AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಿಂದ ಹೊರಟಿದ್ದ ವಿಮಾನದಲ್ಲಿ ಮಹಿಳೆಗೆ ಹೆರಿಗೆ; ಆಗಸದಲ್ಲಿ ಹುಟ್ಟಿದ ಪುಟ್ಟ ಮಗುವಿನ ಫೋಟೋ ಶೇರ್​ ಮಾಡಿದ ಇಂಡಿಗೋ

IndiGo: ಕಳೆದ ಅಕ್ಟೋಬರ್​​ನಲ್ಲಿ ಕೂಡ ಮಹಿಳೆಯೊಬ್ಬರು ಇಂಡಿಗೋ ಫ್ಲೈಟ್​​ನಲ್ಲಿ ಗಂಡುಮಗುವಿಗೆ ಜನ್ಮನೀಡಿದ್ದರು. ಅಂದು ವಿಮಾನ ದೆಹಲಿಯಿಂದ ಬೆಳಗಾವಿಗೆ ಬರುತ್ತಿತ್ತು. ಅಂದು ಆ ಮಹಿಳೆಗೆ ಇನ್ನೂ 9 ತಿಂಗಳು ಪೂರ್ತಿ ತುಂಬಿರಲಿಲ್ಲ.

ಬೆಂಗಳೂರಿನಿಂದ ಹೊರಟಿದ್ದ ವಿಮಾನದಲ್ಲಿ ಮಹಿಳೆಗೆ ಹೆರಿಗೆ; ಆಗಸದಲ್ಲಿ ಹುಟ್ಟಿದ ಪುಟ್ಟ ಮಗುವಿನ ಫೋಟೋ ಶೇರ್​ ಮಾಡಿದ ಇಂಡಿಗೋ
ಇಂಡಿಗೋ ಫ್ಲೈಟ್​​ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆಯೊಂದಿಗೆ ಸಿಬ್ಬಂದಿ
Lakshmi Hegde
|

Updated on: Mar 17, 2021 | 2:49 PM

Share

ಬೆಂಗಳೂರಿನಿಂದ ಜೈಪುರಕ್ಕೆ ತೆರಳುರುತ್ತಿದ್ದ ಇಂಡಿಗೋ ವಿಮಾನದಲ್ಲಿ ಮಾರ್ಗ ಮಧ್ಯೆಯೇ ಮಹಿಳೆಯೊಬ್ಬರು ಹೆಣ್ಣುಮಗುವಿಗೆ ಜನ್ಮನೀಡಿದ್ದಾರೆ. ಇಂಡಿಗೋ ವಿಮಾನ 6E-469ದಲ್ಲಿ ಈ ಮಹಿಳೆ ಪ್ರಯಾಣ ಮಾಡುತ್ತಿದ್ದರು. ಫ್ಲೈಟ್​ನಲ್ಲಿದ್ದ ವೈದ್ಯ ಡಾ. ಸುಬಾಹಾನಾ ನಜೀರ್​ ಮತ್ತು ವಿಮಾನ ಸಿಬ್ಬಂದಿ ಸೇರಿ ಅವರಿಗೆ ಸುಲಲಿತವಾಗಿ ಹೆರಿಗೆಯಾಗುವಂತೆ ನೋಡಿಕೊಂಡಿದ್ದಾರೆ. ಜೈಪುರಕ್ಕೆ ಬರುತ್ತಿದ್ದಂತೆ ಆ್ಯಂಬುಲೆನ್ಸ್​ ವ್ಯವಸ್ಥೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಇಂಡಿಗೋ ಏರ್​ಲೈನ್​ ತಿಳಿಸಿದೆ. ಇನ್ನು ಮಹಿಳೆಯ ಹೆರಿಗೆ ಮಾಡಿಸಿದ ಡಾ. ನಜೀರ್​ ಅವರು ಜೈಪುರ ಏರ್​​ಪೋರ್ಟ್​​ನಲ್ಲಿ ಇಳಿಯುತ್ತಿದ್ದಂತೆ ಅಲ್ಲಿನ ಇಂಡಿಗೋ ಸಿಬ್ಬಂದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. Thank You ಎಂದು ಬರೆಯಲಾಗಿದ್ದ ದೊಡ್ಡ ಕಾರ್ಡ್​ನ್ನೂ ನೀಡಿದ್ದಾರೆ. ಈ ಚಿತ್ರವನ್ನೂ ಇಂಡಿಗೋ ಬಿಡುಗಡೆ ಮಾಡಿದೆ. ಹಾಗೇ ತಾಯಿ-ಮಗು ಹಾಗೂ ಅವರೊಂದಿಗೆ ಸಿಬ್ಬಂದಿ, ವೈದ್ಯೆ ಇರುವ ಫೋಟೋವನ್ನೂ ಶೇರ್​ ಮಾಡಿದೆ.

ಇದೇ ಮೊದಲಲ್ಲ ಕಳೆದ ಅಕ್ಟೋಬರ್​​ನಲ್ಲಿ ಕೂಡ ಮಹಿಳೆಯೊಬ್ಬರು ಇಂಡಿಗೋ ಫ್ಲೈಟ್​​ನಲ್ಲಿ ಗಂಡುಮಗುವಿಗೆ ಜನ್ಮನೀಡಿದ್ದರು. ಅಂದು ವಿಮಾನ ದೆಹಲಿಯಿಂದ ಬೆಳಗಾವಿಗೆ ಬರುತ್ತಿತ್ತು. ಅಂದು ಆ ಮಹಿಳೆಗೆ ಇನ್ನೂ 9 ತಿಂಗಳು ಪೂರ್ತಿ ತುಂಬಿರಲಿಲ್ಲ. ಆಗ ಕೂಡ ಸುಲಲಿತವಾಗಿ ಹೆರಿಗೆಯಾಗಿತ್ತು ಮತ್ತು ತಾಯಿ-ಮಗು ಆರೋಗ್ಯವಾಗಿದ್ದಿದ್ದಾಗಿ ಇಂಡಿಗೋ ಪ್ರಕಟಣೆಯಲ್ಲಿ ತಿಳಿಸಿತ್ತು. ಆ ಮಹಿಳೆಗೆ ವಿಮಾನದ ಪ್ರಥಮ ಚಿಕಿತ್ಸೆ ವಿಭಾಗದ ಸಿಬ್ಬಂದಿ ಹೆರಿಗೆ ಮಾಡಿಸಿದ್ದರು. ಅಂದು ಪೈಲಟ್​ ತುರ್ತು ಭೂಸ್ಪರ್ಶಕ್ಕೆ ಮುಂದಾಗಿದ್ದರೂ, ಅಷ್ಟರಲ್ಲಾಗಲೇ ಆಕೆಯ ಹೆರಿಗೆಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರೂ ಸಹ ಈ ಬಗ್ಗೆ ಚರ್ಚಿಸಿದ್ದರು.

Indigo Flight

ಹೆರಿಗೆ ಮಾಡಿಸಿದ ವೈದ್ಯೆಗೆ ಧನ್ಯವಾದ ಸಲ್ಲಿಸಿದ ಇಂಡಿಗೋ ಸಿಬ್ಬಂದಿ

ಇದನ್ನೂ ಓದಿ: ಪ್ಲಾಸ್ಟಿಕ್ ತ್ಯಜಿಸಿದರೆ ಅದೇ ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆ; ಸತ್ರ ನ್ಯಾಯಾಧೀಶ ಉಮೇಶ್ ಅಡಿಗ ಅನಿಸಿಕೆ

Follow Us
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!