ದಾವಣಗೆರೆಯಲ್ಲಿ ನಿರ್ಮಾಣಗೊಂಡಿದೆ ಬಾಪೂಜಿಯ ಜೀವನಾದರ್ಶಗಳನ್ನು ಸಾರುವ ಗಾಂಧೀ ಭವನ
ಮಹಾತ್ಮ ಗಾಂಧೀಜಿಯವರ ಜೀವನಾದರ್ಶಗಳನ್ನು ಸಾರಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಗಾಂಧೀ ಭವನ ನಿರ್ಮಿಸಲಾಗಿದೆ. ಇಂದಿನ ಯುವ ಪೀಳಿಗೆ ಗಾಂಧೀಜಿಯವರ ಬಗ್ಗೆ ತಿಳಿದುಕೊಳ್ಳದೆ ಇರುವುದರಿಂದ ಯುವಕರ ಉಪಯೋಗಕ್ಕಾಗಿ ಗಾಂಧೀ ಭವನ ನಿರ್ಮಿಸಲಾಗಿದ್ದು, ಅಲ್ಲಿರುವ ಸುಂದರ ಕಲಾಕೃತಿಗಳು ಗಮನ ಸೆಳೆಯುತ್ತಿವೆ.

ದಾವಣಗೆರೆ: ಇಂದಿನ ಯುವ ಪೀಳಿಗೆ ಮಹಾತ್ಮ ಗಾಂಧೀಜಿಯವರನ್ನೇ ಮರೆತರು ಆಶ್ವರ್ಯ ಪಡಬೇಕಿಲ್ಲ. ಇದೇ ಕಾರಣಕ್ಕೆ ನೆಚ್ಚಿನ ಅಜ್ಜನ ದರ್ಶನ ಹಾಗೂ ಮುಂದಿನ ಜನಾಂಗಕ್ಕೆ ಈ ಮೇರು ವ್ಯಕ್ತಿತ್ವದ ಪರಿಚಯಕ್ಕೆ ವೇದಿಕೆ ರೆಡಿಯಾಗಿದೆ. ಈ ಸುಂದರ ಲೋಕಕ್ಕೆ ಬಂದರೆ ಸಾಕು ಮಹಾತ್ಮನ ಬಗ್ಗೆ ಇಂಚಿಂಚು ಅರ್ಥ ಮಾಡಿಸುವ ಕಾರ್ಯ ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯಲ್ಲಿ ನಡೆಯಲು ಸಿದ್ಧವಾಗುತ್ತಿದೆ.
ಮಹಾತ್ಮ ಗಾಂಧೀಜಿಯವರ ಜೀವನಾದರ್ಶಗಳನ್ನು ಸಾರಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಗಾಂಧೀ ಭವನ ನಿರ್ಮಿಸಲಾಗಿದೆ. ಇಂದಿನ ಯುವ ಪೀಳಿಗೆ ಗಾಂಧೀಜಿಯವರ ಬಗ್ಗೆ ತಿಳಿದುಕೊಳ್ಳದೆ ಇರುವುದರಿಂದ ಯುವಕರ ಉಪಯೋಗಕ್ಕಾಗಿ ಗಾಂಧೀ ಭವನ ನಿರ್ಮಿಸಲಾಗಿದ್ದು, ಅಲ್ಲಿರುವ ಸುಂದರ ಕಲಾಕೃತಿಗಳು ಗಮನ ಸೆಳೆಯುತ್ತಿವೆ. ನಗರದ ರಾಮನಗರದಲ್ಲಿರುವ ಮೂರು ಕೋಟಿ ವೆಚ್ಚದ ಗಾಂಧೀ ಭವನ ಒಂದು ಎಕರೆಯಲ್ಲಿ ಸುಂದರ ಕಲಾಕೃತಿಗಳಿಂದ, ವೈಭವದಿಂದ ಕಂಗೊಳಿಸುತ್ತಿದೆ. ಗಾಂಧೀ ಭವನದಲ್ಲಿ ಗಾಂಧೀಜಿಯವರ ಜೀವನ ಚರಿತ್ರೆ ತಿಳಿದುಕೊಳ್ಳ ಬಯಸುವವರು ಪುಸ್ತಕಗಳ ಸಹಾಯದಿಂದ ತಿಳಿದುಕೊಳ್ಳಲು ಸುಂದರ ಗ್ರಂಥಾಲಯ, ಮ್ಯೂಸಿಯಂ, ಸುಂದರ ಸಭಾಂಗಣ, ಕೆಂಪು ಹಂಚಿನಿಂದ ನಿರ್ಮಾಣ ಮಾಡಿರುವ ಮೇಲ್ಛಾವಣಿ ಆಕರ್ಷಿಸುತ್ತಿದೆ.
