ಎಸಿಬಿ ದಾಳಿ ನಂತರ.. 13 ದಿನದಿಂದ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಸೊನ್ನದ ನಾಪತ್ತೆ!
ಎಸಿಬಿ ದಾಳಿ ಮಾಹಿತಿ ತಿಳಿದು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಸೊನ್ನದ ನಾಪತ್ತೆಯಾಗಿದ್ದಾರೆ.

ಕೊಪ್ಪಳ: ಎಸಿಬಿ ದಾಳಿ ಮಾಹಿತಿ ತಿಳಿದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಸೊನ್ನದ ನಾಪತ್ತೆಯಾಗಿದ್ದಾರೆ. ಕಳೆದ 13 ದಿನದಿಂದ ಉಮಾದೇವಿ ಸೊನ್ನದ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಮಾರ್ಚ್ 3 ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೇಲೆ ದಾಳಿಯಾಗಿತ್ತು. ಬಂದ್ ಆಗಿರೋ ಖಾಸಗಿ ಶಾಲೆಯ ಡಿಪಾಸಿಟ್ ಹಣ ವಾಪಸ್ ನೀಡಲು ಎಸ್ಡಿಎ ಅರುಂಧತಿ ಬಳಿ ಹಣ ಕೊಡುವಂತೆ ಲಂಚ ಕೇಳಿದ್ದರು. ಈ ಸಮಯದಲ್ಲಿ ಎಸ್ಡಿಎ ಅರುಂಧತಿ ಎಸಿಬಿ ಬಲೆಗೆ ಬಿದ್ದಿದ್ದರು. ಈ ವಿಷಯ ತಿಳಿದ ಉಮಾದೇವಿ ಪರಾರಿಯಾಗಿದ್ದಾರೆ. ಸರ್ಕಾರ ನೀಡಿರುವ ಸಿಮ್ಕಾರ್ಡ್ನೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ನಾಪತ್ತೆಯಾಗಿದ್ದಾರೆ. ಎಸಿಬಿ ಅಧಿಕಾರಿಗಳು ಉಮಾದೇವಿ ಸೊನ್ನದ ಅವರನ್ನು ಹುಡುಕುತ್ತಿದ್ದಾರೆ. ಇದುವರೆಗೂ ಪ್ರಕರಣಕ್ಕೆ ಸಂಭಂದಿಸಿದಂತೆ 48 ಜನರನ್ನ ವಿಚಾರಣೆ ಮಾಡಲಾಗಿದೆ.
ಇದನ್ನೂ ಓದಿ: ರೇಷ್ಮೆ ಇಲಾಖೆ ಅಧಿಕಾರಿಯಿಂದ ಲಂಚ ಸ್ವೀಕಾರ: ಎಸಿಬಿ ದಾಳಿ ವೇಳೆ ಸತ್ಯ ಬಯಲು
ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಆರೋಪ: ಮಂಡ್ಯ, ಯಾದಗಿರಿಯಲ್ಲಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ



