ಕೊಠಡಿ ಇಲ್ಲದೇ ಶಾಲಾ ಆವರಣದಲ್ಲೇ ಪಾಠ ಕೇಳುತ್ತಿದ್ದ ಮಕ್ಕಳ ನೆರವಿಗೆ ನಿಂತ ಕಿಚ್ಚ ಸುದೀಪ್
ಹುಬ್ಬಳ್ಳಿ ನಗರದ ರಾಮನಗರದ ಶಾಲೆಯ ಆವರಣದಲ್ಲೇ ಪಾಠ ಕಲಿಯುತ್ತಿದ್ದ ಮಕ್ಕಳ ಕಷ್ಟವನ್ನು ಮಾಧ್ಯಮದಲ್ಲಿ ನೋಡಿದ ನಟ ಕಿಚ್ಚ ಸುದೀಪ್ ವಿದ್ಯಾರ್ಥಿಗಳ ನೆರವಿಗೆ ನಿಂತಿದ್ದಾರೆ.
ಹುಬ್ಬಳ್ಳಿ: ಶಾಲೆಯಲ್ಲಿನ ಮೇಜು ಹಾಗೂ ಬೆಂಚ್ಗಳನ್ನು ಹೊರಗಡೆ ಹಾಕಿದರೆ ನಾವು ಎಲ್ಲಿ ಕುಳಿತು ಪಾಠ ಕೇಳಬೇಕು. ನಮ್ಮನ್ನು ಓದಲು ಬಿಡಿ. ನಾನು ಚೆನ್ನಾಗಿ ಓದಿ ಪೊಲೀಸ್ ಆಗಬೇಕು ಎಂದು ಇದ್ದೇನೆ ಹೇಗಾದರೂ ಮಾಡಿ ನಮ್ಮ ಶಾಲೆಯನ್ನು ನಮಗೆ ಉಳಿಸಿಕೊಡಿ ಎಂಬ ಕನ್ನಡ ಸರ್ಕಾರಿ ಪ್ರಾಥಮಿಕ ಶಾಲೆ( ನಗರದ ಹರಿಜನ ಸರ್ಕಾರಿ ಅನುದಾನಿತ ಶಾಲೆ) ವಿದ್ಯಾರ್ಥಿ ಸಂಜನಾ ಅಳಲಿಗೆ ಮರುಗಿ ನಟ ಕಿಚ್ಚ ಸುದೀಪ್ ಮಕ್ಕಳ ಕಷ್ಟಕ್ಕೆ ನೆರವಾಗಿದ್ದಾರೆ.
ರಾಮನಗರ ಶಾಲೆಯ ಆವರಣದಲ್ಲೇ ಪಾಠ ಕಲಿಯುತ್ತಿದ್ದ ಮಕ್ಕಳ ಕಷ್ಟವನ್ನು ಮಾಧ್ಯಮದಲ್ಲಿ ನೋಡಿದ ನಟ ಕಿಚ್ಚಾ ಸುದೀಪ್, ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿಯಿಂದ ಸಹಾಯ ಮಾಡಿದ್ದಾರೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಸೊಸೈಟಿಯಿಂದ ಅಧ್ಯಕ್ಷರನ್ನು ಕಳುಹಿಸಿ ಮಕ್ಕಳು, ಶಿಕ್ಷಕರ ಜೊತೆ ಹಾಗೂ ಶಾಲಾ ಟ್ರಸ್ಟ್ ಜೊತೆ ಚರ್ಚೆ ನಡೆಸಿದ್ದಾರೆ. ಶಾಲೆಯ ಮುಂದಿನ ಸ್ಥಿತಿಯ ಕುರಿತು ಚರ್ಚಿಸಿ ಮಕ್ಕಳ ನೆರವಿಗೆ ನಿಂತಿದ್ದಾರೆ.
