ಏಸಿ, ಟೀವಿ ಸೇರಿದಂತೆ ವಿವಿಧ ಗೃಹೋಪಯೋಗಿ ವಸ್ತುಗಳ ಬೆಲೆ ಏಪ್ರಿಲ್​ನಲ್ಲಿ ಏರಿಕೆ ಸಾಧ್ಯತೆ

ವಿವಿಧ ವಸ್ತುಗಳ ಬೆಲೆಯಲ್ಲಿ ಏರಿಕೆ ಆಗಿರುವುದರಿಂದ ಏಸಿ, ಟಿವಿ ಮೊದಲಾದವುಗಳ ದರದಲ್ಲೂ ಈ ವರ್ಷದ ಏಪ್ರಿಲ್​ನಲ್ಲಿ ಮತ್ತೊಂದು ಸುತ್ತಿನ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ವಿವಿಧ ಕಂಪೆನಿಗಳು ತಿಳಿಸಿವೆ.

ಏಸಿ, ಟೀವಿ ಸೇರಿದಂತೆ ವಿವಿಧ ಗೃಹೋಪಯೋಗಿ ವಸ್ತುಗಳ ಬೆಲೆ ಏಪ್ರಿಲ್​ನಲ್ಲಿ ಏರಿಕೆ ಸಾಧ್ಯತೆ
ಏಸಿ, ಟಿವಿ (ಸಂಗ್ರಹ ಚಿತ್ರ)
Follow us
Srinivas Mata
|

Updated on: Mar 17, 2021 | 1:12 PM

ಹೆಚ್ಚುತ್ತಿರುವ ಪದಾರ್ಥಗಳ ಬೆಲೆಯ ಕಾರಣಕ್ಕೆ ಈ ವರ್ಷದ ಬೇಸಿಗೆಯಲ್ಲಿ ವಿವಿಧ ಕಂಪೆನಿಗಳು ಏರ್​ಕಂಡೀಷನರ್​ಗಳು, ಟೆಲಿವಿಷನ್ ಸೆಟ್​ಗಳಂಥ ವೈಟ್ ಗೂಡ್ಸ್​ಗಳ ಬೆಲೆಗಳನ್ನು ಮತ್ತೊಂದು ಸುತ್ತು ಏರಿಕೆ ಮಾಡುವ ಸಾಧ್ಯತೆ ಇದೆ. ಈ ವರ್ಷದ ಜನವರಿಯಲ್ಲಿ ಹಲವು ಕಂಪೆನಿಗಳು ಶೇಕಡಾ 4ರಿಂದ 8ರಷ್ಟು ಹೆಚ್ಚಳ ಮಾಡಿದ್ದವು. ಇದೀಗ ಏಪ್ರಿಲ್​ನಲ್ಲಿ ಇನ್ನೊಂದು ಸುತ್ತು ಬೆಲೆ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಮೋತಿಲಾಲ್ ಓಸ್ವಾಲ್ ಮಂಗಳವಾರ ಬಿಡುಗಡೆ ಮಾಡಿದ ಸಂಶೋಧನಾ ಅಧ್ಯಯನದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

“ವಿವಿಧ ಪದಾರ್ಥಗಳ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇಕಡಾ 30ರಿಂದ 60ರಷ್ಟು ಹೆಚ್ಚಳವಾಗಿದೆ. ಇನ್ನು ಕಳೆದ ತ್ರೈಮಾಸಿಕಕ್ಕೆ ಹೋಲಿಸಿದಲ್ಲಿ ಶೇಕಡಾ 5ರಿಂದ 15ರಷ್ಟು ಏರಿಕೆಯಾಗಿದೆ. ಉದಾಹರಣೆಗೆ ತಾಮ್ರ, ಉಕ್ಕು, ಅಲ್ಯೂಮಿನಿಯಂ ಕಳೆದ ತ್ರೈಮಾಸಿಕಕ್ಕಿಂತ ಕ್ರಮವಾಗಿ ಶೇ 15, ಶೇ 9 ಹಾಗೂ ಶೇ 5ರಷ್ಟು ಏರಿಕೆಯಾಗಿವೆ. ಪ್ಲಾಸ್ಟಿಕ್ ಬೆಲೆಯಲ್ಲೂ ಭರ್ಜರಿ ಏರಿಕೆ ಕಂಡಿದೆ,” ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

