ವಿಧಾನಸಭೆಯಲ್ಲಿ ಪ್ರಶ್ನೋತ್ತರ: ಆಶಾ ಕಾರ್ಯಕರ್ತೆಯರಿಗಾಗಿ 6 ಲಕ್ಷ ಸೀರೆ ಖರೀದಿಗೆ ಪ್ರಸ್ತಾವನೆ

ಆಶಾ ಕಾರ್ಯಕರ್ತೆಯರಿಗಾಗಿ 6 ಲಕ್ಷ ಸೀರೆಯನ್ನು ಖರೀದಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಸೀರೆಗಳನ್ನು ನೇರವಾಗಿ ನೇಕಾರರಿಂದ ಖರೀದಿ ಮಾಡಲು ಸರ್ಕಾರ ಚಿಂತನೆ ಮಾಡಿದೆ. ಆತ್ಮಹತ್ಯೆ ಮಾಡಿಕೊಂಡ ನೇಕಾರರಿಗೆ 2 ಲಕ್ಷ ರೂ. ಪರಿಹಾರ ಕೊಡಲಾಗ್ತಿದೆ ವಿಧಾನಸಭೆಯಲ್ಲಿ ಸಚಿವ ಶ್ರೀಮಂತ ಪಾಟೀಲ್ ಹೇಳಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ: ಆಶಾ ಕಾರ್ಯಕರ್ತೆಯರಿಗಾಗಿ 6 ಲಕ್ಷ ಸೀರೆ ಖರೀದಿಗೆ ಪ್ರಸ್ತಾವನೆ
ನೇಯ್ಗೆಯಲ್ಲಿ ತೊಡಗಿರುವ ವೃದ್ಧೆ
Follow us
| Updated By: ಸಾಧು ಶ್ರೀನಾಥ್​

Updated on:Mar 17, 2021 | 1:36 PM

ಬೆಂಗಳೂರು: ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪ ನಡೆಯುತ್ತಿದ್ದು ಈ ವೇಳೆ ಪಕ್ಷಗಳ ನಡುವೆ ಪ್ರಶ್ನೆ ಉತ್ತರಗಳ ಸ್ಪರ್ಧೆ ನಡೆಯುತ್ತಿದೆ. ಅನೇಕ ವಿಷಯಗಳು ಚರ್ಚೆಯಾಗುತ್ತಿವೆ. ಆಶಾ ಕಾರ್ಯಕರ್ತೆಯರಿಗಾಗಿ 6 ಲಕ್ಷ ಸೀರೆಯನ್ನು ಖರೀದಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಸೀರೆಗಳನ್ನು ನೇರವಾಗಿ ನೇಕಾರರಿಂದ ಖರೀದಿ ಮಾಡಲು ಸರ್ಕಾರ ಚಿಂತನೆ ಮಾಡಿದೆ. ಆತ್ಮಹತ್ಯೆ ಮಾಡಿಕೊಂಡ ನೇಕಾರರಿಗೆ 2 ಲಕ್ಷ ರೂ. ಪರಿಹಾರ ಕೊಡಲಾಗ್ತಿದೆ. ಕೆಲವು ಕಡೆ ಚೆಕ್ ಸಹ ಹಸ್ತಾಂತರ ಮಾಡಲಾಗಿದೆ ಎಂದು ವಿಧಾನಸಭೆಯಲ್ಲಿ ಜವಳಿ ಸಚಿವ ಶ್ರೀಮಂತ ಪಾಟೀಲ್ ಹೇಳಿದರು.

ಇದೇ ವೇಳೆ ನೇಕಾರರಿಗೆ ಐದು ಸಾವಿರ ರೂಪಾಯಿ ಪರಿಹಾರ ಕೊಡಿ. ಎಲ್ಲಾ ಕ್ಷೇತ್ರಗಳಲ್ಲೂ ನೇಕಾರರು ಇದ್ದಾರೆ ರೈತರಿಗೆ ಪರಿಹಾರ ಕೊಡಿ ನಮ್ಮ ಆಕ್ಷೇಪ ಇಲ್ಲ, ಆದರಂತೆ ನೇಕಾರರಿಗೂ ಪರಿಹಾರ ಕೊಡಿ ಎಂದು ಶಾಸಕ ವೆಂಕಟರಮಣಯ್ಯ ಡಿಮ್ಯಾಂಡ್ ಮಾಡಿದ್ದಾರೆ. ಮಾತು ಮುಂದುವರೆಸಿ ಶಾಲೆಗಳಿಗೆ ಸಮವಸ್ತ್ರ ಸಹ ನೇಕಾರರಿಂದಲೇ ಖರೀದಿ ಮಾಡಿ ಎಂದು ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ ಕೈಮಗ್ಗ ನೇಕಾರರು ಬಹಳ ಸಂಕಷ್ಟದಲ್ಲಿ ಇದ್ದಾರೆ. ರೈತರು, ನೇಕಾರರು ಎರಡು ಕಣ್ಣುಗಳಂತೆ ಎಂದು ಹೇಳುತ್ತಾರೆ. ಕೊವಿಡ್ ಸಂದರ್ಭದಲ್ಲಿ ನೇಕಾರರಿಗೆ ₹2,000 ಕೊಟ್ಟಿದ್ದಾರೆ. ಮಲ ತಾಯಿ ಧೋರಣೆ ಬೇಡ, ಹೆಚ್ಚು ಪರಿಹಾರ ಕೊಡಿ ಎಂದು ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಕೇಳಿಕೊಂಡಿದ್ದಾರೆ. ಇದಕ್ಕೆ ಉತ್ತರಿಸಿದ ಜವಳಿ ಸಚಿವ ಶ್ರೀಮಂತ ಪಾಟೀಲ್.. 1.50 ಲಕ್ಷ ರೂ.ವರೆಗೆ ನೇಕಾರರ ಸಾಲಮನ್ನಾ ಮಾಡಿದ್ದೇವೆ. ನೇಕಾರರು ಸಂಕಷ್ಟದಲ್ಲಿ ಇದ್ದರೆ ಅವರಿಗೆ ಸಹಕಾರ ಸಂಘಗಳಿಂದ ಸಾಲ ಸಿಗುವಂತೆ ಮಾಡಿದ್ದೇವೆ. ಪ್ರತಿವರ್ಷ ₹2,000 ಕೊಡ್ತೇವೆ, ಅದು ಮುಂದುವರಿಯುತ್ತೆ ಎಂದು ಸಿದ್ದು ಸವದಿ ಪ್ರಶ್ನೆಗೆ ಜವಳಿ ಸಚಿವ ಶ್ರೀಮಂತ ಪಾಟೀಲ್ ಉತ್ತರಿಸಿದ್ರು.

ಇದನ್ನೂ ಓದಿ: ಜವಳಿ ಸಚಿವರ ತವರು ಜಿಲ್ಲೆಯಲ್ಲೇ ನೇಕಾರರಿಗೆ ಸಂಕಷ್ಟ, ಸಾಂತ್ವನ ಹೇಳಬೇಕಿದ್ದ ಸಚಿವರೇ ನಾಪತ್ತೆ

Published On - 1:35 pm, Wed, 17 March 21

 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