ದೆಹಲಿ: ವಾಹನಗಳ ನವೀಕರಣ ಶುಲ್ಕ ಏರಿಕೆಗೆ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಇಲಾಖೆಯಿಂದ ಪ್ರಸ್ತಾವನೆ ಕೇಳಿಬಂದಿದೆ. ಅಂದ ಹಾಗೆ, ಪ್ರಸ್ತಾವನೆಯಲ್ಲಿ ದ್ವಿಚಕ್ರ ವಾಹನಗಳ ನವೀಕರಣ ಶುಲ್ಕ 1,000 ರೂ, ತ್ರಿಚಕ್ರ ವಾಹನಗಳ ನವೀಕರಣ ಶುಲ್ಕ 2,500 ರೂ, ಲಘು ವಾಹನಗಳ ನವೀಕರಣ ಶುಲ್ಕ 5,000 ರೂ, ಗೂಡ್ಸ್ ವಾಹನಗಳ ನವೀಕರಣ ಶುಲ್ಕ 1,000 ರೂ. ಹಾಗೂ ಭಾರಿ ವಾಹನಗಳ ನವೀಕರಣ ಶುಲ್ಕ 1,500 ರೂ. ಎಂದು ನಿಗದಿ ಮಾಡಲಾಗಿದೆ.
ಇದಲ್ಲದೆ, ಹಳೆಯ ವಾಹನವನ್ನು ಗುಜರಿಗೆ ಹಾಕಿದ ಸರ್ಟಿಫಿಕೇಟ್ ನೀಡಿದ್ರೆ ಹೊಸ ವಾಹನದ ರಿಜಿಸ್ಟ್ರೇಷನ್ ಶುಲ್ಕ ಮನ್ನಾ ಆಗಲಿದೆ. ಜೊತೆಗೆ, ವಾಹನ ನವೀಕರಣ ವಿಳಂಬದ ಶುಲ್ಕ 500 ರೂ.ಗೆ ಏರಿಕೆ ಮಾಡಲು ಸಹ ಕೇಂದ್ರ ಸರ್ಕಾರದಿಂದ ಪ್ರಸ್ತಾವನೆ ಬಂದಿದೆ.
ಇದನ್ನೂ ಓದಿ:‘ಸಿಡಿ ಲೇಡಿ’ಗೆ ಎಸ್‌ಐಟಿಯಿಂದ ಮತ್ತೆ ನೋಟಿಸ್ ಜಾರಿ
Published On - 5:30 pm, Wed, 17 March 21