ಪ್ಲಾಸ್ಟಿಕ್ ತ್ಯಜಿಸಿದರೆ ಅದೇ ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆ; ಸತ್ರ ನ್ಯಾಯಾಧೀಶ ಉಮೇಶ್ ಅಡಿಗ ಅನಿಸಿಕೆ

ಅಮೇರಿಕ ಅಧ್ಯಕ್ಷರಾಗಿದ್ದ ಜಾನ್ ಎಫ್.ಕೆನಡಿ ಅವರು ಗ್ರಾಹಕರ ರಕ್ಷಣೆ ಕುರಿತು ಅಲ್ಲಿನ ಕಾಂಗ್ರೆಸ್ ಸದಸ್ಯರಿಗೆ 1962 ರ ಮಾರ್ಚ್ 15 ರಂದು ಪತ್ರ ಬರೆದಿದ್ದರು. ಅದಕ್ಕೂ ಮೂರು ದಶಕಗಳ ಪೂರ್ವದಲ್ಲಿಯೇ ಗ್ರಾಹಕರನ್ನು ದೇವರಾಗಿ ಕಾಣಬೇಕು. ಗ್ರಾಹಕರಿದ್ದರೆ ವ್ಯಾಪಾರ, ವ್ಯವಹಾರ ಎಂಬುದನ್ನು ಅರಿಯಬೇಕು ಎಂದು ಮಹಾತ್ಮ ಗಾಂಧೀಜಿಯವರು ಸಂದೇಶ ನೀಡಿದ್ದರು.

ಪ್ಲಾಸ್ಟಿಕ್ ತ್ಯಜಿಸಿದರೆ ಅದೇ ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆ; ಸತ್ರ ನ್ಯಾಯಾಧೀಶ ಉಮೇಶ್ ಅಡಿಗ ಅನಿಸಿಕೆ
ವಿಶ್ವ ಗ್ರಾಹಕರ ದಿನಾಚರಣೆಯಲ್ಲಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉಮೇಶ್ ಎಂ.ಅಡಿಗ
Follow us
sandhya thejappa
| Updated By: ಸಾಧು ಶ್ರೀನಾಥ್​

Updated on: Mar 17, 2021 | 2:46 PM

ಧಾರವಾಡ: ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾನೂನು ಮಾಪನಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ, ಜನಾದೇಶ, ಸಂಕಲ್ಪ ಸಂಸ್ಥೆಗಳ ಸಹಯೋಗದಲ್ಲಿ ಧಾರವಾಡ ತಾಲೂಕಿನ ನುಗ್ಗಿಕೇರಿ ಗ್ರಾಮದ ಬಳಿಯ ವಿದ್ಯಾ ಪಿ.ಹಂಚಿನಮನಿ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ವಿಶ್ವ ಗ್ರಾಹಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪ್ಲಾಸ್ಟಿಕ್ ಪ್ರದೂಷಣೆ ತಡೆಗಟ್ಟುವಿಕೆ (Tackling plastic pollution) ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉಮೇಶ್ ಎಂ.ಅಡಿಗ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉಮೇಶ್ ಎಂ.ಅಡಿಗ ಅವರು ಗ್ರಾಹಕರು ತಾವು ಖರೀದಿಸಿದ ವಸ್ತು, ಸಾಮಗ್ರಿಗಳ ಬಿಲ್ ಮತ್ತು ಅದರ ಬಳಕೆಯ ಗ್ಯಾರಂಟಿ ಅವಧಿಯನ್ನು ಖಚಿತಪಡಿಸಿಕೊಂಡು ರಕ್ಷಿಸಿಟ್ಟುಕೊಳ್ಳಬೇಕು ಎಂದು ಹೇಳಿದರು. ಗ್ರಾಹಕರು ತಾವು ಖರೀದಿಸಿದ ವಸ್ತು ಎಷ್ಟೇ ಮೌಲ್ಯದ್ದಾಗಿರಲಿ ಅದು ಸೂಕ್ತ ಬಾಳಿಕೆ ಬಾರದಿದ್ದರೆ ಗ್ರಾಹಕ ರಕ್ಷಣಾ ಕಾಯ್ದೆಯಡಿ ಪರಿಹಾರ ಪಡೆಯಲು ಸಾಕಷ್ಟು ಅವಕಾಶಗಳಿವೆ. ಇವುಗಳನ್ನು ಅರಿತು ಸದುಪಯೋಗ ಮಾಡಿಕೊಳ್ಳಬೇಕು. ಜೊತೆಗೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಪರಿಸರ ಮಾಲಿನ್ಯ ತಡೆಯಬೇಕು ಎಂದು ಹೇಳಿದರು.

ಪ್ಲಾಸ್ಟಿಕ್ ನಿರಾಕರಿಸಿದರೆ ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆಯಾದೀತು ಅಮೆರಿಕ ಅಧ್ಯಕ್ಷರಾಗಿದ್ದ ಜಾನ್ ಎಫ್.ಕೆನಡಿ ಅವರು ಗ್ರಾಹಕರ ರಕ್ಷಣೆ ಕುರಿತು ಅಲ್ಲಿನ ಕಾಂಗ್ರೆಸ್ ಸದಸ್ಯರಿಗೆ 1962 ರ ಮಾರ್ಚ್ 15 ರಂದು ಪತ್ರ ಬರೆದಿದ್ದರು. ಅದಕ್ಕೂ ಮೂರು ದಶಕಗಳ ಪೂರ್ವದಲ್ಲಿಯೇ ಗ್ರಾಹಕರನ್ನು ದೇವರಾಗಿ ಕಾಣಬೇಕು. ಗ್ರಾಹಕರಿದ್ದರೆ ವ್ಯಾಪಾರ, ವ್ಯವಹಾರ ಎಂಬುದನ್ನು ಅರಿಯಬೇಕು ಎಂದು ಮಹಾತ್ಮ ಗಾಂಧೀಜಿಯವರು ಸಂದೇಶ ನೀಡಿದ್ದರು.

