ಮಾ.21ರಿಂದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ: ಮೆಜೆಸ್ಟಿಕ್​ನಿಂದ ನಾಯಂಡಹಳ್ಳಿವರೆಗೆ ಸೇವೆ ಸ್ಥಗಿತ

ಸಿಗ್ನಲಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ. ಮೈಸೂರು ರಸ್ತೆ-ಕೆಂಗೇರಿ ವಿಸ್ತೃತ ಮಾರ್ಗದಲ್ಲಿ ಸಿಗ್ನಲಿಂಗ್ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಮಾ.21ರಿಂದ 28ರವರೆಗೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

ಮಾ.21ರಿಂದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ: ಮೆಜೆಸ್ಟಿಕ್​ನಿಂದ ನಾಯಂಡಹಳ್ಳಿವರೆಗೆ ಸೇವೆ ಸ್ಥಗಿತ
ಪ್ರಾತಿನಿಧಿಕ ಚಿತ್ರ
Follow us
|

Updated on: Mar 17, 2021 | 4:34 PM

ಬೆಂಗಳೂರು: ಸಿಗ್ನಲಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ. ಮೈಸೂರು ರಸ್ತೆ-ಕೆಂಗೇರಿ ವಿಸ್ತೃತ ಮಾರ್ಗದಲ್ಲಿ ಸಿಗ್ನಲಿಂಗ್ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಮಾ.21ರಿಂದ 28ರವರೆಗೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಜೊತೆಗೆ, ಮಾ.​ 21 ರಿಂದ 28ರವರೆಗೆ ಮೆಜೆಸ್ಟಿಕ್​ನಿಂದ ನಾಯಂಡಹಳ್ಳಿವರೆಗೆ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ.

ಮಾ.29ರಿಂದ ಪೂರ್ಣ ಪ್ರಮಾಣದಲ್ಲಿ ಮೆಟ್ರೋ ಸಂಚಾರ ಪುನರಾರಂಭಗೊಳ್ಳಲಿದೆ. ಆದರೆ, ಉಳಿದಂತೆ ಈ ದಿನಗಳಲ್ಲಿ ಮೆಜೆಸ್ಟಿಕ್​ನಿಂದ ಬೈಯಪ್ಪನಹಳ್ಳಿವರೆಗೆ ನೇರಳೆ ಮಾರ್ಗ ಹಾಗೂ ಹಸಿರು ಮಾರ್ಗದಲ್ಲಿ ಮೆಟ್ರೋ ಎಂದಿನಂತೆ ಸಂಚಾರ ಮಾಡಲಿದೆ. ಈ ಕುರಿತು ಬಿಎಂಆರ್​ಸಿಎಲ್​ನಿಂದ ಮಾಧ್ಯಮ ಪ್ರಕಟಣೆ ಬಿಡುಗಡೆಯಾಗಿದೆ. BMRCL PRESS RELEASE NEW

ಇದನ್ನೂಓದಿ: Darshan: ದರ್ಶನ್​ಗೆ ಆಸ್ಕರ್​ ಕೊಡಿ; ವೇದಿಕೆಯ ಮೇಲೆ ಬೇಡಿಕೆ ಇಟ್ಟ ರವಿಶಂಕರ್​!