ನಿರಂತರವಾಗಿ ಪದಾರ್ಥಗಳ ಬೆಲೆಯಲ್ಲಿ ಏರಿಕೆ ಆಗುತ್ತಿರುವುದರಿಂದ ಮಾರ್ಚ್ ಕೊನೆ ಅಥವಾ ಏಪ್ರಿಲ್ ಮೊದಲ ಭಾಗದಲ್ಲಿ ದರ ಹೆಚ್ಚಳದ ಎಲ್ಲ ಸಾಧ್ಯತೆಗಳಿವೆ. ರೀಟೇಲ್ ಮಾರಾಟ ಪ್ರಮಾಣವು ಹೆಚ್ಚಾಗಬೇಕಿದೆ (ಅಥವಾ ಪ್ರಾಥಮಿಕ ಮಾರಾಟದೊಂದಿಗೆ ತಾಳೆಯಾಗಬೇಕು). ಆದರೆ ಡೀಲರ್​ಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಅದಲ್ಲೂ ಕೂಲಿಂಗ್ ಉತ್ಪನ್ನಗಳ ಬಗ್ಗೆ ವಿಶ್ವಾಸ ಅತ್ಯುತ್ತಮವಾಗಿದೆ. ಮಾರ್ಚ್ ಕೊನೆ ಹೊತ್ತಿಗೆ ವಿವಿಧ ಬ್ರ್ಯಾಂಡ್​ಗಳ ಪ್ರಾಥಮಿಕ ಮಾರಾಟ ಹೆಚ್ಚಾಗುವುದರಿಂದ ಏಪ್ರಿಲ್​ನಲ್ಲಿ ದರ ಏರಿಕೆಯಾಗಬಹುದು. ಇದೇ ಸನ್ನಿವೇಶ 2020ರ ಡಿಸೆಂಬರ್​ನಲ್ಲೂ ಆಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಓಪನ್ ಸೆಲ್ ಪ್ಯಾನೆಲ್​ಗಳ ಬೆಲೆ ಶೇ 35ರಷ್ಟು ಹೆಚ್ಚಳ ಜಾಗತಿಕ ಮಾರುಕಟ್ಟೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಓಪನ್ ಸೆಲ್ ಪ್ಯಾನೆಲ್​ಗಳ ಬೆಲೆಯು ಶೇ 35ರಷ್ಟು ಹೆಚ್ಚಳವಾಗಿರುವುದರಿಂದ ಎಲ್​ಇಡಿ ಟಿವಿಗಳ ಬೆಲೆಯಲ್ಲಿ ಏರಿಕೆ ಆಗಬಹುದು. ಒಂದು ಟಿವಿಯ ಬೆಲೆ ನಿರ್ಧಾರ ಆಗುವುದರಲ್ಲಿ ಶೇಕಡಾ 60ರಷ್ಟು ಬೆಲೆ ಓಪನ್ ಸೆಲ್ ಪ್ಯಾನೆಲ್​ಗೆ ಆಗುತ್ತದೆ. ಈ ಪದಾರ್ಥದ ಬೆಲೆಯು ಉತ್ಪನ್ನದ ವೆಚ್ಚದ ಮೇಲೆ ಪರಿಣಾಮಕಾರಿಯಾಗಿ ಆಗುತ್ತದೆ. ಪ್ಯಾನಾಸೋನಿಕ್, ಹೈಯರ್, ಥಾಮ್ಸನ್​ನಿಂದ ಈ ವರ್ಷದ ಏಪ್ರಿಲ್​ನಿಂದ ಬೆಲೆ ಏರಿಕೆ ಮಾಡುವುದಕ್ಕೆ ಚಿಂತನೆ ನಡೆದಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಹೆಚ್ಚುತ್ತಿರುವ ವೆಚ್ಚದ ಒತ್ತಡವು ವೈಟ್ ಗೂಡ್ಸ್ ಕಂಪೆನಿಗಳ ಲಾಭದ ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ.

