ಅನುದಾನ ಕಡಿತ ವಿರೋಧಿಸಿ ಸದನದಲ್ಲಿ ಬಾವಿಗಿಳಿದು ಜೆಡಿಎಸ್ ಸದಸ್ಯರ ಪ್ರತಿಭಟನೆ: ಸ್ಪೀಕರ್ ಕಾಗೇರಿ ಕೆಂಡಾಮಂಡಲ

ಇಸ್ರೇಲ್ ಮಾದರಿ ಯೋಜನೆಯ ಹಣ ಎಲ್ಲಿ ಹೋಯ್ತು? 157 ಕೋಟಿ ರೂಪಾಯಿ ಎಲ್ಲಿ ಹೋಗಿದೆ. ಹಿಂದೆ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಇಟ್ಟ ಹಣ ಇದು ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡರು ಸರ್ಕಾರಕ್ಕೆ ಪ್ರಶ್ನೆ ಕೇಳಿದ್ದಾರೆ.

ಅನುದಾನ ಕಡಿತ ವಿರೋಧಿಸಿ ಸದನದಲ್ಲಿ ಬಾವಿಗಿಳಿದು ಜೆಡಿಎಸ್ ಸದಸ್ಯರ ಪ್ರತಿಭಟನೆ: ಸ್ಪೀಕರ್ ಕಾಗೇರಿ ಕೆಂಡಾಮಂಡಲ
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
Follow us
preethi shettigar
| Updated By: ಸಾಧು ಶ್ರೀನಾಥ್​

Updated on: Mar 17, 2021 | 2:15 PM

ಬೆಂಗಳೂರು: ಬಜೆಟ್‌ನಲ್ಲಿ ಮೀಸಲಿಟ್ಟಿದ್ದ ಅನುದಾನ ಕಡಿತಕ್ಕೆ ವಿರೋಧಿಸಿ, ಸದನದ ಬಾವಿಗಿಳಿದು ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ನಿಮಗೆ ಹೇಳೋರು, ಕೇಳೋರು ಯಾರೂ ಇಲ್ಲವಾ? ಏನಿದು ಅಶಿಸ್ತು, ಸಾಮಾನ್ಯ ಪ್ರಜ್ಞೆ ಕೂಡ ನಿಮಗೆ ಇಲ್ವಲ್ಲಾ? ಎಂದು ಜೆಡಿಎಸ್ ಸದಸ್ಯರ ನಡೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಿಟ್ಟಾಗಿದ್ದಾರೆ.

ಇಸ್ರೇಲ್ ಮಾದರಿ ಯೋಜನೆಯ ಹಣ ಎಲ್ಲಿ ಹೋಯ್ತು? 157 ಕೋಟಿ ರೂಪಾಯಿ ಎಲ್ಲಿ ಹೋಗಿದೆ. ಹಿಂದೆ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಇಟ್ಟ ಹಣ ಇದು ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡರು ಸರ್ಕಾರಕ್ಕೆ ಪ್ರಶ್ನೆ ಕೇಳಿದ್ದಾರೆ. ಇನ್ನು ಈ ಪ್ರಶ್ನೆಗೆ ವಿಧಾನ ಸಭೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಉತ್ತರ ನೀಡಿದ್ದು, ರೈತರ ಬಗ್ಗೆ ನಮಗೂ ಕಾಳಜಿ ಇದೆ ‌ಸಿಎಂ ಬಿ. ಎಸ್ ಯಡಿಯೂರಪ್ಪ ಅವರ ಜತೆ ಚರ್ಚಿಸಿ, ಹಣದ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಮಲವಳ್ಳಿ ನೀರಾವರಿ ಯೋಜನೆಗೆ 200 ಕೋಟಿ ರೂಪಾಯಿ ನೀಡಿದ್ದರು.ಆ ಹಣ ಎಲ್ಲಿ ಹೋಯಿತೆಂದು ಶಾಸಕ ಅನ್ನದಾನಿ ಸದನದಲ್ಲಿ ಪ್ರಶ್ನೆ ಕೇಳಿದ್ದಾರೆ.

ಇದನ್ನೂ ಓದಿ:

ವಿಧಾನಸಭೆಯಲ್ಲಿ ಪ್ರಶ್ನೋತ್ತರ: ಆಶಾ ಕಾರ್ಯಕರ್ತೆಯರಿಗಾಗಿ 6 ಲಕ್ಷ ಸೀರೆ ಖರೀದಿಗೆ ಪ್ರಸ್ತಾವನೆ

Kerala Assembly Elections 2021: ಧರ್ಮಡಂ ವಿಧಾನಸಭಾ ಕ್ಷೇತ್ರದಲ್ಲಿ ಪಿಣರಾಯಿ ವಿಜಯನ್ ವಿರುದ್ಧ ಸ್ಪರ್ಧೆಗಿಳಿದ ವಾಳಯಾರ್ ಸಂತ್ರಸ್ತೆಯ ಅಮ್ಮ