ಜಾರಕಿಹೊಳಿ CD ಪ್ರಕರಣ: ನಿರ್ಭಯಾ ಮಾರ್ಗಸೂಚಿ ಉಲ್ಲಂಘನೆಯಾಗಿದೆ ಎಂದು ಪೊಲೀಸ್ ಆಯುಕ್ತರಿಗೆ ವಕೀಲರಿಂದ ದೂರು
Nirbhaya Guidelines | ರಮೇಶ್ ಜಾರಕಿಹೊಳಿ ದೂರಿಗೆ ಹೇಗೆ ಮನ್ನಣೆ ನೀಡಿದ್ದಿರೋ, ಅದೇ ರೀತಿ ಯುವತಿಗೂ ಮನ್ನಣೆ ಕೊಡಬೇಕು ಎಂದು ಮನವಿ ಮಾಡಿರುವ ವಕೀಲರಾದ ಜಗದೀಶ್, ಯುವತಿಗೆ ಲೈಂಗಿಕ ಕಿರುಕುಳ ಆಗಿದ್ದರೆ ನಿರ್ಭಾಯ ಗೈಡ್ ಲೈನ್ಸ್ ಪ್ರಕಾರ ತಕ್ಷಣ ಆಕೆಗೆ ರಕ್ಷಣೆ ನೀಡಬೇಕು ಎಂದಿದ್ದಾರೆ.
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ CD ಪ್ರಕರಣದಲ್ಲಿ ನಿರ್ಭಯಾ ಗೈಡ್ ಲೈನ್ಸ್ ಉಲ್ಲಂಘನೆಯಾಗಿದೆ ಎಂದು ನ್ಯಾಯವಾದಿ ಜಗದೀಶ್ ಅವರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಯುವತಿಗೆ ಇದುವರೆಗೂ ಯಾವುದೇ ರಕ್ಷಣೆ ನೀಡಿಲ್ಲ. ಸರ್ಕಾರವೇ ಶಾಸಕ ರಮೇಶ್ ಜಾರಕಿಹೊಳಿ ಪರವಾಗಿ ನಿಂತಿದೆ. ಸಂತ್ರಸ್ತೆಯ ವಿಡಿಯೋ ಹೇಳಿಕೆ ಮೇಲೂ ಕ್ರಮ ಕೈಗೊಂಡಿಲ್ಲ ಎಂದು ವಕೀಲರಾದ ಜಗದೀಶ್ ದೂರು ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ದೂರಿಗೆ ಹೇಗೆ ಮನ್ನಣೆ ನೀಡಿದ್ದಿರೋ, ಅದೇ ರೀತಿ ಯುವತಿಯ ದೂರಿಗೂ ಮನ್ನಣೆ ಕೊಡಬೇಕು ಎಂದು ಮನವಿ ಮಾಡಿರುವ ವಕೀಲರಾದ ಜಗದೀಶ್, ಯುವತಿಗೆ ಲೈಂಗಿಕ ಕಿರುಕುಳ ಆಗಿದ್ದರೆ ನಿರ್ಭಯಾ ಗೈಡ್ ಲೈನ್ಸ್ ಪ್ರಕಾರ ಯುವತಿಗೆ ರಕ್ಷಣೆ ನೀಡಬೇಕು. 24 ಗಂಟೆ ಒಳಗೆ ಎಫ್ಐಆರ್ ದಾಖಲಿಸಿಕೊಳ್ಳಬೇಕು. ಆದರೆ ಈ ಪ್ರಕರಣದಲ್ಲಿ ಈವರೆಗೂ ಎಫ್ಐಆರ್ ದಾಖಲಿಸಿಕೊಂಡಿಲ್ಲ ಎಂದು ಪೊಲೀಸ್ ಆಯುಕ್ತರಿಗೆ ದೂರು ವಕೀಲರಾದ ಜಗದೀಶ್ ದೂರು ನೀಡಿದ್ದಾರೆ.
ಇದನ್ನೂ ಓದಿ:
‘ಸಿಡಿ’ಗೇಡಿಗಳ ಸಂಚು: ಮಾಜಿ ಪತ್ರಕರ್ತರು ಸೂತ್ರಧಾರಿಗಳು, ಪಾತ್ರಧಾರಿಗಳು ಯಾರು ಎಂಬುದೇ ಇನ್ನೂ ಗೋಜಲು