ಕೋವಿಡ್- 19ಗೂ ಮುಂಚೆ ಆಮದು ಸುಂಕದ ಹೆಚ್ಚಳ, ಡಾಲರ್ ವಿರುದ್ಧ ರೂಪಾಯಿ ಮೌಲ್ಯದ ಕುಸಿತ ಇವೆಲ್ಲದರ ಹೊರತಾಗಿಯೂ ವಿವಿಧ ಬ್ರ್ಯಾಂಡ್​ಗಳು ಬೆಲೆ ಏರಿಕೆಯನ್ನು ಮಾಡಿರಲಿಲ್ಲ. ಇದರಿಂದಾಗಿ ಕಂಪೆನಿಗಳ ಲಾಭದ ಪ್ರಮಾಣವು ಕಡಿಮೆ ಆಗಿತ್ತು. ಆದರೆ ವೈಟ್​ಗೂಡ್ಸ್​ಗೆ ಬೇಕಾದ ಪದಾರ್ಥಗಳನ್ನು ಖರೀದಿ ಮಾಡುವುದರಲ್ಲಿ ಕಂಪೆನಿಗಳಿಗೆ ಆಯ್ಕೆಯಿತ್ತು. ಆದರೆ FY22ರಲ್ಲಿ ವೈಟ್​ಗೂಡ್ಸ್ ತಯಾರು ಮಾಡುವ ಕಂಪೆನಿಗಳು, ಅದರಲ್ಲೂ ಏಸಿಗಳನ್ನು ಉತ್ಪಾದಿಸುವ ಕಂಪೆನಿಗಳಿಗೆ ಅತಿ ದೊಡ್ಡ ಸವಾಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಬೇಸಿಗೆ ಋತುವಿನಲ್ಲಿ ನಡೆಯುವ ಮಾರಾಟದ ಸಂದರ್ಭದಲ್ಲಿ ಈ ಅಪಾಯಗಳನ್ನು ಸರಿತೂಗಿಸಬಹುದು ಎಂದು ಓಸ್ವಾಲ್ ತಿಳಿಸಿದೆ.

ಏಪ್ರಿಲ್​ನಲ್ಲಿ ಏಸಿಗಳ ಬೆಲೆಯಲ್ಲಿ ಮತ್ತೊಂದು ಸುತ್ತಿನ ಬೆಲೆ ಏರಿಕೆ ಇದರ ಜತೆಗೆ ಏರುತ್ತಿರುವ ತೈಲ ಬೆಲೆ ಕೂಡ ಸಾಗಣೆ ವೆಚ್ಚದ ಮೇಲೆ ಪ್ರಭಾವ ಬೀರುತ್ತಿದೆ. ಗ್ರಾಹಕ ಉಪಯೋಗಿ ವಸ್ತುಗಳನ್ನು ಉತ್ಪಾದಿಸುವ ಕಂಪೆನಿ ಎಲ್​ಜಿ ಹೇಳುವಂತೆ, ಜಾಗತಿಕ ಮಟ್ಟದಲ್ಲಿ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾದ್ದರಿಂದ ಈ ವರ್ಷದ ಜನವರಿಯಲ್ಲಿ ಏರ್​ಕಂಡೀಷನರ್​ಗಳ ದರದಲ್ಲಿ ಹೆಚ್ಚಳ ಮಾಡಲಾಗಿದೆ. ಏಪ್ರಿಲ್ ತಿಂಗಳಲ್ಲಿ ಏಸಿಗಳ ಬೆಲೆಯಲ್ಲಿ ಮತ್ತೊಂದು ಸುತ್ತಿನ ಬೆಲೆ ಏರಿಕೆ ಆಗಬಹುದು ಎಂದು ಪ್ಯಾನಾಸೋನಿಕ್​ನಿಂದ ತಿಳಿಸಲಾಗಿದೆ.

ಇದನ್ನೂ ಓದಿ: Penny Stocks: ಕೊರೊನಾ ಆತಂಕವಿದ್ದರೂ ಬಂಗಾರದ ಫಸಲು ನೀಡಿದ ಚಿಲ್ಲರೆ ಬೆಲೆಯ ಷೇರುಗಳು ಇವು..

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು