Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗರ್ಭಪಾತ ಅವಧಿಯ ಮಿತಿ ಹೆಚ್ಚಳದ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ ​; 24 ವಾರಗಳ ಭ್ರೂಣ ತೆಗೆಯಲು ವಿಶೇಷ ಸಂದರ್ಭದಲ್ಲಿ ಅನುಮತಿ

ಗರ್ಭಪಾತ ಕಾಯ್ದೆಗೆ ಒಮ್ಮೆಲೇ ಈ ತಿದ್ದುಪಡಿ ತಂದಿಲ್ಲ. ಇದರ ಬಗ್ಗೆ ಆಳವಾದ ಅಧ್ಯಯನ ನಡೆಸಲಾಗಿತ್ತು. ಜಾಗತಿಕವಾಗಿ ಈ ವಿಷಯಗಳಲ್ಲಿ ಯಾವ ನಿಯಮಗಳಿವೆ ಎಂಬುದನ್ನೂ ಪರಿಶೀಲನೆ ಮಾಡಿದ ಬಳಿಕವಷ್ಟೇ 20 ವಾರಗಳ ಮಿತಿಯನ್ನು 24ವಾರಗಳಿಗೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ತಿಳಿಸಿದ್ದಾರೆ.

ಗರ್ಭಪಾತ ಅವಧಿಯ ಮಿತಿ ಹೆಚ್ಚಳದ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ ​; 24 ವಾರಗಳ ಭ್ರೂಣ ತೆಗೆಯಲು ವಿಶೇಷ ಸಂದರ್ಭದಲ್ಲಿ ಅನುಮತಿ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on:Apr 06, 2021 | 4:53 PM

ದೆಹಲಿ: ಗರ್ಭಪಾತದ ಗರಿಷ್ಠ ಅವಧಿ ಮಿತಿ ಹೆಚ್ಚಿಸುವ ಮಸೂದೆ ರಾಜ್ಯಸಭೆಯಲ್ಲಿ ನಿನ್ನೆ ಅಂಗೀಕಾರಗೊಂಡಿದೆ. ಇಷ್ಟು ದಿನ ವಿಶೇಷ ಸಂದರ್ಭಗಳಲ್ಲಿ 20ವಾರಗಳವರೆಗಿನ ಗರ್ಭವನ್ನು ತೆಗೆಸಲು ಕಾನೂನಿನಲ್ಲಿ ಅವಕಾಶ ಇತ್ತು. ಅದರ ಮಿತಿಯನ್ನು 24 ವಾರಗಳಿಗೆ ಹೆಚ್ಚಿಸಲು ಕಳೆದ ವರ್ಷವೇ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಹಾಗೇ ಲೋಕಸಭೆಯಲ್ಲೂ ಮಸೂದೆ ಪಾಸ್​ ಆಗಿತ್ತು. ನಿನ್ನೆ ರಾಜ್ಯಸಭೆಯಲ್ಲೂ ಬಿಲ್​ ಪಾಸ್ ಆಗಿದೆ.

ವಿಶೇಷ ಸಂದರ್ಭಗಳಲ್ಲಿ, ಅಂದರೆ ಅತ್ಯಾಚಾರ ಸಂತ್ರಸ್ತೆಯರು ಗರ್ಭ ಧರಿಸಿದಾಗ, ರಕ್ತಸಂಬಂಧಿಗಳಿಂದಲೇ ಗರ್ಭಿಣಿಯಾದವರು, ಅಪ್ರಾಪ್ತೆಯರು-ಅಂಗವಿಕಲೆಯರು ಗರ್ಭ ಧರಿಸಿ ಸಂಕಷ್ಟಕ್ಕೀಡಾದಾಗ ಅವರು ಗರ್ಭಪಾತ ಮಾಡಿಸಿಕೊಳ್ಳಬೇಕಾದರೆ ಅದರ ಮಿತಿ 20 ವಾರಗಳು ಮಾತ್ರ ಇತ್ತು. ಅದಕ್ಕಿಂತಲೂ ಜಾಸ್ತಿಯಾಗಿದ್ದರೆ ಗರ್ಭ ತೆಗೆಸಲು ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಆದರೆ ಇದೀಗ ಪಾಸ್​ ಆಗಿರುವ ಮಸೂದೆ ಕಾಯ್ದೆಯಾದ ತಕ್ಷಣದಿಂದ ಮಿತಿ 24ವಾರಗಳಿಗೆ ಅಂದರೆ 6 ತಿಂಗಳವರೆಗೆ ಇರುತ್ತದೆ.