ವಿವಿಧ ಕಲಾಕೃತಿಗಳು ನಿರ್ಮಾಣ ಕೆಂಪು ಹಂಚಿನ ಭವನದ ಸುತ್ತಲು ಹಸಿರು ಹೊದಿಕೆಯ ಭವ್ಯ ಉದ್ಯಾನವನವಿದ್ದು, ಇದರ ಮಧ್ಯೆ ಗಾಂಧೀಜಿ ಧ್ಯಾನದಲ್ಲಿ ಮಗ್ನರಾಗಿರುವ ಕಲಾಕೃತಿ ಕಾಣಬಹುದಾಗಿದೆ. ಗಾಂಧೀ ಭವನದಲ್ಲಿ ಬಾಪು ನಡೆಸಿದ ದಂಡಿ ಯಾತ್ರೆಯ ಕಲಾಕೃತಿ, ಮಕ್ಕಳನ್ನು ಓದಿಸುತ್ತಿರುವುದು, ರಾಷ್ಟ್ರದ ನೇತಾರರನ್ನು ಪುಟಾಣಿಯವರು ಮುನ್ನಡೆಸುವುದು, ಸಾಹಾಯಕಿಯರೊಂದಿಗೆ ಗಾಂಧೀಜಿಯವರು ನಡೆದು ಸಾಗುತ್ತಿರುವುದು, ಗಾಂಧೀಜಿ ಹಾಗು ಮಡದಿ ಕಸ್ತೂರಿ ಬಾರವರು ಜೊತೆಯಲ್ಲಿ ಕೂತಿರುವುದು, ಗಾಂಧೀಜಿ ಚರಕ ತಿರುಗಿಸುತ್ತಿರುವ ಕಲಾಕೃತಿಗಳಿವೆ. ಇನ್ನು ಭವನದ ಒಳಭಾಗದಲ್ಲಿರುವ ಗ್ರಾನೈಟ್ ಕಲ್ಲಿನಿಂದ ಭವ್ಯ ಪ್ರತಿಮೆ ಸೇರಿದಂತೆ ಒಟ್ಟು 22 ಲಕ್ಷ ಮೌಲ್ಯದ ಪ್ರತಿಮೆಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಅಲ್ಲದೆ ಸತ್ಯ ಮೇವ ಜಯತೆ ಎಂಬ ಬರಹಗಳು ಪ್ರತಿಯೊಬ್ಬರನ್ನು ಸ್ವಾಗತಿಸುತ್ತಿದ್ದು, ಈ ಕಲಾಕೃತಿಗಳನ್ನು ಶಿವಮೊಗ್ಗ ಮೂಲದ ಕಲಾವಿದರಾದ ಪರಶುರಾಮ ಹಾಗು ಹೊನ್ನಮ್ಮನವರು ಸೇರಿದ್ದಂತೆ ಅವರ ಸಹಾಯಕರು ನಿರ್ಮಿಸಿದ್ದಾರೆ.
ಗಾಂಧೀಯವರ ತತ್ವಾದರ್ಶಗಳನ್ನು ಸಾರುವ ಉದ್ದೇಶದಿಂದ ಈ ಭವನವನ್ನು ನಿರ್ಮಾಣ ಮಾಡಲಾಗಿದ್ದು, ಯುವಕರು ಗಾಂಧೀಜಿಯವರ ಬಗ್ಗೆಯ ಜ್ಞಾನ ಭಂಡಾರ ಪಡೆಯುವುದು ಖಚಿತ. ಮಾನವೀಯ ಮೌಲ್ಯಗಳೇ ಕಣ್ಮರೆ ಆಗುತ್ತಿರುವ ಇಂದಿನ ದಿನಗಳಲ್ಲಿ ಮೌಲ್ಯಾಧಾರಿತ ಜೀವನ ನಡೆಸಿ ಜಗತ್ತಿಗೆ ಮಾದರಿಯಾದ ಮಹಾ ಪುರುಷನ ಜೀವನ ಪಯಣವನ್ನು ಇಲ್ಲಿ ಕಟ್ಟಿಕೊಡಲಾಗಿದೆ.
ಫೋಟೋಗಳು ಇಲ್ಲಿವೆ
ಬಾಪೂಜಿಯ ಆದರ್ಶಗಳನ್ನು ಸಾರುವ ಗಾಂಧೀ ಭವನ; ಫೋಟೋಗಳು ಇಲ್ಲಿವೆ
ಇದನ್ನೂ ಒದಿ
ಏಸಿ, ಟೀವಿ ಸೇರಿದಂತೆ ವಿವಿಧ ಗೃಹೋಪಯೋಗಿ ವಸ್ತುಗಳ ಬೆಲೆ ಏಪ್ರಿಲ್ನಲ್ಲಿ ಏರಿಕೆ ಸಾಧ್ಯತೆ
ಮಗುವಿಗೆ ಮರುಜೀವ ಕೊಟ್ಟ ಹುಬ್ಬಳ್ಳಿ ಕಿಮ್ಸ್ ವೈದ್ಯರ ತಂಡಕ್ಕೆ ಎಲ್ಲರೂ ಸಲಾಂ ಅಂತಿದ್ದಾರೆ