‘ಸಿಡಿ ಲೇಡಿ’ಗೆ ಎಸ್‌ಐಟಿಯಿಂದ ಮತ್ತೆ ನೋಟಿಸ್ ಜಾರಿ
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿರುವ ಸಂತ್ರಸ್ತೆಗೆ ಎಸ್‌ಐಟಿಯಿಂದ ಮತ್ತೆ ನೋಟಿಸ್ ಜಾರಿಯಾಗಿದೆ. ವಿಚಾರಣೆಗೆ ಹಾಜರಾಗುವಂತೆ ಸಂತ್ರಸ್ತೆಗೆ ನೋಟಿಸ್ ಜಾರಿಯಾಗಿದೆ. ಕೆಲ ದಿನಗಳ ಹಿಂದೆ SIT ಅಧಿಕಾರಿಗಳು ಸಿಡಿಯಲ್ಲಿದ್ದ ಲೇಡಿಗೆ ನೋಟಿಸ್ ನೀಡಿದ್ದರು. ಆದರೆ, ಆಕೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಮತ್ತೊಮ್ಮೆ ನೋಟಿಸ್ ಜಾರಿಯಾಗಿದೆ.
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿರುವ ಸಂತ್ರಸ್ತೆಗೆ ಎಸ್‌ಐಟಿಯಿಂದ ಮತ್ತೆ ನೋಟಿಸ್ ಜಾರಿಯಾಗಿದೆ. ವಿಚಾರಣೆಗೆ ಹಾಜರಾಗುವಂತೆ ಸಂತ್ರಸ್ತೆಗೆ ನೋಟಿಸ್ ಜಾರಿಯಾಗಿದೆ. ಕೆಲ ದಿನಗಳ ಹಿಂದೆ SIT ಅಧಿಕಾರಿಗಳು ಸಿಡಿಯಲ್ಲಿದ್ದ ಲೇಡಿಗೆ ನೋಟಿಸ್ ನೀಡಿದ್ದರು. ಆದರೆ, ಆಕೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಮತ್ತೊಮ್ಮೆ ನೋಟಿಸ್ ಜಾರಿಯಾಗಿದೆ.ಅಂದ ಹಾಗೆ, ಈ ಹಿಂದೆ ಸಂತ್ರಸ್ತೆಯ ವಿಜಯಪುರದ ಮನೆ, ಇ-ಮೇಲ್ ಮತ್ತು ವಾಟ್ಸಾಪ್‌ಗೆ ನೋಟಿಸ್ ನೀಡಲಾಗಿತ್ತು. ಇದೀಗ, ಸಂತ್ರಸ್ತ ಯುವತಿಗೆ ಮೂರನೇ ಬಾರಿ ನೊಟೀಸ್ ಜಾರಿಯಾಗಿದೆ.
ಸಿಡಿ ಕಿಂಗ್ಪಿನ್ ಮನೆ ಮೇಲೆ ದಾಳಿ ಇತ್ತ, ಸಿಡಿ ಕೇಸ್‌ನ ಪ್ರಮುಖ ಆರೋಪಿ ನರೇಶ್ ಮನೆ ಮೇಲೆ ದಾಳಿ ನಡೆದಿದೆ. ಆತನ ಆಪ್ತ ಅರುಣ್ ಮನೆ ಮೇಲೂ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನರೇಶ್, ಅರುಣ್ ಮನೆಗಳಲ್ಲಿ SIT ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುತ್ತಿದೆ.
ಬೆಂಗಳೂರಿನ ಮಂಜುನಾಥ ನಗರದಲ್ಲಿರುವ ನರೇಶ್ ನಿವಾಸ ಹಾಗೂ ಲಗ್ಗೆರೆಯಲ್ಲಿರುವ ನರೇಶ್ ಆಪ್ತ ಅರುಣ್ ನಿವಾಸಗಳಲ್ಲಿ ಸರ್ಚ್ ವಾರಂಟ್ ಪಡೆದು ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.
