AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬೈಕ್​ನಲ್ಲಿ ಸ್ಟಂಟ್ ಮಾಡಿದ ಹುಡುಗಿಯರಿಗೆ ಪೊಲೀಸರಿಂದ ಭರ್ಜರಿ ಗಿಫ್ಟ್! ಸರ್ಕಸ್ ಮಾಡಿದವರಿಗೆ ಸಂಕಷ್ಟ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಶಿವಾಂಗಿ ದಾಬಸ್, ಕುಸ್ತಿಪಟು ಸ್ನೇಹಾ ರಘುವಂಶಿ ಜತೆ ಬೈಕ್ ಮೇಲೆ ಕಸರತ್ತು ನಡೆಸಿದ್ದಾರೆ.

Viral Video: ಬೈಕ್​ನಲ್ಲಿ ಸ್ಟಂಟ್ ಮಾಡಿದ ಹುಡುಗಿಯರಿಗೆ ಪೊಲೀಸರಿಂದ ಭರ್ಜರಿ ಗಿಫ್ಟ್! ಸರ್ಕಸ್ ಮಾಡಿದವರಿಗೆ ಸಂಕಷ್ಟ
ಬೈಕ್ ಸ್ಟಂಟ್ ಮಾಡಿರುವ ವಿಡಿಯೋ ವೈರಲ್ ಆಗಿ ಪೊಲೀಸರಿಗೂ ತಲುಪಿತ್ತು!
Follow us
TV9 Web
| Updated By: ganapathi bhat

Updated on:Apr 06, 2022 | 7:04 PM

ಬೈಕ್​ನಲ್ಲಿ ಸ್ಟಂಟ್ ಮಾಡುತ್ತಿದ್ದ ಇಬ್ಬರು ಹುಡುಗಿಯರ ವಿರುದ್ಧ ಘಾಜಿಯಾಬಾದ್ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಬರೋಬ್ಬರಿ 28 ಸಾವಿರ ರೂಪಾಯಿಗಳ ದಂಡ ವಿಧಿಸಿದ್ದಾರೆ. ಹುಡುಗಿಯರು ಕೆಂಪು ಅಂಗಿ ತೊಟ್ಟುಕೊಂಡು, ಬುಲೆಟ್ ಬೈಕ್ ಮೇಲೆ ಸ್ಟಂಟ್ ಮಾಡುತ್ತಾ, ಸವಾರಿ ಮಾಡುತ್ತಿರುವ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿತ್ತು. ಅದನ್ನು ಗಮನಿಸಿದ ಪೊಲೀಸರು ಅವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಯುವ ಸಮುದಾಯಕ್ಕೆ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ.

ಹದಿಹರೆಯದ ವಯಸ್ಸಿನಲ್ಲಿ ಏನು ಮಾಡೋದು ಅಥವಾ ಏನು ಮಾಡುತ್ತಿದ್ದೇವೆ ಎಂಬ ಪರಿಜ್ಞಾನ ಇಲ್ಲದೆ ಕೆಲ ಯುವಕ/ಯುವತಿಯರು ವರ್ತಿಸುತ್ತಾರೆ. ನೂರಾರು ವಾಹನಗಳು ಚಲಿಸುವ ಮುಖ್ಯ ರಸ್ತೆಯಲ್ಲಿ, ಅದರಲ್ಲೂ ಹಾಡು ಹಗಲು ಟ್ರಾಫಿಕ್ ತುಂಬಿ ತುಳುಕುತ್ತಿರುವಾಗ ಕೂಡ ವಾಹನದ ಮೇಲೆ ಕುಳಿತು ಸರ್ಕಸ್ ಮಾಡಲು ಹೊರಡುತ್ತಾರೆ. ತಮ್ಮ ಮತ್ತು ಇತರರ ಜೀವದ ಬಗ್ಗೆ ಕಾಳಜಿ ಇಲ್ಲದಂತೆ ನಡೆದುಕೊಳ್ಳುತ್ತಾರೆ. ಇಲ್ಲಿ ನಡೆದಿರುವುದು ಕೂಡ ಅಂಥದ್ದೇ ಘಟನೆ.

