾಯಕರು ಸೇರಿ ಕೊಲೆ (Murder) ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಗಂಡ-ಹೆಂಡತಿಯ ಶವಗಳನ್ನು ಮಾಮಲ್ಲಪುರಂ ಬಳಿಯ ಮನೆಯೊಂದರಲ್ಲಿ ಸಮಾಧಿ ಮಾಡಲಾಗಿದೆ. ಪೊಲೀಸರು ಆರೋಪಿಯನ್ನು ಆಂಧ್ರಪ್ರದೇಶದ ಓಂಗೋಲ್‌ನಲ್ಲಿ ಬಂಧಿಸಿದ್ದಾರೆ.

ಮೃತರನ್ನು ಮೈಲಾಪುರದ ದ್ವಾರಕಾ ಕಾಲೋನಿ ನಿವಾಸಿಗಳಾದ 58 ವರ್ಷದ ಶ್ರೀಕಾಂತ್ ಮತ್ತು 53 ವರ್ಷದ ಅನುರಾಧ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀಕಾಂತ್ ಗುಜರಾತ್​ನಲ್ಲಿ ಸಾಫ್ಟ್​ವೇರ್ ಸಂಸ್ಥೆ ನಡೆಸುತ್ತಿದ್ದರು. ಅವರ ಮನೆಯಲ್ಲಿ 11 ವರ್ಷದಿಂದ ಕೆಲಸ ಮಾಡುತ್ತಿದ್ದ ಕಾರು ಚಾಲಕ ಕೃಷ್ಣ ಶನಿವಾರ ಬೆಳಗಿನ ಜಾವ 3.30ರ ಸುಮಾರಿಗೆ ಅವರಿಬ್ಬರನ್ನೂ ವಿಮಾನ ನಿಲ್ದಾಣದಿಂದ ಕರೆದುಕೊಂಡು ಬಂದಿದ್ದ. ಅವರಿಬ್ಬರೂ 10 ತಿಂಗಳ ಹಿಂದೆ ತಮ್ಮ ಮಗಳನ್ನು ನೋಡಲು ಅಮೆರಿಕಾಗೆ ಹೋದವರು ಶನಿವಾರ ಬೆಳಗ್ಗೆ ವಾಪಾಸ್ ಬಂದಿದ್ದರು.

ಆದರೆ, ಅದೇ ಅವರ ಪಾಲಿಗೆ ಅಂತಿಮ ದಿನವಾಗಿತ್ತು. ಅವರು ಮನೆಗೆ ಬಂದ ಒಂದೆರಡು ಗಂಟೆಗಳ ನಂತರ ಅವರ ಮಗಳು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಈ ಡಬಲ್ ಮರ್ಡರ್ ಬೆಳಕಿಗೆ ಬಂದಿದೆ. ಪದೇಪದೇ ಅಪ್ಪ- ಅಮ್ಮನ ಫೋನ್ ಸ್ವಿಚ್ ಆಫ್ ಆಗಿದೆ ಎಂಬ ಸಂದೇಶ ಬರುತ್ತಿದ್ದಂತೆ ಆಕೆ ಅಡ್ಯಾರ್‌ನಲ್ಲಿರುವ ತನ್ನ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಮನೆಗೆ ದೌಡಾಯಿಸಿದ ಸಂಬಂಧಿಗೆ ಆ ಮನೆಯಲ್ಲಿ ಎಲ್ಲೂ ಶ್ರೀಕಾಂತ್ ಮತ್ತು ಅನುರಾಧಾ ಕಾಣಲಿಲ್ಲ. ಇದರಿಂದ ಅವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.

ಈ ವೇಳೆ ಕಾರಿನ ಚಾಲಕ ಕೃಷ್ಣ ಕೂಡ ನಾಪತ್ತೆಯಾಗಿದ್ದು, ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಮನೆಯಲ್ಲಿದ್ದ ಸ್ಟೀಲ್ ಬೀರುವನ್ನು ಒಡೆಯಲಾಗಿತ್ತು. ಆರಂಭದಲ್ಲಿ ಕೃಷ್ಣನೇ ಆ ದಂಪತಿಯನ್ನು ಕಿಡ್ನಾಪ್ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಆದರೆ, ಆ ದಂಪತಿಯ ಶವ ಪತ್ತೆಯಾದ ನಂತರ ಕೃಷ್ಣನೇ ಅವರನ್ನು ಕೊಲೆ ಮಾಡಿದ್ದಾನೆ ಎಂಬ ಅನುಮಾನ ಪೊಲೀಸರನ್ನು ಕಾಡಿತ್ತು.

ದಂಪತಿ ಮನೆಗೆ ಬಂದ ಕೂಡಲೇ ಕೃಷ್ಣ ಮತ್ತು ಆತನ ಸಹಚರ ರವಿ ಅವರನ್ನು ಹರಿತವಾದ ವಸ್ತುವಿನಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಸೇರಿ ಮನೆಯ ರಕ್ತದ ಕಲೆಗಳನ್ನು ಒರೆಸಿ ಶವಗಳನ್ನು ನೆಮಿಲಿ ಸಮೀಪದ ಅತಿಥಿ ಗೃಹಕ್ಕೆ ಕೊಂಡೊಯ್ದು ಹೊಂಡದಲ್ಲಿ ಹೂತು ಹಾಕಿದ್ದಾರೆ. ನಂತರ ಕಾರಿನಲ್ಲಿದ್ದ ವಸ್ತುಗಳನ್ನು ದೋಚಿ ನೇಪಾಳಕ್ಕೆ ಪರಾರಿಯಾಗಲು ಯತ್ನಿಸಿದ್ದಾರೆ.

10 ವರ್ಷಗಳಿಂದ ಅವರ ಬಳಿ ಕೆಲಸ ಮಾಡುತ್ತಿದ್ದ ಅವರ ಚಾಲಕ ಕೃಷ್ಣ ದಂಪತಿಯನ್ನು ವಿಮಾನ ನಿಲ್ದಾಣದಿಂದ ಕರೆದುಕೊಂಡು ಬರುವಾಗ ಅಪಹರಿಸಿ ಅವರ ಮನೆಯ ಬದಲಾಗಿ ನೆಮಿಲಿಚೇರಿಯಲ್ಲಿರುವ ಅವರ ಫಾರ್ಮ್‌ಹೌಸ್‌ಗೆ ಕರೆದೊಯ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃಷ್ಣ ದಂಪತಿಯನ್ನು ಕೊಲೆ ಮಾಡಿ ತೋಟದಲ್ಲಿ ಹೂತು ಹಾಕಿದ್ದ. ಪೊಲೀಸರು ಕೃಷ್ಣನನ್ನು ಆಂಧ್ರ ಪ್ರದೇಶದಲ್ಲಿ ಬಂಧಿಸಿದ್ದಾರೆ. ದಂಪತಿಯಿಂದ 4 ಲಕ್ಷ ಹಾಗೂ 50 ಪವನ್ ಚಿನ್ನಾಭರಣ ಕದ್ದಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಅವರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೃಷ್ಣನನ್ನು ವಿಚಾರಣೆ ನಡೆಸಲಾಗುತ್ತಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!