ರಾಮನಗರದ ಸರ್ಕಾರಿ ಅನುದಾನಿತ ಹರಿಜನ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ 1956 ರಲ್ಲಿ ಪ್ರಾರಂಭಗೊಂಡಿದೆ. ಶಾಲೆ ಜಾಗ ತಮ್ಮದೆಂದು ಗಾಂಧಿವಾಡ ಸೊಸೈಟಿ, ನ್ಯಾಯಲಯದಿಂದ ಆದೇಶ ತಂದಿತ್ತು. ದಿಢೀರ್ ಜಾಗ ಖಾಲಿ ಮಾಡಿದ ಹಿನ್ನೆಲೆಯಲ್ಲಿ ಮಕ್ಕಳು ಬೀದಿಗೆ ಬಿದ್ದಿದ್ದರು. ಪೊಲೀಸ್ ಭದ್ರತೆಯಲ್ಲಿ ಶಾಲೆ ಖಾಲಿ ಮಾಡಿಸಲಾಗಿತ್ತು. ಇದನ್ನು ಗಮನಿಸಿದ ಕಿಚ್ಚ ಸುದೀಪ್, ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ವತಿಯಿಂದ ನೆರವಿಗೆ ನಿಂತಿದ್ದಾರೆ.
ಶಾಲೆ ಉಳಿಸೋದಕ್ಕೆ ಸಂಪೂರ್ಣ ಸಹಾಯ: ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ರಮೇಶ ಕಿಟ್ಟಿ
ಶಾಲೆ ಉಳಿಸೋದಕ್ಕೆ ಸಂಪೂರ್ಣ ಸಹಾಯ ಮಾಡುತ್ತೇವೆ. ಅವರ ಕಾನೂನು ಹೋರಾಟಕ್ಕೂ ಸಹಾಯ ಬೆಂಬಲ ಕೊಡುತ್ತೇವೆ. ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆ ಆಗಬಾರದು. ಅದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತೇವೆ. ಬಾಡಿಗೆ ಕಟ್ಟಡ ಪಡೆದರೂ ಅದಕ್ಕೆ ಬೇಕಾದ ಹಣ ನೀಡುತ್ತೇವೆ. ಶಿಕ್ಷಣ ಸಂಸ್ಥೆ ಜಾಗದ ವ್ಯವಸ್ಥೆ ಮಾಡಿದ್ರೆ ಕಟ್ಟಣ ನಿರ್ಮಾಣಕ್ಕೂ ಸಹಾಯ ಮಾಡುತ್ತೇವೆ ಎಂದು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ರಮೇಶ ಕಿಟ್ಟಿ ಮಾತನಾಡಿದ್ದಾರೆ.
ಟಿವಿಯಲ್ಲಿ ಮಕ್ಕಳ ಕಷ್ಟ ಕಿಚ್ಚ ಸುದೀಪ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರೇ ನಮಗೆ ಹೇಳಿ ಕಳುಹಿಸಿದ್ದಾರೆ. ಮಾಚ್೯ 10 ರಂದು ಗಾಂಧಿವಾಡ ಸೊಸೈಟಿಯಿಂದ ಹುಬ್ಬಳ್ಳಿಯ ರಾಮನಗರದ ಹರಿಜನ ಪ್ರಾಥಮಿಕ ಶಾಲೆ ಹೊರಹಾಕಲಾಗಿತ್ತು. ಜಾಗೆ ತಮ್ಮದೆಂದು ಕೊಟ್೯ನಿಂದ ಆದೇಶ ತಂದಿತ್ತು. ಹೀಗಾಗಿ ಶಾಲೆಯ ಆವರಣದಲ್ಲೇ ಮಕ್ಕಳು ಶಿಕ್ಷಣ ಪಡೆಯುತ್ತಿದ್ದರು. ಮಾಧ್ಯಮಗಳಲ್ಲಿನ ವರದಿ ನೋಡಿ ಕಿಚ್ಚ ಸುದೀಪ್ ಸ್ಪಂದಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹೆಣ್ಣು ಮಕ್ಕಳ ಕನ್ನಡ ಪ್ರಾಥಮಿಕ ಶಾಲೆಯನ್ನು ಖಾಲಿ ಮಾಡಿಸಲು ಮುಂದಾದ ಹುಬ್ಬಳ್ಳಿಯ ಗಾಂಧಿವಾಡ ಸೊಸೈಟಿ
ಇದನ್ನೂ ಓದಿ: ರವಿ ಸರ್ ಬ್ಲ್ಯಾಕ್ ಡ್ರೆಸ್ ಹಾಕೋದೇಕೆ ಅನ್ನೋದನ್ನ ಬಿಚ್ಚಿಟ್ಟ ಕಿಚ್ಚ ಸುದೀಪ್
Published On - 1:50 pm, Wed, 17 March 21