ವೈರಲ್ ವಿಡಿಯೋದಲ್ಲಿ ಏನಿದೆ? ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಶಿವಾಂಗಿ ದಾಬಸ್, ಕುಸ್ತಿಪಟು ಸ್ನೇಹಾ ರಘುವಂಶಿ ಜತೆ ಬೈಕ್ ಮೇಲೆ ಕಸರತ್ತು ನಡೆಸಿದ್ದಾರೆ. ಸ್ನೇಹಾ ರಘುವಂಶಿ ಮುಂದೆ ಕುಳಿತು ಬೈಕ್ ಓಡಿಸುತ್ತಿದ್ದರೆ, ಹಿಂಬದಿಯಿಂದ ಶಿವಾಂಗಿ ದಾಬಸ್ ಸ್ನೇಹಾ ಭುಜದ ಮೇಲೆ ಕುಳಿತಿದ್ದಾರೆ. ಘಾಜಿಯಾಬಾದ್ ರಸ್ತೆಯಲ್ಲಿ ಶೂಟ್ ಮಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು.

ಘಾಜಿಯಾಬಾದ್ ಪೊಲೀಸರು ಈ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಸ್ನೇಹಾ ರಘುವಂಶಿ ತಾಯಿ ಮಂಜು ದೇವಿ ಅವರಿಗೆ 11,000 ರೂಪಾಯಿ ದಂಡ ವಿಧಿಸಿದ್ದಾರೆ. ಸ್ಟಂಟ್ ಮಾಡಲು ಉಪಯೋಗಿಸಿದ್ದ ಬೈಕ್​ನ ಮಾಲೀಕ ಸಂಜಯ್ ಕುಮಾರ್​ಗೆ 17,000 ರೂಪಾಯಿ ಫೈನ್ ಹಾಕಿದ್ದಾರೆ. ಬೈಕ್ ಓಡಿಸಿದ ಇಬ್ಬರು ಹುಡುಗಿಯರು ಕೂಡ ತಮ್ಮ 20ನೇ ವರ್ಷದ ಹೊಸ್ತಿಲಲ್ಲಿ ಇದ್ದಾರೆ. ಇಬ್ಬರಿಗೂ ಇತ್ತೀಚೆಗಷ್ಟೇ ಲರ್ನಿಂಗ್ ಲೈಸನ್ಸ್ ಸಿಕ್ಕಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ವಿಡಿಯೋವನ್ನು ಶನಿವಾರ, ಮಧುಬನ್ ಬಾಪುಧಾಮ್ ಬಳಿ ನಾವು ಚಿತ್ರೀಕರಿಸಿದ್ದೆವು. ಬಳಿಕ ಅದನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದೆವು. ಅದು ವೈರಲ್ ಆಗಿದ್ದಲ್ಲದೆ ಪೊಲೀಸ್​ರನ್ನೂ ತಲುಪಿತ್ತು ಎಂದು ಘಟನೆಯ ಬಗ್ಗೆ ಶಿವಾಂಗಿ ಮಾಹಿತಿ ನೀಡಿದ್ದಾರೆ. ಲೈಸನ್ಸ್ ಇಲ್ಲದೆ ವಾಹನ ಚಲಾಯಿಸಿದ್ದು, ಟ್ರಾಫಿಕ್ ನಿಯಮಗಳನ್ನು ಮೀರಿದ್ದು, ಅನುಮತಿ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಸ್ಟಂಟ್ ಮಾಡಿದ್ದು ಪ್ರಕರಣಗಳನ್ನು ಘಾಜಿಯಾಬಾದ್ ಎಸ್​ಪಿ (ಟ್ರಾಫಿಕ್) ರಮಾನಂದ್ ಕುಶ್ವಾಹ ತಿಳಿಸಿದ್ದಾರೆ.

ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನ ಮೇಲೆ ಹತ್ತಿ ಪುಶ್​ಅಪ್ಸ್ ಮಾಡಿದ ಯುವಕ; ಪೊಲೀಸರು ಕೊಟ್ರು ಭರ್ಜರಿ ಗಿಫ್ಟ್ Viral Video: ಅಡ್ಡಾದಿಡ್ಡಿ ಸ್ಕೂಟರ್​​ ಓಡಿಸಿದ ಯುವತಿ.. ಪ್ರಶ್ನಿಸಿದವನಿಗೆ ಧಮ್ಕಿ ಹಾಕಿ, ಮಧ್ಯ ಬೆರಳು ತೋರಿಸಿ ಪರಾರಿ!

Published On - 4:39 pm, Wed, 17 March 21