ನರೇಶ್ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಆದರೆ, ಪ್ರಕರಣ ಬಯಲಾಗುವ ಕೆಲವೇ ದಿನಗಳ ಮುನ್ನ ಮನೆಗೆ ಬರುವುದನ್ನ ನಿಲ್ಲಿಸಿದ್ದ. ಇದಲ್ಲದೆ, ಮಂಜುನಾಥನಗರದ ತನ್ನ ಮನೆ ಮುಂದೆಯೇ ನರೇಶ್ ಬೈಕ್ ನಿಲ್ಲಿಸಿದ್ದ. ಈ ವೇಳೆ, ಎಸ್ಐಟಿ ತಂಡ ಕೇವಲ ಮನೆ ಮಾಲಿಕರನ್ನ ವಿಚಾರಿಸಿ ವಾಪಾಸ್ ಆಗಿದೆ. ಮನೆ ಖಾಲಿ ಮಾಡಿದ್ರಾ? ಯಾವಾಗ ಬರ್ತಿದ್ರು ಎಂಬಿತ್ಯಾದಿ ವಿವರವನ್ನು ಪಡೆದು ವಾಪಾಸ್ ಆಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ನಿರ್ಭಯಾ ಗೈಡ್ಲೈನ್ಸ್ ಉಲ್ಲಂಘನೆ ಆರೋಪದಡಿ ದೂರು ಇದೀಗ, ಪ್ರಕರಣ ಸಂಬಂಧ ನಿರ್ಭಯಾ ಗೈಡ್ಲೈನ್ಸ್ ಉಲ್ಲಂಘನೆ ಆರೋಪದಡಿ ದೂರು ದಾಖಲಿಸಲಾಗಿದೆ. ನಗರ ಪೊಲೀಸ್ ಆಯುಕ್ತರಿಗೆ ವಕೀಲ ಜಗದೀಶ್ ದೂರು ನೀಡಿದ್ದಾರೆ. ಯುವತಿಗೆ ಇದುವರೆಗೂ ಯಾವುದೇ ರಕ್ಷಣೆ ನೀಡಿಲ್ಲ. ಸರ್ಕಾರವೇ ಶಾಸಕ ರಮೇಶ್ ಜಾರಕಿಹೊಳಿ ಪರವಾಗಿ ನಿಂತಿದೆ. ಸಂತ್ರಸ್ತೆಯ ವಿಡಿಯೋ ಹೇಳಿಕೆ ಮೇಲೂ ಕ್ರಮ ಕೈಗೊಂಡಿಲ್ಲ. ರಮೇಶ್ ಜಾರಕಿಹೊಳಿ ದೂರಿಗೆ ಹೇಗೆ ಮನ್ನಣೆ ನೀಡಿದರೋ ಅದೇ ರೀತಿ ಯುವತಿಗೂ ಮನ್ನಣೆ ಕೊಡಬೇಕೆಂದು ಮನವಿ ಮಾಡುತ್ತೇನೆ ಎಂದು ವಕೀಲ ಜಗದೀಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಿರ್ಭಯಾ ಗೈಡ್ಲೈನ್ಸ್ ಪ್ರಕಾರ ಯುವತಿಗೆ ರಕ್ಷಣೆ ನೀಡಿ. ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದರೆ ರಕ್ಷಣೆ ನೀಡಬೇಕು. 24 ಗಂಟೆಯೊಳಗೆ ಎಫ್ಐಆರ್ ದಾಖಲಿಸಿಕೊಳ್ಳಬೇಕು. ಆದರೆ ಇದುವರೆಗೂ ಎಫ್ಐಆರ್ ದಾಖಲಿಸಿಕೊಂಡಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ವಕೀಲರು ದೂರು ಸಲ್ಲಿಸಿದ್ದಾರೆ. ಆಯುಕ್ತ ಕಮಲ್ ಪಂತ್ಗೆ ವಕೀಲ ಜಗದೀಶ್ರಿಂದ ದೂರು ಸಲ್ಲಿಕೆಯಾಗಿದೆ.
ಸಿಡಿ ವಿಚಾರ ಸದನದಲ್ಲಿ ಪ್ರಸ್ತಾಪಕ್ಕೆ ಕಾಂಗ್ರೆಸ್ ನಿರ್ಧಾರ ಸಿಡಿ ವಿಚಾರ ಸದನದಲ್ಲಿ ಪ್ರಸ್ತಾಪಕ್ಕೆ ಕಾಂಗ್ರೆಸ್ ನಿರ್ಧಾರ ಕೈಗೊಂಡಿದೆ. ನಾಡಿದ್ದು ಸಿಡಿ ವಿಚಾರ ಪ್ರಸ್ತಾಪಿಸಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಇಡೀ ದಿನ ಸಿಡಿ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿಯಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಶಾಸಕರ ಜೊತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಚರ್ಚೆ ನಡೆಸಿ ಹಿರಿಯ ಶಾಸಕರ ಅಭಿಪ್ರಾಯ ಪಡೆದಿದ್ದಾರೆ. ಸಿಡಿ ವಿಚಾರವಾಗಿ ಈವರೆಗೂ ಸುಮ್ಮನಿದ್ದ ಸಿದ್ದರಾಮಯ್ಯ ಕಾನೂನಾತ್ಮಕ ವಿಚಾರ ಸೇರಿದಂತೆ ಎಲ್ಲಾ ಆಯಾಮಗಳಿಂದ ಹಿರಿಯ ನಾಯಕರಿಂದ ಸಲಹೆ ಪಡೆದಿದ್ದಾರೆ.
ಇದನ್ನೂ ಓದಿ: ಮಾ.21ರಿಂದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ: ಮೆಜೆಸ್ಟಿಕ್ನಿಂದ ನಾಯಂಡಹಳ್ಳಿವರೆಗೆ ಸೇವೆ ಸ್ಥಗಿತ
Published On - 4:55 pm, Wed, 17 March 21