1971ರ ಮೆಡಿಕಲ್​ ಟರ್ಮಿನೇಶನ್​ ಆಫ್​ ಪ್ರೆಗ್ನೆನ್ಸಿ ಕಾಯ್ದೆಗೆ 2020ರಲ್ಲಿ ತರಲಾದ ಈ ತಿದ್ದುಪಡಿಗೆ ವರ್ಷದ ಹಿಂದೆಯೇ ಲೋಕಸಭೆಯಲ್ಲಿ ಒಪ್ಪಿಗೆ ಸಿಕ್ಕಿತ್ತು. ನಿನ್ನೆ ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಪಾಸ್ ಆಯಿತು. ಈ ಮಸೂದೆಯನ್ನು ರಾಜ್ಯಸಭೆಯ ಆಯ್ಕೆ ಸಮಿತಿಗೆ ಕಳಿಸಬೇಕು ಎಂಬ ನಿರ್ಣಯವನ್ನು ಕಾಂಗ್ರೆಸ್​ ನಾಯಕ ಪ್ರತಾಪ್​ ಸಿಂಗ್ ಬಾಜ್ವಾ ಮಂಡಿಸಿದರೂ ಅದಕ್ಕೆ ಹಿನ್ನಡೆಯಾಯಿತು. ಕೊನೆಯಲ್ಲಿ ಮಸೂದೆ ಪಾಸ್​ ಆಗಿದೆ ಎಂದು ರಾಜ್ಯಸಭೆಯ ಡೆಪ್ಯೂಟಿ ಚೇರ್​​ಮನ್​ ಹರ್ವಿನಾಶ್​ ನಾರಾಯಣ್​ ಸಿಂಗ್ ಘೋಷಿಸಿದರು.

ಗರ್ಭಪಾತ ಕಾಯ್ದೆಗೆ ಒಮ್ಮೆಲೇ ಈ ತಿದ್ದುಪಡಿ ತಂದಿಲ್ಲ. ಇದರ ಬಗ್ಗೆ ಆಳವಾದ ಅಧ್ಯಯನ ನಡೆಸಲಾಗಿತ್ತು. ಜಾಗತಿಕವಾಗಿ ಈ ವಿಷಯಗಳಲ್ಲಿ ಯಾವ ನಿಯಮಗಳಿವೆ ಎಂಬುದನ್ನೂ ಪರಿಶೀಲನೆ ಮಾಡಿದ ಬಳಿಕವಷ್ಟೇ 20 ವಾರಗಳ ಮಿತಿಯನ್ನು 24ವಾರಗಳಿಗೆ ಹೆಚ್ಚಿಸಲಾಗಿದೆ. ಮಹಿಳೆಯರ ಗೌರವ-ಘನತೆಗೆ ಧಕ್ಕೆ ತರುವ ಯಾವುದೇ ಕಾನೂನನ್ನೂ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಲ್ಲಿ ತರುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ತಿಳಿಸಿದ್ದಾರೆ.

ಯಾವುದೇ ಮಸೂದೆ ಮಂಡನೆಯಾದಾಗಲೂ ಅದನ್ನು ವಿರೋಧಿಸುವುದು ಕೆಲವು ಪಕ್ಷಗಳ, ನಾಯಕರ ಸಹಜ ಪ್ರವೃತ್ತಿ. ಕಾಂಗ್ರೆಸ್​ ಅಷ್ಟೇ ಅಲ್ಲ, ಉಳಿದ ಪಕ್ಷಗಳಾದ ಶಿವಸೇನಾ, ಎಐಟಿಸಿ, ಸಿಪಿಟಿ, ಸಿಪಿಐ ಎಂ, ಸಮಾಜವಾದಿ ಪಕ್ಷದ ಹಲವು ನಾಯಕರೂ ಸಹ ಬಿಲ್​​ನ್ನು ಆಯ್ಕೆ ಸಮಿತಿ ಪರಿಶೀಲನೆಗೆ ಕಳಿಸಲು ಒತ್ತಾಯಿಸಿದರು ಎಂದೂ ಸಚಿವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Viral Video: ಸೋಷಿಯಲ್ ಮೀಡಿಯಾಗಳಿಗೆ ಗುಡ್ ಬೈ ಹೇಳಿದ್ದೇಕೆ ಎಂದು ಅಮೀರ್ ಖಾನ್ ತಿಳಿಸಿದ್ದಾರೆ

13ವರ್ಷದ ಬಾಲಕಿಯ 8 ತಿಂಗಳ ಗರ್ಭ ತೆಗೆಸಲು ಅನುಮತಿ ನೀಡದ ಬಾಂಬೆ ಹೈಕೋರ್ಟ್​; ‘ಒಂದು ಮಗು..ಇನ್ನೊಂದು ಮಗುವಿಗೆ ಜನ್ಮ ನೀಡಲಿದೆ’ ಎಂದ ವಕೀಲ

Published On - 3:57 pm, Wed, 17 March 21

ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ
ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ
ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