1982 ರಿಂದ ಜಗತ್ತಿನಾದ್ಯಂತ ವಿಶ್ವ ಗ್ರಾಹಕರ ದಿನ ಆಚರಿಸಲಾಗುತ್ತಿದೆ. 1986 ರಲ್ಲಿ ಭಾರತದಲ್ಲಿ ಗ್ರಾಹಕರ ರಕ್ಷಣೆ ಕಾಯ್ದೆ ಜಾರಿಗೆ ಬಂದಿದೆ. ಕಾಲಕಾಲಕ್ಕೆ ಅದು ಪರಿಷ್ಕರಣೆಯಾಗುತ್ತಿದೆ. ನಿರ್ದಿಷ್ಟಪಡಿಸಿದ ಪ್ಲಾಸ್ಟಿಕ್ ಹೊರತು ಪಡಿಸಿ ಪುನರ್ ಬಳಕೆಯಾಗದ ಪ್ಲಾಸ್ಟಿಕ್ ಬಳಕೆ ನಿಷೇಧಿಸಲ್ಪಟ್ಟಿದೆ. ನಾವು ಮನೆಯಿಂದ ಹೊರಗೆ ತೆರಳುವಾಗ ಬಟ್ಟೆಯ ಕೈ ಚೀಲ ತೆಗೆದುಕೊಂಡು ಹೋಗುವುದನ್ನು ರೂಢಿಸಿಕೊಂಡು ಅಂಗಡಿಯವರಿಂದ ಪ್ಲಾಸ್ಟಿಕ್ ನಿರಾಕರಿಸಿದರೆ ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದರು.

ವಿವಿಧ ಪ್ರಕಾರದ ಮಾಪಕಗಳು, ಪ್ರಮಾಣಬದ್ಧ ಪ್ಯಾಕಿಂಗ್​ಗಳ ಪ್ರದರ್ಶನ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಮಾತನಾಡಿ ದೇಶದ ಆರ್ಥಿಕತೆ ಮೂರು ಟ್ರಿಲಿಯನ್ ಡಾಲರಿಗೆ ಏರುತ್ತಿದೆ. ಜಿಡಿಪಿ ವೃದ್ಧಿಯಾಗುತ್ತಿದೆ. ಈ ಬೆಳವಣಿಗೆಗೆ ಗ್ರಾಹಕರ ಕೊಡುಗೆ ಮಹತ್ವದ್ದಾಗಿದೆ. ಸಣ್ಣ ವಸ್ತುವಿನಿಂದ ಹಿಡಿದು ದೊಡ್ಡ ವಸ್ತುಗಳ ಖರೀದಿವರೆಗೆ ಪ್ರತಿಯೊಂದರ ಮೂಲಕ ಆರ್ಥಿಕತೆ ಕೊಡುಗೆ ನೀಡುತ್ತಿರುತ್ತೇವೆ. ಗ್ರಾಹಕರ ರಕ್ಷಣೆಗೆ ಇರುವ ಕಾಯ್ದೆಗಳನ್ನು ಅರಿತುಕೊಂಡು ಅನ್ಯಾಯವಾದಾಗ ಕಾನೂನು ಮೊರೆ ಹೋಗುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಜನಾದೇಶ ಸಂಸ್ಥೆ ಅಧ್ಯಕ್ಷ ಬಸವಪ್ರಭು ಹೊಸಕೇರಿ ಅವರು ಗ್ರಾಹಕ ಜಾಗೃತಿ ಕುರಿತ ವಿಶೇಷ ಉಪನ್ಯಾಸ ನೀಡಿದರು. ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ಎಸ್.ಚಿಣ್ಣನ್ನವರ, ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷ ಬಿ.ಎಂ.ಕುಂಬಾರ, ಸದಸ್ಯರಾದ ಪ್ರಭು ಹಿರೇಮಠ, ವಿಶಾಲಾಕ್ಷಿ ಬೋಳಶೆಟ್ಟಿ, ಹಂಚಿನಮನಿ ಕಾಲೇಜು ಪ್ರಾಚಾರ್ಯ ಡಾ.ಎಸ್.ಎ.ಜೋಷಿ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆ ಕಾನೂನು ಮಾಪನ ಇಲಾಖೆಯು ಆಯೋಜಿಸಿದ್ದ ವಿವಿಧ ಪ್ರಕಾರದ ಮಾಪಕಗಳು, ಪ್ರಮಾಣಬದ್ಧ ಪ್ಯಾಕಿಂಕ್​ಗಳ ಪ್ರದರ್ಶನಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಚಾಲನೆ ನೀಡಿದರು.

ಇದನ್ನೂ ಓದಿ

ಅನುದಾನ ಕಡಿತ ವಿರೋಧಿಸಿ ಸದನದಲ್ಲಿ ಬಾವಿಗಿಳಿದು ಜೆಡಿಎಸ್ ಸದಸ್ಯರ ಪ್ರತಿಭಟನೆ: ಸ್ಪೀಕರ್ ಕಾಗೇರಿ ಕೆಂಡಾಮಂಡಲ

ಬಾಪೂಜಿಯ ಆದರ್ಶಗಳನ್ನು ಸಾರುವ ಗಾಂಧೀ ಭವನ; ಫೋಟೋಗಳು ಇಲ್ಲಿವೆ