Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಷ್ಮೆ ಇಲಾಖೆ ಅಧಿಕಾರಿಯಿಂದ ಲಂಚ ಸ್ವೀಕಾರ: ಎಸಿಬಿ ದಾಳಿ ವೇಳೆ ಸತ್ಯ ಬಯಲು

ಗ್ರಾಮ ಪಂಚಾಯತಿ ಸದಸ್ಯ ಜಯಣ್ಣ ಬಳಿ ಸಹಾಯಧನ ನೀಡಲು 10,000 ರೂಪಾಯಿ ಲಂಚ ಸ್ವೀಕಾರ ಮಾಡುವಾಗ ರೇಷ್ಮೆ ನಿರೀಕ್ಷಕ ಶಿವಕುಮಾರ್ ಸಿಕ್ಕಿ ಹಾಕಿಕೊಂಡಿದ್ದಾರೆ. ಎಸಿಬಿ ಡಿವೈಎಸ್​ಪಿ ಬಸವರಾಜ ಮತ್ತು ಪಿಐ ಪ್ರವೀಣ್ ನೇತೃತ್ವದ ದಾಳಿಯಲ್ಲಿ ಈ ಕೃತ್ಯ ಬೆಳಕಿಗೆ ಬಂದಿದೆ.

ರೇಷ್ಮೆ ಇಲಾಖೆ ಅಧಿಕಾರಿಯಿಂದ ಲಂಚ ಸ್ವೀಕಾರ: ಎಸಿಬಿ ದಾಳಿ ವೇಳೆ ಸತ್ಯ ಬಯಲು
ರೇಷ್ಮೆ ನಿರೀಕ್ಷಕ ಶಿವಕುಮಾರ್
Follow us
preethi shettigar
|

Updated on: Mar 16, 2021 | 5:00 PM

ಚಿತ್ರದುರ್ಗ: ರೇಷ್ಮೆ ಇಲಾಖೆ ಅಧಿಕಾರಿ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಗ್ರಾಮ ಪಂಚಾಯತಿ ಸದಸ್ಯ ಜಯಣ್ಣ ಬಳಿ ಸಹಾಯಧನ ನೀಡಲು 10,000 ರೂಪಾಯಿ ಲಂಚ ಸ್ವೀಕಾರ ಮಾಡುವಾಗ ರೇಷ್ಮೆ ನಿರೀಕ್ಷಕ ಶಿವಕುಮಾರ್ ಸಿಕ್ಕಿ ಹಾಕಿಕೊಂಡಿದ್ದಾರೆ. ಎಸಿಬಿ ಡಿವೈಎಸ್​ಪಿ ಬಸವರಾಜ ಮತ್ತು ಪಿಐ ಪ್ರವೀಣ್ ನೇತೃತ್ವದ ದಾಳಿಯಲ್ಲಿ ಈ ಕೃತ್ಯ ಬೆಳಕಿಗೆ ಬಂದಿದೆ.

ಸರ್ಕಾರಿ ಉದ್ಯೋಗದಲ್ಲಿರುವ ಅಧಿಕಾರಿಗಳು ತಮ್ಮ ಕೆಲಸವನ್ನು ಮಾಡಿಕೊಡಿ ಎಂದು ಬರುವ ಸಾರ್ವಜನಿಕರಿಂದ ಲಂಚ ಸ್ವೀಕರಿಸಿರುವ ಅನೇಕ ಉದಾಹರಣೆಗಳಿವೆ. ನೇರವಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಕೆಲ ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ. ಆದರೂ ಕೂಡ ಈ ರೀತಿ ಭ್ರಷ್ಟಾಚಾರ ಇನ್ನೂ ಕಡಿಮೆಯಾಗಿಲ್ಲ.

ಚಾಮರಾಜನಗರದಲ್ಲಿ ಲೇಬರ್‌ ಇನ್​ಸ್ಪೆಕ್ಟರ್​ ಹಾಗೂ ಕಂಪ್ಯೂಟರ್ ಆಪರೇಟರ್‌ ಎಸಿಬಿ ಬಲೆಗೆ: ಚಾಮರಾಜನಗರದಲ್ಲಿ ಮದುವೆ ಸಹಾಯಧನ ಬಿಡುಗಡೆಗೆ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೇಬರ್‌ ಇನ್​ಸ್ಪೆಕ್ಟರ್​ ಹಾಗೂ ಕಂಪ್ಯೂಟರ್ ಆಪರೇಟರ್‌ ಎಸಿಬಿ ಅಧಿಕಾರಿಗಳ ಕೈಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಸುಮಾರು 3 ಸಾವಿರ ರೂಪಾಯಿ ಲಂಚ ಸ್ವೀಕರಿಸ್ತಿದ್ದ ಲೇಬರ್‌ ಇನ್​ಸ್ಪೆಕ್ಟರ್ ಗೀತಾ ಹಾಗೂ ಕಂಪ್ಯೂಟರ್ ಆಪರೇಟರ್ ಮಾಲತಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಹೊರಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಮಾಲತಿ ಅವರು ಚೇತನ್ ಎಂಬುವವರ ಬಳಿ 3 ಸಾವಿರ ಲಂಚ ಸ್ವೀಕರಿಸುತ್ತಿದ್ದರು. ಈ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.

5 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಎಇಇ ಎಸಿಬಿ ಬಲೆಗೆ: ಇತ್ತ, 5 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ AEE ಎಸಿಬಿ ಬಲೆಗೆ ಬಿದ್ದಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಉಪವಿಭಾಗ ಕಚೇರಿಯಲ್ಲಿ ನಡೆದಿದೆ. ಮೆಸ್ಕಾಂ AEE ಬಿ.ಎಸ್.ಪ್ರಕಾಶ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೊಳವೆ ಬಾವಿಗೆ ಟಿಸಿ ಅಳವಡಿಕೆಗೆ 5,000 ರೂಪಾಯಿ ಲಂಚ ಕೊಡುವಂತೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ. ಹರೀಶ್ ಎಂಬುವವರ ಬಳಿ ಹಣ ಪಡೆಯುತ್ತಿದ್ದ ವೇಳೆ ಎಸಿಬಿ ಎಸ್‌.ಪಿ ಜಯಪ್ರಕಾಶ್ ನೇತೃತ್ವದ ತಂಡ ದಾಳಿ ನಡೆಸಿದೆ.

ಇದನ್ನೂ ಓದಿ: 

Bribe 2 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ED ಅಧಿಕಾರಿ CBI ವಶಕ್ಕೆ

ಮದುವೆ ಸಹಾಯಧನ ಬಿಡುಗಡೆಗೆ.. ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಗಳು ACB ಬಲೆಗೆ

ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